Day: February 15, 2022

ಕೆಂಪು ಕೋಟೆ ಗಲಭೆಯ ಪ್ರಮುಖ ಆರೋಪಿ, ನಟ ದೀಪ್‌ ಸಿಧು ಅಪಘಾತಕ್ಕೆ ಬಲಿ

ಕೆಂಪು ಕೋಟೆ ಗಲಭೆಯ ಪ್ರಮುಖ ಆರೋಪಿ, ನಟ ದೀಪ್‌ ಸಿಧು ಮಂಗಳವಾರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಿಧು, ಮಂಗಳವಾರ ದೆಹಲಿಯಿಂದ ಸ್ಕಾರ್ಪಿಯೋ ಕಾರಿನಲ್ಲಿ ಪಂಜಾಬ್‌ಗ ಮರಳುತ್ತಿದ್ದರು. ವೆಸ್ಟ್‌ರ್ನ್ ಪೆರಿಪರಲ್‌ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ರಾತ್ರಿ 8.30ರ ಸಮಯಕ್ಕೆ ಸಿಘು ಗಡಿಯಲ್ಲಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಗಂಭೀರ ಗಾಯಾಳುವಾಗಿದ್ದ ಸಿಧುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪ್ರಾಣ ಬಿಟ್ಟಿರುವುದಾಗಿ ವರದಿಯಾಗಿದೆ. 2021ರ ಗಣರಾಜ್ಯೋತ್ಸವ ಸಮಯದಲ್ಲಿ ಹೋರಾಟನಿರತ ರೈತರು ಕೆಂಪುಕೋಟೆ ಮೇಲೆ ದಾಳಿ ನಡೆಸಿದ್ದರು. ಆ ಪ್ರಕರಣದಲ್ಲಿ ಸಿಧು ಹೆಸರು …

ಕೆಂಪು ಕೋಟೆ ಗಲಭೆಯ ಪ್ರಮುಖ ಆರೋಪಿ, ನಟ ದೀಪ್‌ ಸಿಧು ಅಪಘಾತಕ್ಕೆ ಬಲಿ Read More »

ಉದ್ಯೋಗಾಕಾಂಕ್ಷಿಗಳೇ ಗಮನಿಸಿ| RBI ನಿಂದ 950 ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ರಿಸರ್ವ್ ಬ್ಯಾಂಕ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತರು ಅರ್ಜಿಯನ್ನು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಯ ಹೆಸರು : ಅಸಿಸ್ಟೆಂಟ್ಹುದ್ದೆಗಳ ಸಂಖ್ಯೆ : 950 ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 17-02-2022ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-03-2022ಆಯ್ಕೆ ಪರೀಕ್ಷೆ ದಿನಾಂಕ : ಮಾರ್ಚ್ 26, 27, 2022 ವಿದ್ಯಾರ್ಹತೆ : ಕನಿಷ್ಠ ಶೇ.50 ಅಂಕಗಳೊಂದಿಗೆ ಪದವಿಯಲ್ಲಿ ತೇರ್ಗಡೆ ಆಗಿರಬೇಕು. ( ಎಸ್ ಸಿ, ಎಸ್ ಟಿ, ವಿಕಲಚೇತನ ಅಭ್ಯರ್ಥಿಗಳು …

ಉದ್ಯೋಗಾಕಾಂಕ್ಷಿಗಳೇ ಗಮನಿಸಿ| RBI ನಿಂದ 950 ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಸುಳ್ಯ : ಬೆಳ್ಳಾರೆ ಸಮೀಪ ರಬ್ಬರ್ ಸಾಗಾಟದ ಲಾರಿ ಪಲ್ಟಿ | ರೋಡಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ರಬ್ಬರ್| ಚಾಲಕನ ಸ್ಥಿತಿ ಗಂಭೀರ

