Day: February 11, 2022

ಪಿಯುಸಿ , ಪದವಿ ಕಾಲೇಜುಗಳಿಗೆ ಫೆ.16 ರವರೆಗೂ ರಜೆ|ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಘೋಷಣೆ

ಬೆಂಗಳೂರು : ರಾಜ್ಯಾದ್ಯಂತ ನಡೆದಿರುವ ಹಿಜಾಬ್ ಪ್ರಕರಣದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ನೀಡಿದ್ದ ರಜೆಯ ಫೆ. 16 ರವರೆಗೂ ಮುಂದುವರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ಶುಕ್ರವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ‌. ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ವಿಶ್ವವಿದ್ಯಾಲಯಗಳು, ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಇದು …

ಪಿಯುಸಿ , ಪದವಿ ಕಾಲೇಜುಗಳಿಗೆ ಫೆ.16 ರವರೆಗೂ ರಜೆ|ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಘೋಷಣೆ Read More »

ಯುವತಿಯೊಬ್ಬಳಿಗೆ ವೆಬ್ ಸಿರೀಸ್ ನಲ್ಲಿ ನಟಿಸಲು ಕಾಟ| ಯುವತಿ ದೂರಿನ ಮೇರೆಗೆ ನಕಲಿ ಡೈರಕ್ಟರ್ ಬಂಧನ

ಬೆಂಗಳೂರು : ಯುವತಿಯೋರ್ವಳನ್ನು ವೆಬ್ ಸಿರೀಸ್ ಹೀರೋಯಿನ್ ಆಗುವಂತೆ ಒತ್ತಾಯಿಸುತ್ತಿದ್ದ ನಕಲಿ ಡೈರೆಕ್ಟರ್ ನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನೀಶ್ ಬಂಧಿತ ಆರೋಪಿ. ನಾನು ವೆಬ್ ಸಿರೀಸ್ ಡೈರೆಕ್ಟರ್ ಎಂದು ಪರಿಚಯ ಮಾಡಿಕೊಂಡು ತನ್ನ ನಿರ್ದೇಶನದ ವೆಬ್ ಸಿರೀಸ್ ನಲ್ಲಿ ನಟಿಸುವಂತೆ ಒತ್ತಾಯಿಸಿ ತನ್ನದೇ ಏರಿಯಾದ ಯುವತಿಯೋರ್ವಳ ಹಿಂದೆ ಬಿದ್ದಿದ್ದ‌ ಈತ. ಪ್ರತಿ ದಿನ ಯುವತಿಗೆ ಟಾರ್ಚರ್ ಕೊಡುತ್ತಿದ್ದ. ಈತನ ಕಾಟದಿಂದ ಬೇಸತ್ತ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಯುವತಿ ದೂರು ಆಧರಿಸಿ ಇದೀಗ …

ಯುವತಿಯೊಬ್ಬಳಿಗೆ ವೆಬ್ ಸಿರೀಸ್ ನಲ್ಲಿ ನಟಿಸಲು ಕಾಟ| ಯುವತಿ ದೂರಿನ ಮೇರೆಗೆ ನಕಲಿ ಡೈರಕ್ಟರ್ ಬಂಧನ Read More »

ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲು!

ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾರಾಯಣ ಹೆಲ್ತ್ ಸಿಟಿಗೆ ದಾಖಲಾಗಿದ್ದಾರೆ‌. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಬಳಿ ಇರುವ ನಾರಾಯಣ ಹೆಲ್ತ್ ಸಿಟಿಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದಾಖಲಾಗಿದ್ದು, ಆರೋಗ್ಯ ತಪಾಸಣೆಗೊಳಗಾಗಿದ್ದಾರೆ. ಆರೋಗ್ಯ ತಪಾಸಣೆಗೆಂದು ನಾರಾಯಣ ಹೆಲ್ತ್ ಸಿಟಿಗೆ ಬಂದ ಸೌರವ್ ಗಂಗೂಲಿ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ವಿವಿಧ ಚೆಕ್ ಅಪ್ ಮಾಡಿಸಿಕೊಂಡಿದ್ದಾರೆ. ಕಾರ್ಡಿಯಾಕ್ ಸ್ಪೆಷಲಿಸ್ಟ್ ಡಾ.ದೇವಿ ಶೆಟ್ಟಿ ನೇತೃತ್ವದಲ್ಲಿ ಆರೋಗ್ಯ ತಪಾಸಣೆಗೊಳಗಾಗಿದ್ದಾರೆ. ಸೌರವ್ ಗಂಗೂಲಿ ಇತ್ತೀಚೆಗಷ್ಟೇ ಲಘು ಹೃದಯಾಘಾತಕ್ಕೆ …

ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲು! Read More »

ರೈತನ ಜನಧನ್ ಖಾತೆಗೆ ಬಂತು 15 ಲಕ್ಷ ರೂ.|ಮೋದಿ ಹಣ ಹಾಕಿದ್ದಾರೆ ಅಂದುಕೊಂಡು ಕನಸಿನ ಮನೆ ನಿರ್ಮಿಸಿದ ರೈತ |ಬಳಿಕ ಆತನಿಗೆ ಕಾದಿತ್ತು ಶಾಕ್

ಹಣ ಅಂದ್ರೆ ಯಾರು ತಾನೇ ಸುಮ್ಮನಿರಲಾರ. ಫ್ರೀ ಆಗಿ ಹಣ ಬಂತಲ್ಲ ಅಂತ ಖರ್ಚು ಮಾಡೋದೇ ಜಾಸ್ತಿ. ಅದೇ ರೀತಿ ರೈತರೊಬ್ಬರ ಜನಧನ್ ಖಾತೆಗೆ ಅಚಾನಕ್​ ಆಗಿ 15 ಲಕ್ಷ ಜಮೆ ಆಗಿದ್ದು, ಮೋದಿ ಹಣ ಹಾಕಿದ್ದಾರೆ ಅಂದು ಕೊಂಡು ತನ್ನ ಕನಸಿನ ಮನೆಯನ್ನ ನಿರ್ಮಿಸಿಕೊಂಡ. ಆದ್ರೆ ಆತನಿಗೆ ಮತ್ತೆ ಕಾದಿತ್ತು ಶಾಕ್! ಔರಂಗಾಬಾದ್​ನ ಪೈಠಾಣ್​ ತಾಲೂಕಿನ ಜ್ಞಾನೇಶ್ವರ್​ ಓಟೆ ಅವರ ಜನಧನ್ ಖಾತೆಗೆ 15 ಲಕ್ಷ ಹಣ ಜಮೆ ಆಗಿದೆ. ಇಷ್ಟು ಮೊತ್ತದ ಹಣ ಆತ …

ರೈತನ ಜನಧನ್ ಖಾತೆಗೆ ಬಂತು 15 ಲಕ್ಷ ರೂ.|ಮೋದಿ ಹಣ ಹಾಕಿದ್ದಾರೆ ಅಂದುಕೊಂಡು ಕನಸಿನ ಮನೆ ನಿರ್ಮಿಸಿದ ರೈತ |ಬಳಿಕ ಆತನಿಗೆ ಕಾದಿತ್ತು ಶಾಕ್ Read More »

ತನ್ನ ಮಗುವಿಗೆ ಭಾರತದ ಕ್ರಿಕೆಟ್ ಸ್ಟೇಡಿಯಂ ನ ಹೆಸರಿಟ್ಟ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ !! | ಆ ಸ್ಟೇಡಿಯಂನ ಹೆಸರಿಡಲು ಕಾರಣ ಏನು ಗೊತ್ತಾ??

