ಒಂದೇ ಕಾಲೇಜಿನ ಏಳು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ!! ಗಡಿನಾಡ ಕಾಸರಗೋಡಿನಲ್ಲಿ ಘಟನೆ -ಪ್ರಕರಣ ದಾಖಲು

ಒಂದೇ ಕಾಲೇಜಿನ ಸುಮಾರು ಏಳು ಜನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರೊಂದು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಗಡಿನಾಡ ಕಾಸರಗೋಡು ಬೇಕಲ ಎಂಬಲ್ಲಿ ಈ ಘಟನೆ ನಡೆದಿದ್ದು, ಮೂವರು ವಿದ್ಯಾರ್ಥಿನಿಯರು ದೂರು ನೀಡಿ ತಮಗಾದ ಅನ್ಯಾಯದ ವಿರುದ್ಧ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.

ಸದ್ಯ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಇತ್ತ ದೂರು ದಾಖಲಾದ ಮಾಹಿತಿ ತಿಳಿದ ಆರೋಪಿಗಳು ನಾಪತ್ತೆಯಾಗಿರುವ ಶಂಕೆಯೂ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply

Your email address will not be published.