Day: February 2, 2022

ಪುತ್ತೂರು : ಎ.ಸಿ. ಡಾ.ಯತೀಶ್ ಉಳ್ಳಾಲ್ ಅವರಿಗೆ ವರ್ಗಾವಣೆ ,ನೂತನ ಎ.ಸಿ.ಯಾಗಿ ಗಿರೀಶ್ ನಂದನ್

ಪುತ್ತೂರು:ಹಾಸನ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿ ಗಿರೀಶ್‌ನಂದನ್ ಎಂ.ಅವರನ್ನು ಪುತ್ತೂರು ಉಪವಿಭಾಗದ ನೂತನ ಉಪವಿಭಾಗಾಧಿಕಾರಿಯಾಗಿ ನೇಮಕಗೊಳಿಸಿ ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ. ಪುತ್ತೂರು ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ| ಯತೀಶ್ ಉಳ್ಳಾಲ್ ಅವರ ಸ್ಥಾನಕ್ಕೆ ಗಿರೀಶ್‌ನಂದನ್ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಆದರೆ ಡಾ|ಯತೀಶ್ ಉಳ್ಳಾಲ್ ಅವರಿಗೆ ಕರ್ತವ್ಯದ ಸ್ಥಳ ತೋರಿಸಲಾಗಿಲ್ಲ.ಅವರು ಮಡಿಕೇರಿ ಉಪವಿಭಾಗಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಗಿರೀಶ್‌ನಂದನ್ ಅವರು ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿಯೂ ಕರ್ತವ್ಯ …

ಪುತ್ತೂರು : ಎ.ಸಿ. ಡಾ.ಯತೀಶ್ ಉಳ್ಳಾಲ್ ಅವರಿಗೆ ವರ್ಗಾವಣೆ ,ನೂತನ ಎ.ಸಿ.ಯಾಗಿ ಗಿರೀಶ್ ನಂದನ್ Read More »

ಮೆಣಸಿನಕಾಯಿ ಬಜ್ಜಿಯಂತೆ ಹಲ್ಲಿಯನ್ನು ಜಗಿದು ಜಗಿದು ತಿಂದ ಭೂಪ!

ಪ್ರಪಂಚದಲ್ಲಿ ದಿನಕ್ಕೊಂದು ರೀತಿಯ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಅಂತೆಯೇ ಇಲ್ಲಿ ವ್ಯಕ್ತಿಯೊಬ್ಬ ಮೆಣಸಿನಕಾಯಿ ಬಜ್ಜಿ ತಿಂದಂತೆ ಹಲ್ಲಿಯನ್ನು ಸಲೀಸಾಗಿ ಅಗೆದು ತಿಂದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಲ್ಲೆಯ ಹೊಸದುರ್ಗ ತಾಲೂಕು ದೊಡ್ಡ ಬ್ಯಾಲದಕೆರೆ ನಿವಾಸಿ ಉಮೇಶ್ ಹಲ್ಲಿ ತಿಂದು ಸುದ್ದಿಯಾಗಿದ್ದಾರೆ. ಅವರು ಸಾರ್ವಜನಿಕರ ಮುಂದೆ ಹಲ್ಲಿಯನ್ನು ಸಲೀಸಾಗಿ ತಿಂದಿದ್ದಾರೆ. ಮದ್ಯ ಸೇವಿಸಿ, ನಶೆಯಲ್ಲಿ ಹಲ್ಲಿ ಸೇವಿಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಹಲ್ಲಿ ತಿಂದರೆ ಅಸ್ವಸ್ಥರಾಗುತ್ತಾರೆ. ಹೆಚ್ಚು ಕಡಿಮೆಯಾದರೆ ಪ್ರಾಣಕ್ಕೆ ಸಮಸ್ಯೆಯಾಗಬಹುದು ಎಂಬ ಮಾತುಗಳ ಮಧ್ಯೆ …

ಮೆಣಸಿನಕಾಯಿ ಬಜ್ಜಿಯಂತೆ ಹಲ್ಲಿಯನ್ನು ಜಗಿದು ಜಗಿದು ತಿಂದ ಭೂಪ! Read More »