ಭಾರತ ದೇಶವನ್ನು ನೆಚ್ಚಿಕೊಳ್ಳದ ವಿದೇಶಿಗರಿಲ್ಲ. ಒಂದಲ್ಲ ಒಂದು ರೀತಿಯಿಂದ ನಮ್ಮ ದೇಶ ವಿದೇಶಿಗರ ಮನಸೆಳೆಯುತ್ತಲೇ ಇರುತ್ತದೆ. ಅದೆಷ್ಟೋ ವಿದೇಶಿಗರು ಭಾರತದ ಮೇಲಿನ ಗೌರವ, ಪ್ರೀತಿಗಾಗಿ ಏನಾದರೊಂದು ನೆನಪಿನ ಕಾರ್ಯ ಮಾಡುತ್ತಾರೆ. ಆ ಸಾಲಿಗೆ ಇದೀಗ ವೆಸ್ಟ್ ಇಂಡೀಸ್ ಖ್ಯಾತ ಕ್ರಿಕೆಟ್ ಆಟಗಾರ ಸೇರ್ಪಡೆಯಾಗಿದ್ದಾರೆ. ಹೌದು, ವೆಸ್ಟ್ ಇಂಡೀಸ್ ಆಲ್‍ರೌಂಡರ್ ಕಾರ್ಲೋಸ್ ಬ್ರಾಥ್‍ವೈಟ್ ಅವರ ಪತ್ನಿ ಫೆ.6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ಭಾರತದ ಕ್ರಿಕೆಟ್ ಕ್ರೀಡಾಂಗಣ ಈಡನ್ ಗಾರ್ಡನ್ಸ್ ನ ನೆನಪಿಗಾಗಿ ಈಡನ್ ರೋಸ್ …

ತನ್ನ ಮಗುವಿಗೆ ಭಾರತದ ಕ್ರಿಕೆಟ್ ಸ್ಟೇಡಿಯಂ ನ ಹೆಸರಿಟ್ಟ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ !! | ಆ ಸ್ಟೇಡಿಯಂನ ಹೆಸರಿಡಲು ಕಾರಣ ಏನು ಗೊತ್ತಾ?? Read More »

ಬೆಳ್ತಂಗಡಿ:ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದ ಕಳೆಂಜದ ಯುವಕ ನಾಪತ್ತೆ

ಬೆಳ್ತಂಗಡಿ : ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆಂದು ತೆರಳಿದ್ದ ಯುವಕ ನಾಪತ್ತೆಯಾಗಿದ್ದು,ತಂದೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಫೆ.9 ರಂದು ದೂರು ನೀಡಿರುವ ಘಟನೆ ನಡೆದಿದೆ. ನಾಪತ್ತೆಯಾದವರು ಕಳೆಂಜ ಗ್ರಾಮದ ಕೊತ್ತೋಡಿ ನಿವಾಸಿ ಸೇಸಪ್ಪ ಗೌಡ ಮತ್ತು ನೇತ್ರಾವತಿ ದಂಪತಿ ಪುತ್ರನಾದ ಸುಧಾಕರ.ಕೆ(28.ವ)ಎಂದು ತಿಳಿದುಬಂದಿದೆ. ಸುಧಾಕರ್ ಎಂಬುವವರು ಅತ್ತ ಕೆಲಸಕ್ಕೂ ಹೋಗದೆ ಇತ್ತ ಮರಳಿ ಮನೆಗೂ ಬಾರದೆ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು,ಈ ಬಗ್ಗೆ ನಾಪತ್ತೆಯಾದ ಯುವಕನ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಧಾಕರ ಕೆ …

ಬೆಳ್ತಂಗಡಿ:ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದ ಕಳೆಂಜದ ಯುವಕ ನಾಪತ್ತೆ Read More »

