ಸುಳ್ಯ : ಬೆಳ್ಳಾರೆ ಸಮೀಪ ರಬ್ಬರ್ ಸಾಗಾಟದ ಲಾರಿ ಪಲ್ಟಿ | ರೋಡಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ರಬ್ಬರ್| ಚಾಲಕನ ಸ್ಥಿತಿ ಗಂಭೀರ

ಬೆಳ್ಳಾರೆ : ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪಂಜಿಗಾರ್ ಎಂಬಲ್ಲಿ ರಬ್ಬರ್ ಸಾಗಾಟದ ಲಾರಿಯೊಂದು ಭೀಕರ ಅಪಘಾತಕ್ಕೀಡಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಬೆಳ್ಳಾರೆಯಿಂದ ಪಂಜ ಕಡೆ ರಬ್ಬರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಲಾರಿ ಪಂಜಿಗಾರ್ ಎಂಬಲ್ಲಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿ ಯಲ್ಲಿದ್ದ ರಬ್ಬರ್ ಚೆಲ್ಲಾಪೆಲ್ಲಿ ಆಗಿದೆ. ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಳ್ಳಾರೆ ಠಾಣಾ ಎಸ್ ಐ ಆಂಜನೇಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave A Reply

Your email address will not be published.