ಕೆಳಕ್ಕೆ ಬಗ್ಗಿ ಪೂಜಾ ಹೆಗ್ಡೆಯ ಮಿನಿ ಸ್ಕರ್ಟ್ ತುದಿ ಕಚ್ಚಲು ಹೋದನೇ ಸಲ್ಮಾನ್ ಖಾನ್ ? | ಎಲ್ಲೆಡೆ ಇಂದು ಇದೇ ಟ್ರೋಲ್ !!

ಬಾಲಿವುಡ್ ನ ಬ್ಯಾಚುಲರ್ ನಟ ಸಲ್ಮಾನ್​ ಖಾನ್​ ಅವರು ಬಾಲಿವುಡ್​ ಸಿನಿಮಾಗಳ ಮೂಲಕ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರತಿ ವರ್ಷ ಅವರು ‘ದಬಂಗ್​ ಟೂರ್​’  ಮೂಲಕ ವಿದೇಶದಲ್ಲಿ ಇರುವ ಅಭಿಮಾನಿಗಳನ್ನು ರಂಜಿಸುತ್ತಾರೆ. ಜನರು ಹಣ ಕೊಟ್ಟು ಟಿಕೆಟ್​ ಖರೀದಿಸಿ ಈ ಕಾರ್ಯಕ್ರಮಕ್ಕೆ ಬರುತ್ತಾರೆ.

ಇತ್ತೀಚೆಗೆ ಸಲ್ಮಾನ್​ ಖಾನ್​ ಜೊತೆ ನಟಿ ಪೂಜಾ ಹೆಗ್ಡೆ ಕೂಡ ದಬಂಗ್​ ಟೂರ್​ನಲ್ಲಿ ಟೂರ್ ಹೊರಟಿದ್ದರು. ಈ ವೇಳೆ ನಡೆದ ಪ್ರಸಂಗವೊಂದು ಸಲ್ಲುಗೆ ತೀವ್ರ ಮುಜುಗರ ಉಂಟು ಮಾಡುವಂತಾಗಿದೆ. ಆ ಸಂಬಂಧಿತ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ‌.

ಸಲ್ಮಾನ್​ ಖಾನ್​ ಅವರು ‘ಕಿಕ್​’ ಸಿನಿಮಾದ ‘ಜುಮ್ಮೆ ಕೆ ರಾತ್​ ಮೇ..’ ಹಾಡಿಗೆ ಪೂಜಾ ಹೆಗ್ಡೆ ಜೊತೆ ಡ್ಯಾನ್ಸ್​ ಮಾಡುತ್ತಿರುವಾಗ ಮೂಲ ಹಾಡಿನ ಸ್ಟೆಪ್​ ರೀತಿಯೇ ಪೂಜಾ ಹೆಗ್ಡೆ ಅವರ ಸ್ಕರ್ಟ್​ ಅನ್ನು ಕಚ್ಚಿಕೊಂಡು ಡ್ಯಾನ್ಸ್​ ಮಾಡಲು ಸಲ್ಮಾನ್​ ಖಾನ್​ ಪ್ರಯತ್ನಿಸಿದರು. ಆದರೆ ಪೂಜಾ ಧರಿಸಿದ್ದು ಬಾಡಿಕಾನ್​ ಡ್ರೆಸ್​ ಆದ್ದರಿಂದ ಅದನ್ನು ಕಚ್ಚಿ ಹಿಡಿಯಲು ಸಲ್ಲುಗೆ ಸಾಧ್ಯವಾಗಲಿಲ್ಲ. ಹಾಗೆ ಸಲ್ಮಾನ್​ ಖಾನ್​ ಪ್ರಯತ್ನಿಸುತ್ತಿರುವಾಗಲೇ ಪೂಜಾ ಹೆಗ್ಡೆ ಅವರು ತಪ್ಪಿಸಿಕೊಂಡು ಮುಂದೆ ಮುಂದೆ ಹೋದರು. ಇದರಿಂದ ಸಲ್ಲುಗೆ ಮುಜುಗರ ಆಯಿತು. ಈಗ ಇದೇ ಕೆಳಕ್ಕೆ ಬಗ್ಗಿ ಬಾಯಿ ಹಾಕಲು ಹೋದ ಸಲ್ಲು ಸಣ್ಣತನದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡದಾಗಿ​ ವೈರಲ್​ ಆಗುತ್ತಿದೆ.‌ ಸ್ಕರ್ಟ್ ಸರಿಪಡಿಸಿಕೊಂಡು ಪೂಜಾ ಮುಂದೆ ಹೋಗಿದ್ದಳು : ಆದರೆ ಸಲ್ಮಾನ್ ಅನ್ನು ಟ್ರೋಲಿಗರು ಹಿಡಿದುಕೊಂಡು ಜಗ್ಗಾಡುತ್ತಿದ್ದಾರೆ.

Leave A Reply

Your email address will not be published.