ಬೆಳ್ಳಾರೆ : ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪಂಜಿಗಾರ್ ಎಂಬಲ್ಲಿ ರಬ್ಬರ್ ಸಾಗಾಟದ ಲಾರಿಯೊಂದು ಭೀಕರ ಅಪಘಾತಕ್ಕೀಡಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬೆಳ್ಳಾರೆಯಿಂದ ಪಂಜ ಕಡೆ ರಬ್ಬರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಲಾರಿ ಪಂಜಿಗಾರ್ ಎಂಬಲ್ಲಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿ ಯಲ್ಲಿದ್ದ ರಬ್ಬರ್ ಚೆಲ್ಲಾಪೆಲ್ಲಿ ಆಗಿದೆ. ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಳ್ಳಾರೆ ಠಾಣಾ ಎಸ್ ಐ ಆಂಜನೇಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಹಿಜಾಬ್ ವಿವಾದ: ಹಿಜಾಬ್ ಕೇಸನ್ನು ಮುಂದೂಡಿದ ತ್ರಿಸದಸ್ಯ ಪೀಠ

ಹಿಜಾಬ್ ವಿವಾದ ಸಂಬಂಧ ಇಂದು‌ ಅರ್ಜಿ ವಿಚಾರಣೆ ಮುಂದುವರೆಸಿದ್ದ ಕರ್ನಾಟಕ ಹೈಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆಯನ್ನು ಇಂದು ಮಧ್ಯಾಹ್ನ 2.30 ಕ್ಕೆ ಕೈಗೆತ್ತಿಗೊಂಡಿತು. ಉಡುಪಿಯಲ್ಲಿ ಪ್ರಾರಂಭವಾದ ಈ ಹಿಜಾಬ್ ವಿವಾದ ಈಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ತಿ, ಕೃಷ್ಣ ಎಸ್ ದೀಕ್ಷಿತ್, ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಪ್ರಕರಣದ ವಿಚಾರಣೆಯನ್ನು ಇಂದು ಕೂಡಾ ನಡೆಸುತ್ತಿದ್ದಾರೆ. ಅರ್ಜಿಯ ವಿಚಾರಣೆ ಆಗುವವರೆಗೂ ಯಾರೂ ಶಲ್ಯ ,ಹಿಜಾಬ್ ಧರಿಸಬಾರದು ಎಂದು ನ್ಯಾಯಪೀಠ ಹೇಳಿದೆ. ವಾದ ಪ್ರತಿವಾದವನ್ನು …

ಹಿಜಾಬ್ ವಿವಾದ: ಹಿಜಾಬ್ ಕೇಸನ್ನು ಮುಂದೂಡಿದ ತ್ರಿಸದಸ್ಯ ಪೀಠ Read More »

ಬಂಟ್ವಾಳ: ಯುವತಿಯ ಮಾನಭಂಗಕ್ಕೆ ಯತ್ನ,ಕೊಲೆ ಬೆದರಿಕೆ!! ಅಬ್ದುಲ್ ರಹಮಾನ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ:ಯುವತಿಯೊರ್ವಳ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದಲ್ಲದೇ ಕೊಲೆಗೂ ಯತ್ನಿಸಿ ಬೆದರಿಕೆ ಒಡ್ಡಿರುವ ಬಗ್ಗೆ ಯುವತಿ ನೀಡಿರುವ ದೂರಿನಂತೆ ಮಂಚಿ ನಿವಾಸಿ ಅಬ್ದುಲ್ ರಹಮಾನ್ ಎಂಬಾತನ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ: ಆರೋಪಿ ಅಬ್ದುಲ್ ರಹಮಾನ್ ಕಳೆದ ಒಂದು ವರ್ಷಗಳ ಹಿಂದೆ ಇರಾ ನಿವಾಸಿ ಯುವತಿಗೆ ಪರಿಚಯವಾಗಿದ್ದು ಇಬ್ಬರೂ ಪರಸ್ಪರ ಫೋನ್ ಮೂಲಕ ಮಾತನಾಡುತ್ತಿದ್ದರು.ಇದೇ ಮಾತು ಅಸಹ್ಯವಾಗಿ ಬೆಳೆದಿದ್ದು, ಅಬ್ದುಲ್ ರಹಮಾನ್ ಅಹಸ್ಯವಾಗಿ ಆಡುತ್ತಿದ್ದ ಮಾತಿನಿಂದ ಬೇಸತ್ತ ಯುವತಿ ಆತನ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. …

ಬಂಟ್ವಾಳ: ಯುವತಿಯ ಮಾನಭಂಗಕ್ಕೆ ಯತ್ನ,ಕೊಲೆ ಬೆದರಿಕೆ!! ಅಬ್ದುಲ್ ರಹಮಾನ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು Read More »

