ಪುತ್ತೂರು : ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿ ಬೆತ್ತಲೆ ಫೋಟೋ ತೆಗೆದ ಶಿಕ್ಷಕ| ಕಾಮಿ ಶಿಕ್ಷಕನ ಬಂಧನ

ಸುಬ್ರಹ್ಮಣ್ಯದ ಶಿಕ್ಷಣ ಸಂಸ್ಥೆಯೊಂದರ ಪ್ರೌಢಶಾಲಾ ಶಿಕ್ಷಕನೋರ್ವ ತಾನು ಉದ್ಯೋಗ ಮಾಡುತ್ತಿದ್ದ ಪ್ರೌಢಶಾಲೆಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಬ್ಲ್ಯಾಕ್ ಮೇಲ್ ಮಾಡಿದ ಬಗ್ಗೆ ಸಂತ್ರಸ್ತ ಬಾಲಕಿಯ ತಾಯಿ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ಆರೋಪಿಯ ಜಾಮೀನನ್ನು ರಾಜ್ಯ ಹೈಕೋರ್ಟ್ ರದ್ದು ಮಾಡಿದ ಹಿನ್ನೆಲೆಯಲ್ಲಿ ತಿಂಗಳ ಬಳಿಕ ಆತ ಪುತ್ತೂರು ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

ತಾನು ಪಾಠ ಮಾಡುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡು ನಿರಂತರ ಅತ್ಯಾಚಾರಗೈದು ಹಾಗೂ ಈ ಕೃತ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಬ್ಲ್ಯಾಕ್ಮೆಲ್ ಮಾಡಿ ಹಣ ವಸೂಲಿ ಮಾಡಿದ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಸುಬ್ರಹ್ಮಣ್ಯದ ಶಿಕ್ಷಣ ಸಂಸ್ಥೆಯೊಂದರ ಪ್ರೌಢಶಾಲಾ ಶಿಕ್ಷಕ ರಾಯಚೂರಿನ ಗುರುರಾಜ್ ಪ್ರಕರಣದ ಆರೋಪಿಯಾಗಿದ್ದು, ಆತ ಫೆ.21 ರಂದು ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಬಗ್ಗೆ ಬಾಲಕಿಯ ತಾಯಿ ದೂರು ನೀಡಿದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಲು ತಡ ಮಾಡಿದಾಗ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದು ನಂತರ 2021 ರ ಅ.8 ರಂದು ಈತನನ್ನು ಬಂಧಿಸಲಾಗಿತ್ತು. ಈತನ ವಿರುದ್ಧ ಫೋಕ್ಸೋ ಹಾಗೂ ಐಟಿ ಆಕ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ಹಾಗಾಗಿಯೇ ಈತನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಪುತ್ತೂರಿನ 5 ನೇ‌ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಬಂಧನವಾದ 48 ಗಂಟೆಯೊಳಗಡೆ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ಈ ಪ್ರಕರಣದ ಹಿನ್ನೆಲೆ : ಪ್ರಕರಣದ ಆರೋಪಿ ಗುರುರಾಜ್ ಸುಬ್ರಹ್ಮಣ್ಯದ ಎಸ್ ಎಸ್ ಪಿಯು ಪ್ರೌಢಶಾಲೆ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕನಾಗಿ ಉದ್ಯೋಗದಲ್ಲಿದ್ದ. ಸದ್ಯ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆ. ಈ ಕೃತ್ಯವು ನಾಲ್ಕು ವರ್ಷದ ಹಿಂದೆ ಮೊದಲ ಬಾರಿ ನಡೆದಿದ್ದು ಆಗ ವಿದ್ಯಾರ್ಥಿನಿಯೂ ಗುರುರಾಜ್ ಉದ್ಯೋಗಿಯಾಗಿರುವ ಶಿಕ್ಷಣ ಸಂಸ್ಥೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಕರೆಸಿಕೊಂಡು ಬಾಲಕಿಯನ್ನು ಪುಸಲಾಯಿಸಿ ವಿವಸ್ತ್ರಗೊಳಿಸಿ ಮೊಬೈಲ್ ಮೂಲಕ ಫೋಟೋ ತೆಗೆಯುತ್ತಿದ್ದ. ಅದನ್ನು ವಿದ್ಯಾರ್ಥಿನಿಯ ಮನೆಮಂದಿಗೆ ತೋರಿಸಿ ಹಣ ತರುವಂತರ ಬೆದರಿಕೆ ಹಾಕುತ್ತಿದ್ದ. ಈ ಕೃತ್ಯಕ್ಕೆ ಆತನ ಪತ್ನಿಯೂ ಸಾಥ್ ನೀಡಿದ್ದಾಳೆ. ಈ ಬಗ್ಗೆ ವಿದ್ಯಾರ್ಥಿನಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಗುರುರಾಜ್ ಮತ್ತು ಅವರ ಪತ್ನಿ ಮನೆಯಿಂದ ಹಣ ತರುವಂತೆ ಮಗಳಲ್ಲಿ ಒತ್ತಾಯಿಸಿದ್ದು ಹಣ ತರದಿದ್ದರೆ ಫೋಟೋಗಳನ್ನು ಬೇರೆಯವರಿಗೆ ತೋರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಮನೆಯಿಂದ 10,000 ರೂಪಾಯಿಯನ್ನು ಕದ್ದು ಗುರುರಾಜ್ ಗೆ ನೀಡಿದ್ದಾಳೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.