ಅಂಕತ್ತಡ್ಕ ಶಾಲೆಯಲ್ಲಿ ಶುಕ್ರವಾರ ನಮಾಝ್ ಮಾಡಿದ ವಿದ್ಯಾರ್ಥಿಗಳು,ವಿಡಿಯೋ ವೈರಲ್

ಸವಣೂರು:ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸರಕಾರಿ ಶಾಲೆಯೊಂದರ ಕೊಠಡಿಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ನಮಾಝ್ ಮಾಡಲು ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು ,ಇದಕ್ಕೆ ಸಂಬಂಧಿಸಿದ ವೀಡಿಯೋ ಒಂದು ಹರಿದಾಡುತ್ತಿದೆ. ಸವಣೂರು ಗ್ರಾ.ಪಂ ವ್ಯಾಪ್ತಿಯ ಪಾಲ್ತಾಡಿ ಅಂಕತ್ತಡ ಶಾಲೆಯಲ್ಲಿ ಸಾಮೂಹಿಕವಾಗಿ ನಮಾಝ್ ಮಾಡಿದ್ದು ಈ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಶಾಲಾ ಮುಖ್ಯಸ್ಥರಿಗೆ ಈ ವಿಚಾರವನ್ನು ಈ ಹಿಂದೆಯೂ ಗಮನಕ್ಕೂ ತರಲಾಗಿದ್ದರೂ ಮತ್ತೆ ಮುಂದುವರಿಕೆಯಾಗಿದೆ ಎನ್ನಲಾಗಿದೆ. ಹೆತ್ತರವರು ಪೋಷಕರ ಸಭೆಯಲ್ಲಿ ಪ್ರಸ್ತಾಪ ಮಡಿದ್ದರು. ಹೀಗಾಗಿ ಶಿಕ್ಷಕರು ಮಕ್ಕಳನ್ನು ಹೆತ್ತವರು ಕರೆದುಕೊಂಡು …

ಅಂಕತ್ತಡ್ಕ ಶಾಲೆಯಲ್ಲಿ ಶುಕ್ರವಾರ ನಮಾಝ್ ಮಾಡಿದ ವಿದ್ಯಾರ್ಥಿಗಳು,ವಿಡಿಯೋ ವೈರಲ್ Read More »

ದೇವರ ಕಾರ್ಯಕ್ರಮದಲ್ಲಿ ನಂಗಾ ನಾಚ್!!! ಡ್ಯಾನ್ಸ್ ಮಾಡಿದ ಗ್ರಾ.ಪಂ ಅಧ್ಯಕ್ಷ ಮತ್ತು ಸದಸ್ಯನ ಮೇಲೆ ಕೇಸು

ದೇವರ ಕಾರ್ಯಕ್ರಮವೊಂದರಲ್ಲಿ ನಂಗಾ ನಾಚ್ ಮಾಡಿದ ಗ್ರಾ.ಪಂ ಅಧ್ಯಕ್ಷ ಮತ್ತು ಸದಸ್ಯನ ವಿರುದ್ಧ ಕೇಸು ದಾಖಲಾಗಿದೆ. ಕೆಜಿಎಫ್ ತಾಲೂಕಿನ ಶ್ರೀನಿವಾಸಸಂದ್ರ ಗ್ರಾ ಪಂ ವ್ಯಾಪ್ತಿಯ ಮೇಲುಪಲ್ಲಿಯಲ್ಲಿ ನಡೆದ ಗಂಗಮಾಂಬಾ ಜಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಫೆ. 8 ರಂದು ರೆಕಾರ್ಡ್ ಡ್ಯಾನ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು‌. ವೇದಿಕೆಯಲ್ಲಿ ನರ್ತಕಿಯರ ಜೊತೆ ಜನಪ್ರತಿನಿಧಿಗಳು ಕೂಡಾ ಕುಣಿದುಕುಪ್ಪಳಿಸಿದ್ದಾರೆ. ನರ್ತಕಿಯರ ಜೊತೆ ಕುಣಿದು ಕುಪ್ಪಳಿಸಿದ್ದ ಗ್ರಾಪಂ ಅಧ್ಯಕ್ಷ ರಘು ಮತ್ತು ಸದಸ್ಯ ರಾಜಣ್ಣ ವಿರುದ್ಧ ಕ್ಯಾಸಂಬಳ್ಳಿ ಠಾಣೆಯಲ್ಲಿ ಸಾಂಕ್ರಾಮಿಕ ಕಾಯಿಲೆ …