ಪ್ರೇಮಿಗಳ ದಿನಾಚರಣೆಗೆ ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್ !! | ಕಬ್ಬನ್ ಪಾರ್ಕ್ ಬಳಿ ಕೆಂಪ ಹಾಗೂ ರಂಗಿ ಕತ್ತೆಯ ವಿವಾಹಕ್ಕೆ ಮೊಳಗಿತು ಮಂಗಳವಾದ್ಯ

ನಿನ್ನೆ ಪ್ರೇಮಿಗಳ ದಿನ. ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಕತ್ತೆಗಳಿಗೆ ಮದುವೆ ಮಾಡಿಸುವ ಮೂಲಕ ಪ್ರೇಮಿಗಳ ದಿನಾಚರಣೆ ಆಚರಿಸಿದ್ದಾರೆ. ಪ್ರತಿಬಾರಿಯಂತೆ, ಕತ್ತೆಗಳನ್ನು ಕಬ್ಬನ್ ಪಾರ್ಕ್ ಬಳಿ ಕರೆತಂದು ಕೆಂಪ ಕತ್ತೆಗೆ ಹಳದಿ, ರಂಗಿ ಕತ್ತೆಗೆ ಬಿಳಿ ವಸ್ತ್ರವನ್ನು ಹಾಕಿ ಮಂಗಳ ವಾದ್ಯಗಳೊಂದಿಗೆ ತಾಳಿ ಕಟ್ಟಿಸಿ, ಮೆರವಣಿಗೆ ನಡೆಸಿದರು. ನಂತರ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಅಲ್ಲಿ ಪಾಲ್ಗೊಂಡಿದ್ದ ಪ್ರೇಮಿಗಳಿಗೆ ಗುಲಾಬಿ ಹೂ ಕೊಟ್ಟು ಶುಭ ಹಾರೈಸಿದರು. ಪ್ರೇಮಿಗಳಿಗೆ ರಕ್ಷಣೆ …

ಪ್ರೇಮಿಗಳ ದಿನಾಚರಣೆಗೆ ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್ !! | ಕಬ್ಬನ್ ಪಾರ್ಕ್ ಬಳಿ ಕೆಂಪ ಹಾಗೂ ರಂಗಿ ಕತ್ತೆಯ ವಿವಾಹಕ್ಕೆ ಮೊಳಗಿತು ಮಂಗಳವಾದ್ಯ Read More »

‘ವಾಟ್ಸಪ್ ಸ್ಟೇಟಸ್ ‘ನಿಂದ ಪ್ರಾಣವನ್ನೇ ಕಳೆದುಕೊಂಡ ಮಹಿಳೆ|ಇದರ ಹಿಂದಿರುವ ಕಾರಣ ಮಾತ್ರ ಕ್ಷುಲ್ಲಕ!

ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳಲು ಉತ್ತಮವಾದ ಜೊತೆಗಾರರನ್ನ ಹುಡುಕುತ್ತೇವೆ. ಅದೆಷ್ಟೋ ಮಂದಿಗೆ ಈ ಯುಗದಲ್ಲಿ ವಾಟ್ಸಪ್ ಸ್ಟೇಟಸ್ ಅನ್ನೇ ತಮ್ಮ ಕಷ್ಟಗಳಲ್ಲಿ ಸಹಕರಿಸುವ ಸ್ನೇಹಿತ ಎಂದು ತಮ್ಮ ಭಾವನೆಗಳನ್ನು ಅದರಲ್ಲಿ ತೋರ್ಪಡಿಸುತ್ತಾರೆ. ಹೀಗೆ ವಾಟ್ಸಪ್ ಸ್ಟೇಟಸ್ ಹಾಕಿದ ವಿಚಾರವಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಈ ಮಹಿಳೆ!! ಹೌದು. ಈ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್ ತಾಲೂಕಿನ ಬೊಯಿಸರ್ ನಲ್ಲಿ ನಡೆದಿದೆ.ಶಿವಾಜಿನಗರ ಪ್ರದೇಶದ ನಿವಾಸಿ ಲೀಲಾವತಿ ದೇವಿ ಪ್ರಸಾದ್ ಅವರ ಪುತ್ರಿ ವಾಟ್ಸಪ್ ಸ್ಟೇಟಸ್ ಹಾಕಿದ್ದು,ಅದರಲ್ಲಿ ಆಕೆ ಸಂದೇಶ ಬರೆದಿದ್ದಳು …

