Day: March 1, 2022

SSLC, PUC ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ | ಕಡ್ಡಾಯ ಹಾಜರಾತಿ ನಿಯಮವನ್ನು ಸಡಿಲಿಸಲು ಶಿಕ್ಷಣ ಇಲಾಖೆ ನಿರ್ಧಾರ

ಕಳೆದೆರಡು ವರ್ಷಗಳಿಂದ ಶಾಲಾ ಕಾಲೇಜುಗಳು ಸರಿಯಾಗಿ ನಡೆದೇ ಇಲ್ಲ. ಸರಿಯಾದ ಸಮಯಕ್ಕೆ ಪಾಠ ನಡೆದಿಲ್ಲ. ಕೊರೊನಾದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಕಟ ಬಂದಿರುವುದಂತೂ ನಿಜ. ಈ ಕಾರಣದಿಂದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಅಂತಿಮ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ, ಕಡ್ಡಾಯ ಹಾಜರಾತಿ ನಿಯಮವನ್ನು ಸಡಿಸಲಿಸಲು ಸರಕಾರ ನಿರ್ಧರಿಸಿದೆ. ಭೌತಿಕ ತರಗತಿಗಳ ಆರಂಭದ ವಿಳಂಬ ಒಂದು ಕಡೆಯಾದರೆ, ಆನ್ಲೈನ್ ತರಗತಿಗಳ ಸಮಯದಲ್ಲಿ ನೆಟ್ ವರ್ಕ್ ಸಮಸ್ಯೆಗಳನ್ನು ಪರಿಗಣಿಸಿ, ಈ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಪರೀಕ್ಷೆಗೆ ಹಾಜರಾಗಲು 75% ಹಾಜರಾತಿಯನ್ನು …

SSLC, PUC ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ | ಕಡ್ಡಾಯ ಹಾಜರಾತಿ ನಿಯಮವನ್ನು ಸಡಿಲಿಸಲು ಶಿಕ್ಷಣ ಇಲಾಖೆ ನಿರ್ಧಾರ Read More »

ಉಕ್ರೇನ್ ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವಿಗೆ ಮರುಗಿದ ಪ್ರಧಾನಿ ಮೋದಿ!! ಸಾಂತ್ವನ ಕೋರಿ ಹೆತ್ತವರಿಗೆ ಕರೆ ಮಾಡಿದ ಮೋದಿ ಹೇಳಿದ್ದೇನು!?

ರಷ್ಯಾ ಹಾಗೂ ಉಕ್ರೆನ್ ನಡುವೆ ನಡೆಯುತ್ತಿರುವ ಯುದ್ಧದ ಭೀಕರತೆಗೆ ಸಿಲುಕಿ ಭಾರತೀಯ ಮೆಡಿಕಲ್ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉಕ್ರೇನ್ ನ ಖಾರ್ಕಿವ್ ನಗರದಲ್ಲಿ ನಡೆದಿದ್ದು ವಿಷಯ ತಿಳಿಯುತ್ತಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಯ ಕುಟುಂಬಕ್ಕೆ ಧೈರ್ಯ ತುಂಬಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯವರಾದ ಮೃತ ವಿದ್ಯಾರ್ಥಿ ನವೀನ್ (21) ನ ಹೆತ್ತವರಿಗೆ ಖುದ್ದು ಕರೆ ಮಾಡಿದ ಪ್ರಧಾನಿ, ನಿಮ್ಮೊಂದಿಗೆ ನಾವಿದ್ದೇವೆ, ಮಗನ ಸಾವಿನ ದುಃಖ ಭರಿಸುವ ಶಕ್ತಿಯನ್ನು ದೇವರು ನಿಮಗೆ ನೀಡಲಿ …

