ಫ್ರಿಡ್ಜ್ ನಲ್ಲಿಟ್ಟಿದ್ದ ಆಹಾರವನ್ನು ಸೇವಿಸಿದ ಹುಡುಗನಿಗೆ ಎದುರಾಯಿತು ಅನಾರೋಗ್ಯ|ಜೀವ ಉಳಿಸಲು ಎರಡೂ ಕಾಲುಗಳನ್ನು ಕತ್ತರಿಸಿದ ವೈದ್ಯರು

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ. ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ ಅದರ ಮೇಲೆ ಅವಲಂಬಿಸಿದೆ. ಅದೆಷ್ಟೋ ಜನರು ಹೆಚ್ಚಾಗಿ ತಯಾರಿಸಿದ ಆಹಾರವನ್ನು ಫ್ರಿಡ್ಜ್ ನಲ್ಲಿ ಇರಿಸಿ ಮರುದಿವಸ ತಿನ್ನುತ್ತಾರೆ. ಇದು ಆರೋಗ್ಯಕ್ಕೆ ಒಳಿತಲ್ಲ ಎಂಬುದನ್ನು ವೈದ್ಯರು ಹೇಳುತ್ತಲೇ ಇರುತ್ತಾರೆ. ಆದರೆ ನಿರ್ಲಕ್ಷ್ಯತನ ಅಧಿಕವಾಗಿದೆ.ಇದೇ ತರ ಫ್ರಿಡ್ಜ್ ನಲ್ಲಿಟ್ಟ ಆಹಾರ ಸೇವಿಸಿದಾತನಿಗೆ ಈಗ ಎದುರಾದ ಪರಿಸ್ಥಿತಿ ನೋಡಿದರೆ ಶಾಕ್ ಆಗಲೇ ಬೇಕಾಗಿದೆ.

ಹಿಂದಿನ ರಾತ್ರಿ ಫ್ರಿಡ್ಜ್‌ನಲ್ಲಿದ್ದ ಆಹಾರವನ್ನು ವಿದ್ಯಾರ್ಥಿಯೊಬ್ಬ ಸೇವಿಸಿದ್ದು,ಬಳಿಕ ಆರೋಗ್ಯ ಎಷ್ಟರ ಮಟ್ಟಿಗೆ ಹದಗೆಟ್ಟಿತು ಎಂದರೆ ಅವರ ಎರಡೂ ಕಾಲುಗಳನ್ನು ಕತ್ತರಿಸಬೇಕಾಯಿತು.ಡೈಲಿಮೇಲ್ ವರದಿಯ ಪ್ರಕಾರ, ಆಹಾರವನ್ನು ತಿಂದ ನಂತರ ಬಾಲಕನ ಕಿಡ್ನಿ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಇದರಿಂದಾಗಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಪರಿಣಾಮವಾಗಿ, ಅವರ ಸ್ಥಿತಿಯನ್ನು ಸುಧಾರಿಸಲು, ವೈದ್ಯರು ಎರಡೂ ಕಾಲುಗಳನ್ನು ಕತ್ತರಿಸಬೇಕಾಯಿತು. ಅಷ್ಟೇ ಅಲ್ಲ ಆ ಹುಡುಗನ ಬೆರಳುಗಳನ್ನೂ ಕತ್ತರಿಸಬೇಕಿತ್ತು. ವೈದ್ಯರ ಪ್ರಕಾರ ಈ ಹಿಂದೆ ಹಳಸಿದ ನೂಡಲ್ಸ್, ಚಿಕನ್ ಮತ್ತು ಅನ್ನವನ್ನು ಸೇವಿಸಿದ್ದರಿಂದ ಈ ವ್ಯಕ್ತಿಯ ಆರೋಗ್ಯವು ಹದಗೆಟ್ಟಿತ್ತೆನ್ನಲಾಗಿದೆ.