‘ವಾಟ್ಸಪ್ ಸ್ಟೇಟಸ್ ‘ನಿಂದ ಪ್ರಾಣವನ್ನೇ ಕಳೆದುಕೊಂಡ ಮಹಿಳೆ|ಇದರ ಹಿಂದಿರುವ ಕಾರಣ ಮಾತ್ರ ಕ್ಷುಲ್ಲಕ! Read More »

ನೋಡಿ‌ ಸ್ವಾಮಿ ನಾವಿರುವುದೇ ಹೀಗೆ| ಇದೆಲ್ಲ ಪ್ರೀತಿಗಾಗಿ| ‘ಬಾಯ್‌ಫ್ರೆಂಡ್ ಬಾಡಿಗೆಗೆ ಇದ್ದಾನೆ’ ಎಂದು ಭಿತ್ತಿಪತ್ರ ಹಿಡಿದು ನಿಂತ ಎಂಜಿನಿಯರಿಂಗ್ ಯುವಕ

ಪ್ರೇಮಿಗಳ‌ ದಿನದಂದು‌ ಎಷ್ಟೋ ಜನ ಯುವಕ ಯುವತಿಯರು ಪ್ರೇಮನಿವೇದನೆ ಮಾಡುವುದು ಕಾಮನ್. ಈ ದಿನ ಪ್ರಫೋಸ್ ಮಾಡಿದರೆ ಹುಡುಗ ಹುಡುಗಿಯರಿಗೆ ತುಂಬಾ ಖುಷಿ ಕೊಡುತ್ತೆ. ಆದರೆ ಇಲ್ಲೊಬ್ಬ ಯುವಕ ಪ್ರೇಮಿಗಳ ದಿನದಂದು ಅಂದರೆ ಫೆ.14 ರಂದು ‘ ಬಾಯ್ ಫ್ರೆಂಡ್ ಬಾಡಿಗೆಗೆ ಲಭ್ಯ’ ಎಂದು ಪೋಸ್ಟರ್ ಹಿಡಿದುಕೊಂಡು ನಿಂತುಕೊಂಡಿದ್ದಾನೆ‌. ಈತನಿಗೆ ಯಾರನ್ನಾದರೂ ಪ್ರೀತಿಸಲು ಇಷ್ಟ. ಆದರೆ ಯಾರೂ ಸಿಗದೆ ಒಬ್ಬಂಟಿಯಾಗಿಯೇ ಇದ್ದಾನೆ.‌ ಯಾರಿಗಾದರೂ ಪ್ರಫೋಸ್ ಮಾಡಿದರೆ ಛೀಮಾರಿ ಹಾಕುತ್ತಾರೆಂದು ಈ ರೀತಿ ತಾನೇ ಬಾಡಿಗೆಗೆ ಲಭ್ಯ ಎಂದು …

ನೋಡಿ‌ ಸ್ವಾಮಿ ನಾವಿರುವುದೇ ಹೀಗೆ| ಇದೆಲ್ಲ ಪ್ರೀತಿಗಾಗಿ| ‘ಬಾಯ್‌ಫ್ರೆಂಡ್ ಬಾಡಿಗೆಗೆ ಇದ್ದಾನೆ’ ಎಂದು ಭಿತ್ತಿಪತ್ರ ಹಿಡಿದು ನಿಂತ ಎಂಜಿನಿಯರಿಂಗ್ ಯುವಕ Read More »

