ಸುಳ್ಯ: ಕುಟುಂಬ ಸದಸ್ಯರೊಂದಿಗೆ ನದಿಯಲ್ಲಿ ಸ್ನಾನಕ್ಕಿಳಿದ ಆರು ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಸಾವು! ಸುಳ್ಯ ಸಮೀಪದ ಪೈಚಾರು ಬಳಿ ಘಟನೆ

ಸುಳ್ಯ:ಕುಟುಂಬ ಸದಸ್ಯರೊಂದಿಗೆ ನದಿಗೆ ಸ್ನಾನಕ್ಕೆ ತೆರಳಿದ್ದ ಆರು ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಪೈಚಾರು ದೊಡೆರಿ ಎಂಬಲ್ಲಿ ನಡೆದಿದೆ.ಮೃತ ಬಾಲಕನನ್ನು ಕುಪ್ಪರ(06) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಆಂಧ್ರ ಮೂಲದ ಕುಟುಂಬವೊಂದು ಪೈಚಾರು ಬಳಿಯಲ್ಲಿ ಟೆಂಟ್ ಒಂದನ್ನು ನಿರ್ಮಿಸಿ ವಾಸಿಸುತ್ತಾ ಬುಟ್ಟಿ ಹೆಣೆಯುವ ಕಾಯಕ ಮಾಡಿಕೊಂಡಿದ್ದರು. ಇಂದು ಕುಟುಂಬದ ಹಿರಿಯರು ಹಾಗೂ ಮಕ್ಕಳು ನದಿಗೆ ಸ್ನಾನಕ್ಕೆ ತೆರಳಿದ್ದು, ಈ ವೇಳೆ ಆರು ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದಾನೆ.

ಕೂಡಲೇ ಕುಟುಂಬ ಸದಸ್ಯರೆಲ್ಲರೂ ಸೇರಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಬರುವಷ್ಟರಲ್ಲಿ ಮಗು ಇಹಲೋಕವನ್ನೇ ತ್ಯಜಿಸಿತ್ತು.

Leave A Reply

Your email address will not be published.