ಬೈಕ್ ತೆಗೆಸಿಕೊಡಲಿಲ್ಲ ಎಂದು ತುಂಬು ಗರ್ಭಿಣಿಯನ್ನು ಮನೆಯಿಂದ ಹೊರ ಹಾಕಿದ ಪತಿ ಮಹಾಶಯ|

ತ್ರಿವಳಿ ತಲಾಖ್ ರದ್ದಾಗಿ ಆಗಲೇ ಎರಡು ವರ್ಷ ಆಗ್ತಾ ಬಂದಿದೆ. ಆದರೆ ಮುಸ್ಲಿಂ ಮಹಿಳೆಯರು ಈ ಹಿಂಸೆಯಿಂದ ಇಂದಿಗೂ ತಪ್ಪಿಸಿಕೊಂಡಿಲ್ಲ. ಇದೀಗ ಅಂಥದ್ದೇ ಒಂದು ಘಟನೆ ಉತ್ತರಖಾಂಡದ ಹಲ್ ದ್ವಾನಿ ಎಂಬಲ್ಲಿ ನಡೆದಿದೆ. ತುಂಬು ಗರ್ಭಿಣಿಗೆ ಪತಿಯೊಬ್ಬ ತ್ರಿಬಲ್ ತಲಾಖ್ ನೀಡಿದ್ದಾನೆ. ಕಾರಣವೇನೆಂದರೆ ತವರು ಮನೆಯಿಂದ ಬೈಕ್ ಕೊಡಿಸುವಂತೆ ಕೇಳಿರುವ ಗಂಡ, ಅದು ಕೊಡಿಸಲು ಸಾಧ್ಯವಾಗದ ಪತ್ನಿಗೆ ಈ ರೀತಿಯ ಹೇಳಿಕೆ ನೀಡಿದ್ದಾನೆ.

2021 ರ ಮೇ 14 ರಂದು ನಾಯ್ ಬಸ್ತಿಯ ತಾಜ್ ಮಸೀದಿಯ ನಿವಾಸಿ ಅಬ್ದುಲ್ ಖಾದಿರ್ ಎಂಬಾತನ ಜೊತೆ ಮದುವೆ ಮಾಡಿಕೊಂಡ ಎಂಟು ತಿಂಗಳ ಗರ್ಭಿಣಿಗೆ ಈ ರೀತಿ ಮಾಡಿದ್ದಾನೆ ಪತಿರಾಯ.

ಬಂಭುಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಮಹಿಳೆಗೆ ಈ ದುಃಸ್ಥಿತಿ ಬಂದಿದೆ. ಬೈಕ್ ಕೊಡಿಸದೇ ಹೋದರೆ ಗರ್ಭಪಾತ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ಮಹಿಳೆಯ ಮನೆಯವರಿಗೆ ಬೈಕ್ ಕೊಡಿಸಲು ಸಾಧ್ಯವಾಗಲಿಲ್ಲ. ಗರ್ಭಪಾತಕ್ಕೆ ಆಕೆ ಒಪ್ಪದ ಕಾರಣ ತ್ರಿವಳಿ ತಲಾಖ್ ನೀಡಿ ಮನೆಯಿಂದ ಹೊರ ಹಾಕಿದ್ದಾನೆ ಪತಿ. ಇದೀಗ ಹೆಂಡತಿ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ತ್ರಿವಳಿ ತಲಾಖ್ ನ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.