ಉಕ್ರೇನ್ ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವಿಗೆ ಮರುಗಿದ ಪ್ರಧಾನಿ ಮೋದಿ!! ಸಾಂತ್ವನ ಕೋರಿ ಹೆತ್ತವರಿಗೆ ಕರೆ ಮಾಡಿದ ಮೋದಿ ಹೇಳಿದ್ದೇನು!? Read More »

ಧರ್ಮಸ್ಥಳ: ಪಾದಯಾತ್ರೆ ಬಂದಿದ್ದ ಯಾತ್ರಾರ್ಥಿ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವು

ಮಹಾ ಶಿವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಿಕ್ಕಮಗಳೂರಿನಿಂದ ಪಾದಯಾತ್ರೆ ಬಂದ ವ್ಯಕ್ತಿಯೋರ್ವ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಚಂದ್ರಶೇಖರ್ ತನ್ನ ಸ್ನೇಹಿತನಾದ ವೆಂಕಟೇಶ್ ಜೊತೆ ಧರ್ಮಸ್ಥಳಕ್ಕೆ ಚಾರ್ಮಾಡಿ ಘಾಟ್ ಮೂಲಕ ಪಾದಯಾತ್ರೆ ಮಾಡಿಕೊಂಡು ಇಂದು ಧರ್ಮಸ್ಥಳ ನೇತ್ರಾವತಿಗೆ ಬಂದಿದ್ದರು. ಈ ವೇಳೆ ಸ್ನಾನ ಮಾಡಲು ನದಿಗೆ ಇಳಿದಿದ್ದು, ಈಜಲು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ …

ಧರ್ಮಸ್ಥಳ: ಪಾದಯಾತ್ರೆ ಬಂದಿದ್ದ ಯಾತ್ರಾರ್ಥಿ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವು Read More »

ಶಿವಪೂಜೆ ಮಾಡಲು ಬಂದ ಹಿಂದೂ ಕಾರ್ಯಕರ್ತರಿಗೆ ತಡೆ | ಸ್ಥಳದಲ್ಲಿ ಬಿಗುವಿನ ವಾತಾವರಣ!

ಶಿವಲಿಂಗ ಪೂಜೆ ಮಾಡುವ ವಿಚಾರದಲ್ಲಿ ಆಳಂದ ಪಟ್ಟಣದಲ್ಲಿ ಎರಡು ಕೋಮುಗಳ‌ ನಡುವೆ ವಿವಾದ ಉಂಟಾಗಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಆಳಂದದ ಲಾಡ್ಲೆ ಮಶಾಕ್ ದರ್ಗಾ ಪರಿಸರದಲ ಈಶ್ವರಲಿಂಗ ಇದೆ. ಇತ್ತೀಚೆಗೆ ಈ ಲಿಂಗಕ್ಕೆ ಕಿಡಿಗೇಡಿಗಳು ಅವಮಾನ ಮಾಡಿದ್ದರು. ಹೀಗಾಗಿ ಶಿವರಾತ್ರಿ‌‌ ಪ್ರಯುಕ್ತ ಈಶ್ವರಲಿಂಗ ಶುದ್ಧೀಕರಣ ಅಭಿಯಾನವನ್ನು ಶ್ರೀರಾಮ ಸೇನೆ ಹಮ್ಮಿಕೊಂಡಿದೆ. ಇದಕ್ಕೆ ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳಿಂದ ಬೆಂಬಲ‌ ವ್ಯಕ್ತವಾಗಿದೆ. ಆಳಂದದಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೂ ಶಿವಲಿಂಗ ಪೂಜೆಗಾಗಿ ಆಳಂದಕ್ಕೆ ಹಿಂದುಪರ ಕಾರ್ಯಕರ್ತರು ಹೊರಟಿದ್ದಾರೆ. ಪೂಜೆ …

ಶಿವಪೂಜೆ ಮಾಡಲು ಬಂದ ಹಿಂದೂ ಕಾರ್ಯಕರ್ತರಿಗೆ ತಡೆ | ಸ್ಥಳದಲ್ಲಿ ಬಿಗುವಿನ ವಾತಾವರಣ! Read More »

