ಮತ್ತೊಮ್ಮೆ ವಿಶ್ವದೆದುರು ಭಾರತದ ಶ್ರೇಷ್ಠತೆಯ ಅನಾವರಣ | ತ್ರಿವರ್ಣ ಧ್ವಜ ಹಿಡಿದು ಪ್ರಾಣ ಉಳಿಸಿಕೊಂಡ ಪಾಕಿಸ್ತಾನದ ವಿದ್ಯಾರ್ಥಿಗಳು !!

ಭಾರತದ ದೇಶಕ್ಕಿರುವ ಮಹಿಮೆ ಹಾಗೂ ತ್ರಿವರ್ಣ ಧ್ವಜಕ್ಕಿರುವ ಶ್ರೇಷ್ಠತೆ ಇಂದು ಇಡೀ ವಿಶ್ವದ ಕಣ್ಣೆದುರು ಮತ್ತೊಮ್ಮೆ ರಾರಾಜಿಸಿದೆ. ಶತ್ರು ದೇಶ ಕೂಡ ಭಾರತದ ಹೆಸರು ಹೇಳಿಕೊಂಡು ಸಾವಿನ ದವಡೆಯಿಂದ ಪಾರಾಗಿರುವ ಘಟನೆ ಜಗತ್ತನ್ನೇ ಹುಬ್ಬೇರುವಂತೆ ಮಾಡಿದೆ. ಅದು ನಮ್ಮ ದೇಶಕ್ಕಿರುವ ನಿಜವಾದ ತಾಕತ್ತು. ಅದು ಇಂದು ಮತ್ತೊಮ್ಮೆ ಸಾಬೀತಾಗಿದೆ.

ಭಾರತದ ಮಣ್ಣಿನಲ್ಲಿ ಜೀವಿಸಿ, ಭಾರತದ ಅನ್ನವನ್ನು ಉಂಡು ಭಾರತದ ಬೆನ್ನಿಗೆ ಚೂರಿ ಹಾಕುವಲ್ಲಿ ಕೆಲವು ಭಾರತೀಯರೇ ಎದ್ದು ಕಾಣುತ್ತಿರುವಾಗ, ಶತ್ರು ರಾಷ್ಟ್ರ ಎನಿಸಿಕೊಂಡಿರುವ ಪಾಕಿಸ್ತಾನಿಗಳು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹೇಗೆ ಭಾರತದ ಧ್ವಜವನ್ನು ಬಳಕೆ ಮಾಡಿಕೊಂಡರು ಎನ್ನುವುದನ್ನು ಈ ವಿದ್ಯಾರ್ಥಿಗಳ ಬಾಯಲ್ಲಿಯೇ ಕೇಳಿದರೆ ಒಳ್ಳೆಯದು.

ಹೌದು. ಯುದ್ಧಪೀಡಿತ ಉಕ್ರೇನ್‌ನಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು, ಪ್ರಜೆಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ದೇಶಗಳಿಗೆ ವಾಪಸ್‌ ಆಗಲು ಶತಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜ ಪಾಕಿಸ್ತಾನ ಮತ್ತು ಟರ್ಕಿಶ್‌ ವಿದ್ಯಾರ್ಥಿಗಳು ಯುದ್ಧಪೀಡಿತ ಪ್ರದೇಶದಿಂದ ಪಾರಾಗಲು ನೆರವಾಗಿದೆ.

ಭಾರತದ ಧ್ವಜ ಕೇವಲ ಭಾರತೀಯರಿಗಷ್ಟೇ ಅಲ್ಲ, ನೆರೆಯ ರಾಷ್ಟ್ರಗಳ ಪ್ರಜೆಗಳಿಗೂ ಉಕ್ರೇನ್‌ ಗಡಿ ಭಾಗಗಳನ್ನು ಸುರಕ್ಷಿತವಾಗಿ ದಾಟಲು ಸಹಕಾರಿಯಾಗಿದೆ.
ಉಕ್ರೇನ್‌ನಿಂದ ರೊಮೇನಿಯಾದ ಬುಕಾರೆಸ್ಟ್ ನಗರಕ್ಕೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳು, ರಾಷ್ಟ್ರೀಯ ತ್ರಿವರ್ಣ ಧ್ವಜವು ತಮಗೆ ಮತ್ತು ಕೆಲವು ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳಿಗೆ ಯುದ್ಧ ಪೀಡಿತ ದೇಶದ ವಿವಿಧ ಚೆಕ್‌ಪೋಸ್ಟ್‌ಗಳನ್ನು ಸುರಕ್ಷಿತವಾಗಿ ದಾಟಲು ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.

