ಉಕ್ರೇನ್ – ರಷ್ಯಾ ಯುದ್ಧ : ರಷ್ಯಾ ಶೆಲ್ ದಾಳಿಗೆ ಬಲಿಯಾದ ಉಕ್ರೇನ್ ನಲ್ಲಿದ್ದ ಕನ್ನಡಿಗ ವಿದ್ಯಾರ್ಥಿ

ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಗೆ ಕನ್ನಡಿಗ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಉಕ್ರೇನ್ ನ ಖಾರ್ಕೀವ್ ದಾಳಿಯಲ್ಲಿ ಕನ್ನಡಿಗ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತ ವಿದ್ಯಾರ್ಥಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಎಂದು ಗುರುತಿಸಲಾಗಿದೆ.

ಈ ಬಗ್ಗೆ ವಿದೇಶಾಂಗ ಇಲಾಖೆ, ಭಾರತೀಯ ವಿದ್ಯಾರ್ಥಿಯೋರ್ವ ಖಾರ್ಕೀವ್ ನಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಿದೆ. ಹಾಗೂ ಮೃತ ವಿದ್ಯಾರ್ಥಿಯ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ವಿದ್ಯಾರ್ಥಿ ನಿಧನಕ್ಕೆ ಸಚಿವಾಲಯ ಸಂತಾಪ ಸೂಚಿಸಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

Leave A Reply

Your email address will not be published.