ಕಂದಾಯ ಇಲಾಖೆಯಲ್ಲಿ ಧೂಳು ತಿನ್ನುತ್ತಿದ್ದ ಕಡತಗಳಿಗೆ ಮುಕ್ತಿ| 15-20 ವರ್ಷಗಳ ಕಡತಗಳಿಗೆ ಶೀಘ್ರ ಪರಿಹಾರ- ಆರ್ ಅಶೋಕ್
ಬೆಂಗಳೂರು : ಕಂದಾಯ ಇಲಾಖೆಯಲ್ಲಿ ಸುಮಾರು 15-20 ವರ್ಷಗಳಿಂದ ಬಾಕಿ ಉಳಿದಿರುವ ಕಡತಗಳಿಗೆ ಮುಕ್ತಿ ನೀಡುವ ಕೆಲಸವನ್ನು ಆರ್ ಅಶೋಕ್ ಪ್ರಾರಂಭಿಸಿದ್ದಾರೆ. ಈ ಮೂಲಕ ಜನತೆಗೆ ಅನುಕೂಲಮಾಡಿಕೊಡುವ ವಿನೂತನ ಕಾರ್ಯಕ್ರಮವನ್ನು ಗುರುವಾರ ಮೈಸೂರಿನಲ್ಲಿ ಕಂದಾಯ ಸಚಿವ ಆರ್ ಅಶೋಕ್ ಪ್ರಾರಂಭಿಸಲಿದ್ದಾರೆ. ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಅವರು, ಕಡತಗಳು ಕೇವಲ ಕಾಗದ ಅಲ್ಲ, ಜನರ ಹಿತ ಭಾವನೆ ಅಡಕಗೊಂಡಿದೆ. ಹಲವಾರು ಕಾರಣಗಳಿಂದ ಇತ್ಯರ್ಥ ಆಗದೆ ಇದ್ದ ಹಳೆಯ ಕಡತಗಳನ್ನು 10 ದಿನಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ತೀರ್ಮಾನ …