ವಿದ್ಯಾರ್ಥಿಗಳೇ ಗಮನಿಸಿ : ಸೆಕೆಂಡ್ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ

2021-22 ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿ ಸಿ ನಾಗೇಶ್ ಅವರು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ‘2021-22 ನೇ ಸಾಲಿನ ದ್ವಿತೀಯ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ ‘ ಎಂದು ಟ್ವೀಟ್ ಮಾಡಿದ್ದಾರೆ ಸಚಿವರು. ಒಟ್ಟು 42 ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ವಿದ್ಯಾರ್ಥಿಗಳ ಆಕ್ಷೇಪಣೆಗಳಿದ್ದರೆ‌ 5 ಫೆಬ್ರವರಿ 2022 ರಂದು …

ವಿದ್ಯಾರ್ಥಿಗಳೇ ಗಮನಿಸಿ : ಸೆಕೆಂಡ್ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ Read More »

ಬೆಳ್ತಂಗಡಿ:ಮುಸ್ಲಿಂ ಸಮುದಾಯದ ಮನೆಯೊಂದರಲ್ಲಿ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ!! ರಾತ್ರೋ ರಾತ್ರಿ ಪೊಲೀಸರೊಂದಿಗೆ ಹಿಂದೂ ಸಂಘಟನೆಯ ದಾಳಿ-ಯುವತಿಯ ರಕ್ಷಣೆ

ಬೆಳ್ತಂಗಡಿ: ಇಲ್ಲಿನ ಕಾಣಿಯೂರು ಗ್ರಾಮದ ಮುಸ್ಲಿಂ ಸಮುದಾಯದ ಮನೆಯೊಂದರಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ಇದ್ದಾರೆ ಎಂಬ ಮಾಹಿತಿಯ ಮೇರೆಗೆ ಪೊಲೀಸರ ಸಮ್ಮುಖದಲ್ಲಿ ಹಿಂದೂ ಸಂಘಟನೆಗಳು ದಾಳಿ ನಡೆಸಿ ಯುವತಿಯನ್ನು ರಕ್ಷಿಸಿದ್ದು, ಬಳಿಕ ಉಪ್ಪಿನಂಗಡಿ ಠಾಣೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆಯೇ ಮನೆಗೆ ಅಕ್ರಮ ಪ್ರವೇಶ ಹಾಗೂ ಬೆದರಿಕೆ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ: ಬೆಳ್ತಂಗಡಿಯ ಮುಸ್ಲಿಂ ಸಮುದಾಯವೊಂದರ ಮೈಮುನ ಎಂಬವರ ಸಂಬಂಧಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ನಿವಾಸಿ ಯುವಕನೊಂದಿಗೆ ಅದೇ ಊರಿನ ಹಿಂದೂ ಯುವತಿ …

ಬೆಳ್ತಂಗಡಿ:ಮುಸ್ಲಿಂ ಸಮುದಾಯದ ಮನೆಯೊಂದರಲ್ಲಿ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ!! ರಾತ್ರೋ ರಾತ್ರಿ ಪೊಲೀಸರೊಂದಿಗೆ ಹಿಂದೂ ಸಂಘಟನೆಯ ದಾಳಿ-ಯುವತಿಯ ರಕ್ಷಣೆ Read More »

ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ನಾಪತ್ತೆ ಪ್ರಕರಣಕ್ಕೆ ತಿರುವು!! ಮುಸ್ಲಿಂ ಎಂದು ಗೊತ್ತಿದ್ದರೂ ಆತನನ್ನು ಪ್ರೀತಿಸಿದ್ದೇನೆ ಎಂದವಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದೇಕೆ!??