ದೇವರ ಕಾರ್ಯಕ್ರಮದಲ್ಲಿ ನಂಗಾ ನಾಚ್!!! ಡ್ಯಾನ್ಸ್ ಮಾಡಿದ ಗ್ರಾ.ಪಂ ಅಧ್ಯಕ್ಷ ಮತ್ತು ಸದಸ್ಯನ ಮೇಲೆ ಕೇಸು Read More »

ನೀವು ಕೂಡ 10 ರೂಪಾಯಿ ನಾಣ್ಯದ ಚಲಾವಣೆಯ ಕುರಿತು ಗೊಂದಲಕ್ಕೀಡಾಗಿದ್ದೀರಾ?? | ಇದೀಗ ನಿಮ್ಮ ಅನುಮಾನಗಳಿಗೆ ಸ್ಪಷ್ಟನೆ ನೀಡಿದೆ ಕೇಂದ್ರ ಸರ್ಕಾರ !!

ಜನಸಾಮಾನ್ಯರು ಮಾರುಕಟ್ಟೆಗೆ ಹೋದಾಗ, ಕೆಲವು ಅಂಗಡಿಯವರು 10 ರೂಪಾಯಿಯ ನಾಣ್ಯವನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಲವು ಬಾರಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಪರಿಸ್ಥಿತಿಯನ್ನು ನೀವು ಕೂಡ ಎದುರಿಸಿರಬಹುದು. ಈ ನಾಣ್ಯ ನಕಲಿ ಎಂದು ಕೆಲವು ಅಂಗಡಿಕಾರರು ವಾದಿಸುತ್ತಾರೆ. ಮತ್ತೊಂದೆಡೆ, ಕೆಲವು ಅಂಗಡಿಯವರು ನಿರ್ದಿಷ್ಟ ರೀತಿಯ ನಾಣ್ಯವನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ ಮತ್ತು ಅವರು ಉಳಿದ ನಾಣ್ಯಗಳನ್ನು ತೆಗೆದುಕೊಳ್ಳುತ್ತಾರೆ. 10 ರೂಪಾಯಿಯ ನಕಲಿ ನಾಣ್ಯಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವುದೇ ಇದಕ್ಕೆ ಮುಖ್ಯ ಕಾರಣ. ಆದರೆ ಇದಕ್ಕೀಗ ಕೇಂದ್ರ ಸರ್ಕಾರ …

ನೀವು ಕೂಡ 10 ರೂಪಾಯಿ ನಾಣ್ಯದ ಚಲಾವಣೆಯ ಕುರಿತು ಗೊಂದಲಕ್ಕೀಡಾಗಿದ್ದೀರಾ?? | ಇದೀಗ ನಿಮ್ಮ ಅನುಮಾನಗಳಿಗೆ ಸ್ಪಷ್ಟನೆ ನೀಡಿದೆ ಕೇಂದ್ರ ಸರ್ಕಾರ !! Read More »

ಕಾರ್ಕಳ : ತೆಳ್ಳಾರು ಸೇತುವೆ ಬಳಿ ದನದ ಚರ್ಮ ಹಾಗೂ ತಲೆ ಪತ್ತೆ| ಬಜರಂಗದಳದ ಪ್ರಮುಖರಿಂದ ಶೀಘ್ರವೇ ಆರೋಪಿಗಳ ಪತ್ತೆಗೆ ಆಗ್ರಹ

ಕಾರ್ಕಳ : ತೆಳ್ಳಾರು ಸೇತುವೆ ಬಳಿ ದನದ ಚರ್ಮ ಹಾಗೂ ತಲೆ ಪತ್ತೆ. ಕಾರ್ಕಳದಲ್ಲಿ ಗೋಕಳ್ಳರ ಹಾವಳಿ ಮುಗಿಯದ ಕಥೆಯಾಗಿದೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾರ್ಕಳ ಬಜರಂಗದಳದ ಪ್ರಮುಖರು ಕೂಡಾ ಸ್ಥಳಕ್ಕೆ ಬಂದಿದ್ದು, ಶೀಘ್ರವೇ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.

error: Content is protected !!
Scroll to Top