ನನ್ನ ಸಾವಿಗೆ ಅವರು ಪ್ರಾರ್ಥನೆ ಮಾಡಿದರು, ಇದರಿಂದ ನನಗೆ ಬೇಸರವಾಗಲಿಲ್ಲ, ಖುಷಿ ಆಯಿತು – ಪ್ರಧಾನಿ ನರೇಂದ್ರ ಮೋದಿ

ರಾಜಕಾರಣದಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದೇ ಇರುವುದು ಸಾಮಾನ್ಯ ಸಂಗತಿ. ಆದರೆ ರಾಜಕಾರಣಿಯೊಬ್ಬರ ಅದರಲ್ಲಿಯೂ ಪ್ರಧಾನಿಯೊಬ್ಬರ ಸಾವಿಗೆ ಪ್ರಾರ್ಥನೆ ಮಾಡುವಂಥ ಮನಸ್ಸು ಕೂಡಾ ರಾಜಕಾರಣದಲ್ಲಿ ಇದೆ ಎಂಬ ವಿಷಯವನ್ನು ಸ್ವತಃ ನರೇಂದ್ರ ಮೋದಿಯವರೇ ಬಹಿರಂಗ ಪಡಿಸಿದ್ದಾರೆ‌.

ಉತ್ತರಪ್ರದೇಶದ ಚುನಾವಣಾ ಪ್ರಚಾರದ ವೇಳೆ ಮಾತಾಡುತ್ತಾ ಈ ವಿಷಯವನ್ನು ಪ್ರಾಸ್ತಾಪಿಸಿದ್ದಾರೆ. ಭಾರತೀಯ ರಾಜಕೀಯದಲ್ಲಿ ಜನರು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ ನಾನು ಕಾಶಿಯಲ್ಲಿ ಇದ್ದ ಸಂದರ್ಭದಲ್ಲಿ ನನ್ನ ಸಾವಿಗೆ ವಿರೋಧಿಗಳು ಪ್ರಾರ್ಥನೆ ಮಾಡಿದರು. ಇದರಿಂದ ನನಗೆ ಬೇಸರವಾಗಲಿಲ್ಲ. ಅದರ ಬದಲು ನನಗೆ ಖುಷಿಯೇ ಆಯಿತು ಎಂದಿದ್ದಾರೆ.

ಯಾರು ಈ ರೀತಿ ಪ್ರಾರ್ಥನೆ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಅವರು ಈ ರೀತಿ ಉಲ್ಲೇಖ ಮಾಡಿರುವುದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ.

ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದ ಅಖಿಲೇಶ್ ಯಾದವ್ ” ಇದು ಒಳ್ಳೆಯದು, ಅವರು ಇನ್ನು ಅಲ್ಲಿ ಕೇವಲ ಒಂದು ತಿಂಗಳು ಅಥವಾ ಮೂರು ತಿಂಗಳ ಕಾಲ ಅಲ್ಲಿ ಉಳಿಯಬಹುದು. ಅದು ಉಳಿಯಲು ಸರಿಯಾದ ಸ್ಥಳ. ಜನರು ತಮ್ಮ ಕೊನೆಯ ದಿನಗಳನ್ನು ವಾರಣಾಸಿಯಲ್ಲಿ ಕಳೆಯಲು ಇಚ್ಛಿಸುತ್ತಾರೆ ‘ ಎಂದು ವಾರಣಾಸಿಯಲ್ಲಿ ಅಧಿಕೃತ ಕಾರ್ಯಕ್ರಮಗಳಲ್ಲಿ ಹೇಳಿದ್ದರು.

ಈ ಹೇಳಿಕೆಗೆ ಪ್ರಧಾನಿ ಮೋದಿ ಈಗ ತಿರುಗೇಟು ನೀಡಿದ್ದಾರೆ.

Leave A Reply

Your email address will not be published.