ಶೃಂಗೇರಿಯಲ್ಲಿ ಯುವತಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ವೊಂದು ದೊರಕಿದೆ. ನಾಪತ್ತೆಯಾಗಿರುವ ಯುವತಿ ವೀಡಿಯೋ ಮೂಲಕ ತಿರುಗೇಟು ನೀಡಿದ್ದಾಳೆ. ತಾನು ತನ್ನಿಷ್ಟದಂತೆ ತಾನು ಪ್ರೀತಿಸುತ್ತಿರುವ ಯುವಕನ ಜೊತೆ ತೆರಳಿದ್ದು, ನಾವಿಬ್ಬರೂ ಮದುವೆಯಾಗಲಿದ್ದೇವೆ ಎಂದು ಹೇಳಿರುವ ಮಾತಿನ ವೀಡಿಯೋವೊಂದು ಈಗ ವೈರಲ್ ಆಗಿದೆ. ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದ ಹಿಂದೂ ಸಮುದಾಯ ಯುವತಿಗೆ ಈ ಹಿಂದೆ ಶಿವಮೊಗ್ಗದಲ್ಲಿ ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಮೂಡಿಗೆರೆ ಪಟ್ಟಣದ ಬಾಪು ಜುನೈದ್ ಎಂಬಾತನ ಪರಿಚಯವಾಗಿದೆ. ನಂತರ ಪರಿಚಯ ಪ್ರೀತಿಗೆ ತಿರುಗಿದೆ ಎನ್ನಲಾಗಿದೆ. …

ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ನಾಪತ್ತೆ ಪ್ರಕರಣಕ್ಕೆ ತಿರುವು!! ಮುಸ್ಲಿಂ ಎಂದು ಗೊತ್ತಿದ್ದರೂ ಆತನನ್ನು ಪ್ರೀತಿಸಿದ್ದೇನೆ ಎಂದವಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದೇಕೆ!?? Read More »

ಕುಂದಾಪುರದ ಸರ್ಕಾರಿ ಕಾಲೇಜಿಗೂ ಕಾಲಿಟ್ಟ ಹಿಜಾಬ್ ವಿವಾದ | 40 ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಹಾಜರ್!!

ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿಜಾಬ್ ವಿವಾದ ಇದೀಗ ಕುಂದಾಪುರದ ಹಾಲಾಡಿಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿಗೂ ಕಾಲಿಟ್ಟಿದ್ದು, 40 ಹಿಂದೂ ಹುಡುಗರು ಕೇಸರಿ ಶಾಲು ಧರಿಸಿ ಬರುವ ಮೂಲಕ ಹಿಜಾಬ್ ಗೆ ಕೌಂಟರ್ ನೀಡುತ್ತಿದ್ದಾರೆ. ಈಗಾಗಲೇ ಈ ಕಾಲೇಜಿಗೆ 27 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಆಗಮಿಸುತ್ತಿದ್ದಾರೆ. ಸಮಸ್ಯೆ ಪರಿಹರಿಸಲು ಶಾಸಕ ಹಾಲಾಡಿ ಶಾಸಕ ಶ್ರೀನಿವಾಸ ಶೆಟ್ಟಿಯವರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರ ಮನವೊಲಿಸುವ ಪ್ರಯತ್ನ ಮಾಡಲಾಗಿದೆ. ಶಾಸಕರು ಶಿಕ್ಷಣ ಸಚಿವರಾದ …

ಕುಂದಾಪುರದ ಸರ್ಕಾರಿ ಕಾಲೇಜಿಗೂ ಕಾಲಿಟ್ಟ ಹಿಜಾಬ್ ವಿವಾದ | 40 ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಹಾಜರ್!! Read More »

ಸುಳ್ಯ: ಕುಟುಂಬ ಸದಸ್ಯರೊಂದಿಗೆ ನದಿಯಲ್ಲಿ ಸ್ನಾನಕ್ಕಿಳಿದ ಆರು ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಸಾವು! ಸುಳ್ಯ ಸಮೀಪದ ಪೈಚಾರು ಬಳಿ ಘಟನೆ