ಮಂಗಳೂರು ಕ್ಯಾಂಪ್ಕೋ ಸಂಸ್ಥೆಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರ

ಕ್ಯಾಂಪ್ಕೋ ಸಂಸ್ಥೆ , ಮಂಗಳೂರು ಇದರ ವತಿಯಿಂದ “ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ” ಎಂಬ ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ದಿನಾಂಕ ಮಾ.01ರಂದು ಅಲಂಕಾರು ಕ್ಯಾಂಪ್ಕೋ ಶಾಖೆಯಲ್ಲಿ ನಡೆಯಿತು. ಕ್ಯಾಂಪ್ಕೋ ಸದಸ್ಯರಾದ ಶ್ರೀ ಅಚ್ಚುತ ಗೌಡ ಪಟ್ರಮೆ ಇವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗಾಗಿ ಕ್ಯಾಂಪ್ಕೋ ವತಿಯಿಂದ ನೀಡಲಾದ ರೂ. 1,98,500/- ಚೆಕ್ ನ್ನು ಸಂಸ್ಥೆಯ ನಿರ್ದೇಶಕ ಶ್ರೀ ಕೃಷ್ಣ ಪ್ರಸಾದ್ ಮಡ್ತಿಲರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಮುಖ್ಯ ಮಾರುಕಟ್ಟೆ ವ್ಯವಸ್ಥಾಪಕರಾದ ಶ್ರೀ …

ಮಂಗಳೂರು ಕ್ಯಾಂಪ್ಕೋ ಸಂಸ್ಥೆಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರ Read More »

ಖ್ಯಾತ ಮಲಯಾಳಿ ಆಲ್ಬಮ್ ನಟಿ ರಿಫಾ ಮೆಹ್ನು ಶವವಾಗಿ ಪತ್ತೆ

ದುಬೈ : ಖ್ಯಾತ ಮಲಯಾಳಿ ಆಲ್ಬಮ್ ನಟಿ ರಿಫಾ ಮೆಹ್ನು (20) ದುಬೈನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಂದು ಬೆಳಿಗ್ಗೆ ದುಬೈನ ಜಾಫಾಲಿಯಾದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಸ್ವದೇಶಕ್ಕೆ ತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ ಕೋಝಿಕ್ಕೋಡ್‌ ಮೂಲದ ರಿಫಾ ಮೆಹನೂ ಪತಿಯೊಂದಿಗೆ ಸಾಮಾಜಿಕ ಜಾಲಾತಾಣಗಳಲ್ಲಿ ಸಕ್ರೀಯರಾಗಿದ್ದರು. ರಿಫಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಸ್ನೇಹಿತರು ತಿಳಿಸಿದ್ದಾರೆ. ರಿಫಾ ತನ್ನ ಪತಿ ಮೆಹನಾಜ್ ಜೊತೆ ವಾರಗಳ ಹಿಂದೆ ದುಬೈಗೆ ಬಂದಿದ್ದರು. ಸೋಮವಾರ ರಾತ್ರಿಯವರೆಗೂ ಸಾಮಾಜಿಕ …

ಖ್ಯಾತ ಮಲಯಾಳಿ ಆಲ್ಬಮ್ ನಟಿ ರಿಫಾ ಮೆಹ್ನು ಶವವಾಗಿ ಪತ್ತೆ Read More »

ಮಾರ್ಚ್ ತಿಂಗಳಿನಲ್ಲಿ 13 ದಿನಗಳ ಕಾಲ ಬಾಗಿಲು ಮುಚ್ಚಲಿವೆ ಬ್ಯಾಂಕ್ ಗಳು !! | ಈ ತಿಂಗಳ ಬ್ಯಾಂಕ್ ರಜಾ ಪಟ್ಟಿ ಇಂತಿದೆ