ದೇವಸ್ಥಾನಗಳಲ್ಲಿ ಗಂಟೆ,ಧ್ವನಿ ವರ್ಧಕಗಳನ್ನು ಬಳಸದಂತೆ ನಿರ್ಬಂಧ ವಿಧಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಧ್ವನಿ ವರ್ಧಕಗಳನ್ನು ಮಸೀದಿಗಳಲ್ಲಿ ಬಳಕೆ ಮಾಡದಂತೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದ ಬೆನ್ನಲ್ಲೇ ಅನೇಕ ಕಡೆಗಳಲ್ಲಿ ಬ್ರೇಕ್ ಹಾಕಲಾಗಿದ್ದು, ಇದೀಗ ರಾಜ್ಯ ಸರ್ಕಾರ ವಿವಿಧ ದೇವಸ್ಥಾನಗಳಲ್ಲಿ ಧ್ವನಿ ವರ್ಧಕ ಬಳಸದಂತೆ ನಿರ್ಬಂಧ ವಿಧಿಸಿದೆ. ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರಿನ ಹಲವು ದೇವಸ್ಥಾನಗಳಿಗೆ ನೋಟಿಸ್ ಜಾರಿ ಮಾಡಿದ್ದು, ದೇವಸ್ಥಾನಗಳಲ್ಲಿ ನಿಗಧಿತ ಡೆಸಿಬಲ್ ಶಬ್ದಕ್ಕಿಂತ, ಹೆಚ್ಚಿನ ಶಬ್ದ ಹೊರಸೂಸುವಂತ ಗಂಟೆ, ಜಾಗಟೆ, ಧ್ವನಿವರ್ಧಕ ಬಳಸದಂತೆ ಸೂಚಿಸಿದೆ. ಮಂಗಳಾರತಿ ಸಂದರ್ಭದಲ್ಲಿ ದೊಡ್ಡ ಮಟ್ಟದ ಗಂಟೆ ಶಬ್ದಗಳನ್ನು,ಡಮರುಗ ಸೇರಿದಂತೆ ಇನ್ನಿತರ ಸಾಧನಗಳ …

ದೇವಸ್ಥಾನಗಳಲ್ಲಿ ಗಂಟೆ,ಧ್ವನಿ ವರ್ಧಕಗಳನ್ನು ಬಳಸದಂತೆ ನಿರ್ಬಂಧ ವಿಧಿಸಿದ ರಾಜ್ಯ ಸರ್ಕಾರ Read More »

ಒಂದು ಬೆಡ್ ನಲ್ಲಿ ರೋಗಿ ಮಲಗಿದ್ದರೆ, ಪಕ್ಕದ ಬೆಡ್ ನಲ್ಲಿ ಬೀದಿ ನಾಯಿಗಳು !! | ಇದು ಸರ್ಕಾರಿ ಆರೋಗ್ಯ ಕೇಂದ್ರದ ದುಸ್ಥಿತಿ

ಕೆಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಉಚಿತವಾಗಿ ಸಿಕ್ಕರೂ ಅಲ್ಲಿನ ನಿರ್ವಹಣೆ ಮಾತ್ರ ಉಸಿರುಗಟ್ಟಿಸುವಂತಿರುತ್ತದೆ. ಇಲ್ಲೊಂದು ಸರ್ಕಾರಿ ಆರೋಗ್ಯ ಕೇಂದ್ರದ ನಿರ್ವಹಣೆಯ ರೀತಿ ಸಂಪೂರ್ಣವಾಗಿ ಬಹಿರಂಗವಾಗಿದೆ. ಒಂದು ಬೆಡ್ ನಲ್ಲಿ ರೋಗಿ ಮಲಗಿದ್ದರೆ, ಪಕ್ಕದ ಬೆಡ್ ನಲ್ಲಿ ಬೀದಿ ನಾಯಿಗಳು ಮಲಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿವಾನ್ ಸದಾರ್ ಆಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ಇಂತಹ ಘಟನೆ ನಡೆದಿದೆ. ಇದು ಸರ್ಕಾರಿ ಆಸ್ಪತ್ರೆಯ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದ್ದು, ಹಲವರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. …

ಒಂದು ಬೆಡ್ ನಲ್ಲಿ ರೋಗಿ ಮಲಗಿದ್ದರೆ, ಪಕ್ಕದ ಬೆಡ್ ನಲ್ಲಿ ಬೀದಿ ನಾಯಿಗಳು !! | ಇದು ಸರ್ಕಾರಿ ಆರೋಗ್ಯ ಕೇಂದ್ರದ ದುಸ್ಥಿತಿ Read More »

error: Content is protected !!
Scroll to Top