ಸುಳ್ಯ:ಕುಟುಂಬ ಸದಸ್ಯರೊಂದಿಗೆ ನದಿಗೆ ಸ್ನಾನಕ್ಕೆ ತೆರಳಿದ್ದ ಆರು ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಪೈಚಾರು ದೊಡೆರಿ ಎಂಬಲ್ಲಿ ನಡೆದಿದೆ.ಮೃತ ಬಾಲಕನನ್ನು ಕುಪ್ಪರ(06) ಎಂದು ಗುರುತಿಸಲಾಗಿದೆ. ಘಟನೆ ವಿವರ: ಆಂಧ್ರ ಮೂಲದ ಕುಟುಂಬವೊಂದು ಪೈಚಾರು ಬಳಿಯಲ್ಲಿ ಟೆಂಟ್ ಒಂದನ್ನು ನಿರ್ಮಿಸಿ ವಾಸಿಸುತ್ತಾ ಬುಟ್ಟಿ ಹೆಣೆಯುವ ಕಾಯಕ ಮಾಡಿಕೊಂಡಿದ್ದರು. ಇಂದು ಕುಟುಂಬದ ಹಿರಿಯರು ಹಾಗೂ ಮಕ್ಕಳು ನದಿಗೆ ಸ್ನಾನಕ್ಕೆ ತೆರಳಿದ್ದು, ಈ ವೇಳೆ ಆರು ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದಾನೆ. ಕೂಡಲೇ ಕುಟುಂಬ …

ಸುಳ್ಯ: ಕುಟುಂಬ ಸದಸ್ಯರೊಂದಿಗೆ ನದಿಯಲ್ಲಿ ಸ್ನಾನಕ್ಕಿಳಿದ ಆರು ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಸಾವು! ಸುಳ್ಯ ಸಮೀಪದ ಪೈಚಾರು ಬಳಿ ಘಟನೆ Read More »

ಬಾಲಿವುಡ್ ನ ಖ್ಯಾತ ಹಾಸ್ಯ ನಟ, ‘ಗುತ್ತಿ’ ಪಾತ್ರಧಾರಿಯ ಸುನೀಲ್ ಗ್ರೋವರ್ ಎದೆನೋವಿನಿಂದಾಗಿ ಆಸ್ಪತ್ರೆಗೆ ದಾಖಲು

ಹಾಸ್ಯನಟ ಕಪಿಲ್ ಶರ್ಮಾ ಅವರ ‘ ದಿ ಕಪಿಲ್ ಶರ್ಮಾ’ ಶೋ ನಲ್ಲಿ ‘ ಗುತ್ತಿ’ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ ನಟ ಸುನೀಲ್ ಗ್ರೋವರ್ ವೆಬ್ ಸರಣಿ ಚಿತ್ರೀಕರಣದಲ್ಲಿ ಮುಂಬೈನಲ್ಲಿ ತೊಡಗಿದ್ದಂತ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡಿದ್ದರಿಂದ ಏಷ್ಯನ್ ಹಾರ್ಟ್ ಇನ್ ಸ್ಟಿಟ್ಯೂಟ್ ಗೆ ಚಿಕಿತ್ಸೆಗಾಗಿ ದಾಖಲಾಗಿದ್ದು,‌ಈಗ ಶಸ್ತ್ರ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಸುನೀಲ್ ಗ್ರೋವರ್ ( 44) ಎದೆನೋವಿನಿಂದ ಆಸ್ಪತ್ರೆಗೆ …

ಬಾಲಿವುಡ್ ನ ಖ್ಯಾತ ಹಾಸ್ಯ ನಟ, ‘ಗುತ್ತಿ’ ಪಾತ್ರಧಾರಿಯ ಸುನೀಲ್ ಗ್ರೋವರ್ ಎದೆನೋವಿನಿಂದಾಗಿ ಆಸ್ಪತ್ರೆಗೆ ದಾಖಲು Read More »

ಕೇಂದ್ರ ಸರ್ಕಾರಿ ನೌಕರರಿಗೊಂದು ಮಹತ್ವದ ಮಾಹಿತಿ |ಕುಟುಂಬ ಪಿಂಚಣಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿ !!

ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಕುಟುಂಬ ಪಿಂಚಣಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮವನ್ನು ಹೊರಡಿಸಿದ್ದು, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಬಗ್ಗೆ ‌ಮಾಹಿತಿ ನೀಡಿದ್ದಾರೆ. ಜಿತೇಂದ್ರ ಸಿಂಗ್ ಹೇಳಿರುವ ಪ್ರಕಾರ, ಮರಣ ಹೊಂದಿದ ಸರ್ಕಾರಿ ನೌಕರರ ಮಾನಸಿಕ ವಿಕಲಚೇತನ ಮಕ್ಕಳೂ ಕೂಡ ಇದೀಗ ಕುಟುಂಬ ಪಿಂಚಣಿ ಪ್ರಯೋಜನ ಪಡೆಯಲಿದ್ದಾರೆ. ಅಂದರೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ಕೂಡ ಕುಟುಂಬ ಪಿಂಚಣಿಗೆ ಅರ್ಹರಾಗಿರುತ್ತಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕುಟುಂಬ ಪಿಂಚಣಿ ಲಾಭ ಸಿಗದ …

ಕೇಂದ್ರ ಸರ್ಕಾರಿ ನೌಕರರಿಗೊಂದು ಮಹತ್ವದ ಮಾಹಿತಿ |ಕುಟುಂಬ ಪಿಂಚಣಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿ !! Read More »

ವಾಟ್ಸಪ್ ಮೂಲಕ ಒಂದಾದ ಕಿವುಡ-ಮೂಗರ ಪ್ರೀತಿಯ ಪಯಣ| ಬರವಣಿಗೆ ಮೂಲಕ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿ ದಾಂಪತ್ಯಕ್ಕೆ ಕಾಲಿರಿಸಿದ ಜೋಡಿ |ವಿಶೇಷವಾದ ಈ ‘ಲವ್ ಬರ್ಡ್ಸ್ ‘ಗಳ ರೋಚಕ ಕಹಾನಿ ಇಲ್ಲಿದೆ ನೋಡಿ

ಪ್ರೀತಿಗೆ ಮಾತು ಮುಖ್ಯವಲ್ಲ ಭಾವನೆ, ಇಬ್ಬರ ನಡುವೆ ಇರುವ ಅನ್ಯೋನ್ಯತೆ ಮುಖ್ಯ ಎಂಬುದಕ್ಕೆ ಸಾಕ್ಷಿಯಾಗಿದೆ ಇವರಿಬ್ಬರ ಬಾಂಧವ್ಯ.ಹೌದು ಈ ಜೋಡಿ ವಿಸ್ಮಯದಲ್ಲಿ ಒಂದು ಎಂದೇ ಹೇಳಬಹುದು. ಯಾಕಂದ್ರೆ ಈ ಯುವ ಲವ್ ಬರ್ಡ್ಸ್ ಗಳು ಸಾಮಾನ್ಯರಂತೆ ಅಲ್ಲ,ಇದು ಕಿವುಡ -ಮೂಗರ ಪ್ರೀತಿಯ ಪಯಣ. ಹೌದು.ಅವರಿಬ್ಬರೂ ಕಿವಿ ಕೇಳದ, ಮಾತು ಬಾರದ ಸ್ನೇಹಿತರು. ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತೆಯೇ ಅವರಿಬ್ಬರ ಮಧ್ಯದಲ್ಲಿನ ಸ್ನೇಹ ಪ್ರೀತಿಗೆ ತಿರುಗಿದೆ. ಇವರ ಪ್ರೇಮ ನಿವೇದನೆಗೆ ಕೊಂಡಿಯಾಗಿದ್ದು ವಾಟ್ಸ್‌ಆ್ಯಪ್‌.ಪರಸ್ಪರ ಸನ್ನೆ ಮೂಲಕವೇ ಸಂಭಾಷಿಸುವ ಈ ಯುವ ಜೋಡಿ …

ವಾಟ್ಸಪ್ ಮೂಲಕ ಒಂದಾದ ಕಿವುಡ-ಮೂಗರ ಪ್ರೀತಿಯ ಪಯಣ| ಬರವಣಿಗೆ ಮೂಲಕ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿ ದಾಂಪತ್ಯಕ್ಕೆ ಕಾಲಿರಿಸಿದ ಜೋಡಿ |ವಿಶೇಷವಾದ ಈ ‘ಲವ್ ಬರ್ಡ್ಸ್ ‘ಗಳ ರೋಚಕ ಕಹಾನಿ ಇಲ್ಲಿದೆ ನೋಡಿ Read More »

error: Content is protected !!
Scroll to Top