ಇಂದಿನಿಂದ ಮಾರ್ಚ್ ತಿಂಗಳು ಪ್ರಾರಂಭವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಿಂಗಳಿನಲ್ಲಿ 13 ದಿನಗಳ ಕಾಲ ಬ್ಯಾಂಕ್ ಗಳು ಬಾಗಿಲು ಮುಚ್ಚಲಿವೆ. ನೀವೂ ಕೂಡ ಮಾರ್ಚ್ ತಿಂಗಳಿನಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಬಯಸಿದರೆ, ನಂತರ ಶಾಖೆಗೆ ಹೋಗುವ ಮೊದಲು, ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಖಂಡಿತವಾಗಿ ಪರಿಶೀಲಿಸಿಕೊಳ್ಳಿ. ಆರ್‌ಬಿಐ ಬಿಡುಗಡೆ ಮಾಡಿರುವ ಈ ಪಟ್ಟಿಯ ಪ್ರಕಾರ, ಮಾರ್ಚ್ 2022 ರಲ್ಲಿ ಒಟ್ಟು 13 ದಿನಗಳ …

ಮಾರ್ಚ್ ತಿಂಗಳಿನಲ್ಲಿ 13 ದಿನಗಳ ಕಾಲ ಬಾಗಿಲು ಮುಚ್ಚಲಿವೆ ಬ್ಯಾಂಕ್ ಗಳು !! | ಈ ತಿಂಗಳ ಬ್ಯಾಂಕ್ ರಜಾ ಪಟ್ಟಿ ಇಂತಿದೆ Read More »

ಉಕ್ರೇನ್ – ರಷ್ಯಾ ಯುದ್ಧ : ರಷ್ಯಾ ಶೆಲ್ ದಾಳಿಗೆ ಬಲಿಯಾದ ಉಕ್ರೇನ್ ನಲ್ಲಿದ್ದ ಕನ್ನಡಿಗ ವಿದ್ಯಾರ್ಥಿ

ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಗೆ ಕನ್ನಡಿಗ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಉಕ್ರೇನ್ ನ ಖಾರ್ಕೀವ್ ದಾಳಿಯಲ್ಲಿ ಕನ್ನಡಿಗ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ವಿದ್ಯಾರ್ಥಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ವಿದೇಶಾಂಗ ಇಲಾಖೆ, ಭಾರತೀಯ ವಿದ್ಯಾರ್ಥಿಯೋರ್ವ ಖಾರ್ಕೀವ್ ನಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಿದೆ. ಹಾಗೂ ಮೃತ ವಿದ್ಯಾರ್ಥಿಯ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ವಿದ್ಯಾರ್ಥಿ ನಿಧನಕ್ಕೆ ಸಚಿವಾಲಯ ಸಂತಾಪ …

ಉಕ್ರೇನ್ – ರಷ್ಯಾ ಯುದ್ಧ : ರಷ್ಯಾ ಶೆಲ್ ದಾಳಿಗೆ ಬಲಿಯಾದ ಉಕ್ರೇನ್ ನಲ್ಲಿದ್ದ ಕನ್ನಡಿಗ ವಿದ್ಯಾರ್ಥಿ Read More »

ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಸಿಗರೇಟ್ ನಿಂದ ಸುಡಲು ಪ್ರಯತ್ನ!! ವೀಡಿಯೋ ವೈರಲ್ ಆಗಿ ಕೆಲ ತಾಸುಗಳ ಒಳಗೆ ಆರೋಪಿ ಪಾಪಿ ಪತಿ ಪೊಲೀಸರ ಅತಿಥಿ!

