ನಂದಿಬೆಟ್ಟದಲ್ಲಿ ಟ್ರಕ್ಕಿಂಗ್ ಗೆ ಹೋಗಿ 200 ಅಡಿ ಆಳಕ್ಕೆ ಬಿದ್ದ ಯುವಕ| ರಕ್ಷಣೆಗೆ ಬಂತು ವಾಯುಪಡೆ ಹೆಲಿಕಾಪ್ಟರ್!

ಚಿಕ್ಕಬಳ್ಳಾಪುರ : ಟ್ರಕ್ಕಿಂಗ್ ಗೆ ಎಂದು ಬಂದಿದ್ದ ಯುವಕ ನಂದಿಬೆಟ್ಟದ ತಪ್ಪಲಿನ ಬ್ರಹ್ಮಗಿರಿ ಬೆಟ್ಟದಲ್ಲಿ ದುರ್ಗಮ ಪ್ರದೇಶಕ್ಕೆ ಜಾರಿ ಬಿದ್ದ ಘಟನೆ ನಡೆದಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪಡೆ( SDRF) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಹೆಲಿಕಾಪ್ಟರ್ ನಿಂದ ಹಗ್ಗ ಬಿಟ್ಟು ಯುವಕನನ್ನು ಮೇಲೆಕ್ಕೆತ್ತುವ ಪ್ರಯತ್ನ ಮಾಡಲಾಯಿತು. ನಂದಿಗಿರಿಧಾಮದ ಬಳಿ ಟ್ರಕ್ಕಿಂಗ್ ವೇಳೆ ಯುವಕ ಕಾಲು ಜಾರಿ ಕಮರಿಗೆ ಬಿದ್ದಿದ್ದ ಯುವಕನನ್ನು ಕೊನೆಗೆ ಹಗ್ಗದ ಸಹಾಯದಿಂದ ಮೇಲಕ್ಕೆ ಎತ್ತಲಾಯಿತು. ರಕ್ಷಣಾ ಕಾರ್ಯಾಚರಣೆಗಾಗಿ‌ ಬೆಂಗಳೂರಿನ ಯಲಹಂಕದಿಂದ ವಾಯುಪಡೆಯ ಹೆಲಿಕಾಪ್ಟರ್ ಬಂದಿತ್ತು. ನಿಶಾಂತ್ ನನ್ನು ಯಲಹಂಕ ವಾಯುನೆಲೆಗೆ ಸ್ಥಳಾಂತರಿಸಿ ಅಲ್ಲಿಂದ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕೊಂಡೊಯ್ಯಲಾಯಿತು.

ಟ್ರಕ್ಕಿಂಗ್ ಗೆ ಎಂದು ನಂದಿಬೆಟ್ಟಕ್ಕೆ ಬರುವವರಿಗೆ ಇನ್ನು ಮುಂದೆ ಕಡಿವಾಣ ಹಾಕುತ್ತೇವೆ. ನಿಶಾಂತ್ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಸುಮಾರು 200 ಅಡಿ ಕೆಳಗೆ ಬಿದ್ದಿದ್ದ ನಿಶಾಂತ್ ನನ್ನು ರಕ್ಷಿಸಲಾಗಿದೆ ಎಂದು ಚಿಕ್ಕಬಳ್ಳಾಪುರದ ಎಸ್ ಪಿ ಜಿ ಕೆ ಮಿಥುನ್ ಕುಮಾರ್ ಹೇಳಿದ್ದಾರೆ.

Leave A Reply

Your email address will not be published.