16 ರ ವಯಸ್ಸಿನಲ್ಲೇ ಚೆಸ್ ವಿಶ್ವಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಸೋಲಿಸಿದ ಭಾರತದ ಗ್ರಾಂಡ್ ಮಾಸ್ಟರ್ ಆರ್.ಪ್ರಗ್ನಾನಂದ|

ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸೆನ್ ಅವರನ್ನು ಭಾರತದ 16 ವರ್ಷದ ಗ್ರ್ಯಾಂಡ್ ಮಾಸ್ಟರ್ ರಮೇಶ್ ಬಾಬು ಪ್ರಗ್ನಾನಂದ ಏರ್ ಥಿಂಗ್ಸ್ ಮಾಸ್ಟರ್ಸ್ ನ ಎಂಟನೇ ಸುತ್ತಿನಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದ್ದಾನೆ.

ಆನ್ಲೈನ್ ಕ್ಷಿಪ್ರ ಚೆಸ್ ಸ್ಪರ್ಧೆಯಲ್ಲಿ ಅವರ ವಿಜಯದ ನಂತರ ಸ್ಪೆಕ್ಟ್ರಮ್ ನಾದ್ಯಂತ ಹಲವಾರು ಮಂದಿ ಈ ಬಾಲಕನನ್ನು ಅಭಿನಂದಿಸಿದ್ದಾರೆ.

ಮೂರು ಪಂದ್ಯಗಳಲ್ಲಿ ಸತತವಾಗಿ ಗೆದ್ದಿದ್ದ ಮ್ಯಾಗ್ನಸ್ ಕಾರ್ಲ್ ಸೆನ್ ವಿರುದ್ಧ 16 ವರ್ಷದ ಬಾಲಕ ಪ್ರಗ್ನಾನಂದ ಕೇವಲ‌ 39 ನಡೆಗಳಲ್ಲಿ ಎದುರಾಳಿಯ ವಿರುದ್ಧ ಗೆದ್ದಿದ್ದಾನೆ. ಈ ಮೂಲಕ ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ ರನ್ನು ಸೋಲಿಸಿದ ಭಾರತದ ಮೂರನೇ ಗ್ರಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆ ಪಾತ್ರನಾಗಿದ್ದಾನೆ ಪ್ರಗ್ನಾನಂದ. ಈ ಹಿಂದೆ ಭಾರತದ ನಂ.1 ಚೆಸ್ ಆಟಗಾರ ವಿಶ್ವನಾಥ್ ಆನಂದ್ ಮತ್ತು ಪೆಂಡ್ಯಾಲ ಹರಿಕೃಷ್ಣ ಮಾತ್ರ ಮ್ಯಾಗ್ನಸ್ ಕಾರ್ಲ್ಸೆನ್ ರನ್ನು ಸೋಲಿಸಿದ ಪಟ್ಟಿಯಲ್ಲಿದ್ದರು.

ಈ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವಿಶ್ವಚಾಂಪಿಯನ್ ಮತ್ತು ಭಾರತದ ಮೊದಲ‌ ಗ್ರ್ಯಾಂಡ್ ಮಾಸ್ಟರ್ ಆಗಿರುವ ವಿಶ್ವನಾಥನ್ ಆನಂದ್ ಅವರು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಗ್ನಾನಂದನ ಸಾಧನೆಯನ್ನು ಅಭಿನಂದಿಸಿದ್ದಾರೆ.

ಪ್ರಗ್ನಾನಂದ ಯಾರು ಆತನ ಹಿನ್ನೆಲೆ ಏನು ?

ಚೆನ್ನೈನಲ್ಲಿ ಆಗಸ್ಟ್ 10, 2005 ರಂದು ಜನನವಾಯಿತು. ಪ್ರಸಿದ್ಧ ಭಾರತೀಯ ಚೆಸ್ ಆಟಗಾರ್ತಿ ವೈಶಾಲಿ ರಮೇಶ್ ಬಾಬು ಅವರ ಒಡಹುಟ್ಟಿದವರು.

ಪ್ರಗ್ನಾನಂದ ಅವರು 2013 ರಲ್ಲಿ ವರ್ಲ್ಡ್ ಯೂತ್ ಚೆಸ್ ಚಾಂಪಿಯನ್ ಅಂಡರ್ 8 ಪ್ರಶಸ್ತಿಯನ್ನು ಗೆದ್ದಿದ್ದಾರೆ. 7 ನೇ ವಯಸ್ಸಿನಲ್ಲಿರುವಾಗಲೇ FIDE. ಮಾಸ್ಟರ್ ಎಂಬ ಶೀರ್ಷಿಕೆಯನ್ನು ಪಡೆದಿದ್ದಾನೆ. ಇದು ಗ್ರ್ಯಾಂಡ್ ಮಾಸ್ಟರ್ ಮತ್ತು ಇಂಟರ್ನ್ಯಾಷನಲ್ ಮಾಸ್ಟರ್ ಗಿಂತ ಕೆಳಗಿರುವ ಮುಕ್ತ ಪ್ರಶಸ್ತಿಯಾಗಿದೆ.

ಕಿರಿಯ ವಯಸ್ಸಿನಲ್ಲಿಯೇ ಅಂತರಾಷ್ಟ್ರೀಯ ಮಾಸ್ಟರ್ ಆಗುವ ಮೂಲಕ ವಿಶ್ವಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದ ಕೀರ್ತಿ ಪ್ರಗ್ನಾನಂದನದ್ದು.

ಪ್ರಗ್ನಾನಂದನ ಹಿರಿಯ ಸಹೋದರಿ ವೈಶಾಲಿ ಕೂಡಾ ಅತ್ಯಂತ ಶ್ರೇಷ್ಠ ಆಟಗಾರ್ತಿ ಆಗಿದ್ದು, 12 ವರ್ಷದೊಳಗಿನ ಮತ್ತು 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಶಿಪ್ ಪದಕಗಳನ್ನು ಗೆದ್ದಿದ್ದಾರೆ. ಈಗ 21 ನೇ ವಯಸ್ಸಿನಲ್ಲಿ ( ಮಹಿಳಾ ವಿಭಾಗ) ಭಾರತದ ನಂ.4 ಆಟಗಾರ್ತಿಯಾಗಿದ್ದಾರೆ.

ಪ್ರಗ್ನಾನಂದ ಸಾಮಾಜಿಕ ಮಾಧ್ಯಮದಿಂದ ಸಂಪೂರ್ಣವಾಗಿ ದೂರ ಇದ್ದಾನೆ. ತರಬೇತುದಾರ ಆರ್ ಬಿ ರಮೇಶ್ ಹೇಳುವ ಪ್ರಕಾರ ಸಾಮಾಜಿಕ ಮಾಧ್ಯಮಗಳ ವೀಕ್ಷಣೆ ಮಾಡದಿರುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು.

Leave A Reply

Your email address will not be published.