ಉಡುಪಿ:ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಆಕೆಯ ಮುಖಕ್ಕೆ ಸಿಗರೇಟ್ ನಿಂದ ಸುಡಲು ಪ್ರಯತ್ನಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ. ಬಂಧಿತ ಆರೋಪಿಯನ್ನು ಪಾಪಿ ಪತಿ ಪ್ರದೀಪ್ ಎಂದು ಗುರುತಿಸಲಾಗಿದ್ದು,ಈತ ತನ್ನ ಗರ್ಭಿಣಿ ಪತ್ನಿ ಪ್ರಿಯಾಂಳಿ ಗೆ ವರದಕ್ಷಿಣೆಗೆ ಕಿರುಕುಳ ನೀಡಿ ಸುಮಾರು ಎರಡು ಲಕ್ಷಕ್ಕೂ ಮಿಕ್ಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದೇ ವಿಚಾರವಾಗಿ ಪ್ರತೀ ನಿತ್ಯವೂ ಆಕೆಯ ಮೇಲೆ ಗರ್ಭಿಣಿ ಎಂಬ ಕನಿಕರವನ್ನು ಬಿಟ್ಟು ಹಲ್ಲೆ …

ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಸಿಗರೇಟ್ ನಿಂದ ಸುಡಲು ಪ್ರಯತ್ನ!! ವೀಡಿಯೋ ವೈರಲ್ ಆಗಿ ಕೆಲ ತಾಸುಗಳ ಒಳಗೆ ಆರೋಪಿ ಪಾಪಿ ಪತಿ ಪೊಲೀಸರ ಅತಿಥಿ! Read More »

ಕೆಳಕ್ಕೆ ಬಗ್ಗಿ ಪೂಜಾ ಹೆಗ್ಡೆಯ ಮಿನಿ ಸ್ಕರ್ಟ್ ತುದಿ ಕಚ್ಚಲು ಹೋದನೇ ಸಲ್ಮಾನ್ ಖಾನ್ ? | ಎಲ್ಲೆಡೆ ಇಂದು ಇದೇ ಟ್ರೋಲ್ !!

ಬಾಲಿವುಡ್ ನ ಬ್ಯಾಚುಲರ್ ನಟ ಸಲ್ಮಾನ್​ ಖಾನ್​ ಅವರು ಬಾಲಿವುಡ್​ ಸಿನಿಮಾಗಳ ಮೂಲಕ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರತಿ ವರ್ಷ ಅವರು ‘ದಬಂಗ್​ ಟೂರ್​’  ಮೂಲಕ ವಿದೇಶದಲ್ಲಿ ಇರುವ ಅಭಿಮಾನಿಗಳನ್ನು ರಂಜಿಸುತ್ತಾರೆ. ಜನರು ಹಣ ಕೊಟ್ಟು ಟಿಕೆಟ್​ ಖರೀದಿಸಿ ಈ ಕಾರ್ಯಕ್ರಮಕ್ಕೆ ಬರುತ್ತಾರೆ. ಇತ್ತೀಚೆಗೆ ಸಲ್ಮಾನ್​ ಖಾನ್​ ಜೊತೆ ನಟಿ ಪೂಜಾ ಹೆಗ್ಡೆ ಕೂಡ ದಬಂಗ್​ ಟೂರ್​ನಲ್ಲಿ ಟೂರ್ ಹೊರಟಿದ್ದರು. ಈ ವೇಳೆ ನಡೆದ ಪ್ರಸಂಗವೊಂದು ಸಲ್ಲುಗೆ ತೀವ್ರ ಮುಜುಗರ ಉಂಟು ಮಾಡುವಂತಾಗಿದೆ. ಆ ಸಂಬಂಧಿತ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ …

ಕೆಳಕ್ಕೆ ಬಗ್ಗಿ ಪೂಜಾ ಹೆಗ್ಡೆಯ ಮಿನಿ ಸ್ಕರ್ಟ್ ತುದಿ ಕಚ್ಚಲು ಹೋದನೇ ಸಲ್ಮಾನ್ ಖಾನ್ ? | ಎಲ್ಲೆಡೆ ಇಂದು ಇದೇ ಟ್ರೋಲ್ !! Read More »

error: Content is protected !!
Scroll to Top