ಮುಸ್ಲಿಂ ಸಹೋದರರ ಗೋ ಪ್ರೇಮಕ್ಕೆ ಇಡೀ ದ.ಕ ಜಿಲ್ಲೆಯೇ ಫಿದಾ!! ಸುಮಾರು ಹತ್ತು ವರ್ಷಗಳಿಂದ ವಿವಿಧ ತಳಿಗಳ ಗೋವುಗಳನ್ನು ಸಾಕಿ,ಸಲಹಿ ರಕ್ಷಿಸುತ್ತಿದೆ ಪುತ್ತೂರಿನ ಕುಟುಂಬ!!
ಇಡೀ ದೇಶದಲ್ಲೇ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿದ್ದರೂ ಹಲವೆಡೆಗಳಲ್ಲಿ ಎಗ್ಗಿಲ್ಲದೇ ಅಕ್ರಮವಾಗಿ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿರುವುದು ಬೇಸರದ ಸಂಗತಿ. ಆದರೆ ಇದಕ್ಕೆಲ್ಲಾ ತೀರಾ ವಿರುದ್ಧವಾಗಿದೆ ಇಲ್ಲೊಂದು ಮುಸ್ಲಿಂ ಸಹೋದರರ ಗೋ-ಪ್ರೇಮ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಲಪದವು ನೆಲ್ಲಿಕ್ಕಿಮಾರು ಎಂಬಲ್ಲಿನ ಮುಸ್ಲಿಂ ಕುಟುಂಬವೊಂದು ಪೂರ್ವಜರಿಂದ ಗೋ ಪ್ರೇಮ ಮೈಗೂಡಿಸಿಕೊಂಡು ಸುಮಾರು ಹತ್ತು ವರ್ಷಗಳಿಂದ ಜಾನುವಾರು ಸಾಕಣೆ ಮಾಡುವುದಲ್ಲದೆ ಅವುಗಳ ಬಗೆಗೆ ವಿಶೇಷ ಕಾಳಜಿ ವಹಿಸುತ್ತಿರುವುದನ್ನೇ ಹವ್ಯಾಸವಾಗಿ ರೂಢಿಸಿಕೊಂಡಿದ್ದಾರೆ. ಕೃಷಿ ಕುಟುಂಬದ ಉಮ್ಮರ್ ಜನಪ್ರಿಯ,ಎನ್.ಎಸ್. ಇಸುಬು …