ಭಾರತೀಯ ವಿದ್ಯಾರ್ಥಿಗಳು ಮಾರುಕಟ್ಟೆಯಲ್ಲಿ ಕಲರ್‌ ಸ್ಪ್ರೈ ಮತ್ತು ಕರ್ಟೈನ್‌ ಖರೀದಿಸಿ ಸ್ವತಃ ತಾವೇ ಧ್ವಜದ ಚಿತ್ರವನ್ನು ಬಿಡಿಸಿದ್ದಾರೆ. ವಿದ್ಯಾರ್ಥಿಗಳೇ ರೂಪಿಸಿದ ತ್ರಿವರ್ಣ ಧ್ವಜ ಮಾದರಿ, ಅವರು ಗಡಿ ದಾಟಲು ಸಹಾಯವಾಗಿದೆ. ಈ ಕುರಿತು ಅನುಭವವನ್ನೂ ಹಂಚಿಕೊಂಡಿದ್ದಾರೆ.

ತ್ರಿವರ್ಣ ಧ್ವಜ ಹಿಡಿದುಕೊಂಡು ಪಾಕಿಸ್ತಾನ ಮತ್ತು ಟರ್ಕಿಶ್‌ ವಿದ್ಯಾರ್ಥಿಗಳು ಸಹ ಚೆಕ್‌ಪೋಸ್ಟ್‌ಗಳನ್ನು ದಾಟಿದ್ದಾರೆ ಎಂಬ ಮಾಹಿತಿಯನ್ನು ಭಾರತದ ವಿದ್ಯಾರ್ಥಿಯೊಬ್ಬ ಹೊರಹಾಕಿದ್ದಾನೆ. ಮೊಲ್ಡೊವಾದಲ್ಲಿ ನಮಗೆ ಯಾವುದೇ ತೊಂದರೆ ಆಗಲಿಲ್ಲ. ಭಾರತೀಯ ರಾಯಭಾರಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು. ವಿಶೇಷ ವಿಮಾನ ಬರುವವರೆಗೂ ಸೂಕ್ತ ವಸತಿ ವ್ಯವಸ್ಥೆ ಮತ್ತು ಆಹಾರ ಸೌಲಭ್ಯ ಕಲ್ಪಿಸಿದ್ದ ರಾಯಭಾರಿ ಕಚೇರಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಭಾರತದ ಸರ್ಕಾರ ‘ಆಪರೇಷನ್ ಗಂಗಾ’ ಮಿಷನ್
ಮೂಲಕ ಯೂಕ್ರೇನ್ ನಗರಗಳಿಂದ ಸಮೀಪದ ಬೇರೆ ರಾಷ್ಟ್ರಗಳಿಗೆ ವಾಹನಗಳ ಮೂಲಕ ಭಾರತೀಯರನ್ನು ಸಾಗಿಸಿ, ಅಲ್ಲಿಂದ ಭಾರತಕ್ಕೆ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಈ ವೇಳೆ ವಾಹನಗಳಲ್ಲಿ ಭಾರತೀಯ ಧ್ವಜವನ್ನು ಪ್ರದರ್ಶಿಸಲಾಗುತ್ತಿದ್ದು, ಅವರಿಗೆ ಯಾವುದೇ ಚೆಕ್ಕಿಂಗ್ ಮಾಡದೇ ಬಿಡಲಾಗುತ್ತಿದೆ.

Leave A Reply

Your email address will not be published.