ಕೇವಲ 900 ರೂಪಾಯಿಗಾಗಿ ಸಾಕಿ ಸಲಹಿದ ತಂದೆಯನ್ನೇ ಕೊಂದ ಮಗ!!

ಇಂದಿನ ಸಮಾಜ ಯಾವ ಪರಿಸ್ಥಿತಿಗೆ ಹೋಗಿ ತಲುಪಿದೆ ಎಂದರೆ ‘ದುಡ್ಡೇ ದೊಡ್ಡಪ್ಪ ‘ಎಂಬ ಮಟ್ಟಿಗೆ.ಅದೆಷ್ಟರ ಮಟ್ಟಿಗೆ ಎಂದರೆ ತಮ್ಮನ್ನು ಹೆತ್ತು ಹೊತ್ತು ಸಲಹಿದ ಪೋಷಕರಿಗಿಂತ ಹಣದ ಮೌಲ್ಯ ಹೆಚ್ಚು ಎನ್ನುವಷ್ಟು. ಹೌದು. ಇಲ್ಲೊಂದು ಕಡೆ ಇಂತಹುದೇ ಘಟನೆ ನಡೆದಿದ್ದು,ಕೇವಲ 900 ರೂಪಾಯಿಗಳಿಗೆ ತನ್ನ ತಂದೆಯನ್ನೇ ಮಗ ಕೊಲೆ ಮಾಡಿದ್ದಾನೆ.

ಈ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಫೆಬ್ರವರಿ 1 ರಂದು ನಡೆದಿದ್ದು,ತಂದೆ ಹಣ ನೀಡಲು ನಿರಾಕರಿಸಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ.ತಂದೆಯನ್ನು ಕೊಲೆಗೈದ 35 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ರವೀಂದ್ರ ಮಾಲಿ ತನ್ನ ತಂದೆಯಿಂದ 900 ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ತಂದೆ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಮಗ ತಂದೆಯನ್ನು ಹೊಡೆದು ಸಾಯಿಸಿದ್ದಾನೆ. ಕುಟುಂಬದ ಸದಸ್ಯರೊಬ್ಬರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave A Reply

Your email address will not be published.