ಆಹಾರ ಸೇವಿಸಿದ ಬಳಿಕ ಬಾಲಕನಿಗೆ ಮೊದಲು ತೀವ್ರ ಜ್ವರ ಕಾಣಿಸಿಕೊಂಡಿತ್ತು. ಹುಡುಗ ತಿಂದ ಆಹಾರವನ್ನು ಹಿಂದಿನ ರಾತ್ರಿ ಫ್ರಿಡ್ಜ್‌ನಲ್ಲಿ ಇಡಲಾಗಿತ್ತು. ಬಾಲಕನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹುಡುಗ ಹೃದಯ ಬಡಿತದಿಂದ ಮೂರ್ಛೆ ಹೋಗಿದ್ದ. ಅವರ ಸ್ಥಿತಿ ನೋಡಿ ವೈದ್ಯರೂ ಆಶ್ಚರ್ಯಚಕಿತರಾದರು. ಇಂತಹ ಪರಿಸ್ಥಿತಿಯಲ್ಲಿ ಆತನ ರಕ್ತವನ್ನು ಪರೀಕ್ಷಿಸಿದಾಗ ಅದರಲ್ಲಿ ಮಾರಣಾಂತಿಕ ಕಾಯಿಲೆಯ ಲಕ್ಷಣಗಳು ಕಂಡು ಬಂದವು.

ಮಾರಣಾಂತಿಕ ಕಾಯಿಲೆ ಸೆಪ್ಸಿಸ್ ಆತನನ್ನು ಆವರಿಸಿತ್ತು, ನಂತರ ಸೆಪ್ಸಿಸ್ ಅವನ ರಕ್ತದಲ್ಲಿ ಹರಡಲು ಪ್ರಾರಂಭಿಸಿತು. ಈ ಪರಿಸ್ಥಿತಿಯಲ್ಲಿ, ಅವರನ್ನು ಉಳಿಸಲು ವೈದ್ಯರಿಗೆ ಒಂದೇ ಮಾರ್ಗವಿತ್ತು. ಆದ್ದರಿಂದಲೇ ಈ ಮಾರಣಾಂತಿಕ ರೋಗ ಇಡೀ ದೇಹಕ್ಕೆ ಹರಡುವಷ್ಟರಲ್ಲಿ ಆ ಅಂಗಾಂಗಗಳನ್ನು ಕತ್ತರಿಸುವುದು ಉತ್ತಮ ಎಂದು ವೈದ್ಯರು ಭಾವಿಸಿದ್ದರು. ಹಲವಾರು ದಿನಗಳ ನಂತರ ಹುಡುಗನಿಗೆ ಪ್ರಜ್ಞೆ ಬಂದಾಗ, ಅವನ ಜೀವನವು ಸಂಪೂರ್ಣವಾಗಿ ಬದಲಾಗಿತ್ತು.

ಸೆಪ್ಸಿಸ್ ಎನ್ನುವುದು ದೇಹದಲ್ಲಿನ ಕೆಲವು ರೀತಿಯ ಸೋಂಕಿನಿಂದ ಉಂಟಾಗುವ ಕಾಯಿಲೆಯಾಗಿದ್ದು,ಅಸ್ತಿತ್ವದಲ್ಲಿರುವ ಸೋಂಕು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದಾಗ ಸೆಪ್ಸಿಸ್ ಬೆಳವಣಿಗೆಯಾಗುತ್ತದೆ. ಈ ಕಾಯಿಲೆಯಿಂದಾಗಿ, ಜ್ವರ, ವೇಗದ ಹೃದಯ ಬಡಿತ ಮತ್ತು ಉಸಿರಾಟದ ತೊಂದರೆ ಮುಂತಾದ ಇತರ ಲಕ್ಷಣಗಳು ಕಂಡುಬರುತ್ತವೆ. ಇದಕ್ಕೆ ತಕ್ಷಣದ ಚಿಕಿತ್ಸೆಯ ಅಗತ್ಯವಿದೆ. ಇಲ್ಲದಿದ್ದರೆ, ಅಂಗಾಂಗ ವೈಫಲ್ಯ, ಹೃದಯ ವೈಫಲ್ಯ, ಪಾರ್ಶ್ವವಾಯು ಮತ್ತು ಸಾವು ಸಂಭವಿಸುವ ಸಾಧ್ಯತೆಯಿದೆ.

Leave A Reply

Your email address will not be published.