ಕರ್ನಾಟಕ ಸೆಂಟ್ರಲ್ ಕೋ ಅಪರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ | ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ | ಮಾಸಿಕ ರೂ‌ 24,000/- ವೇತನ

ಕರ್ನಾಟಕ ಸೆಂಟ್ರಲ್ ಕೋ ಅಪರೇಟಿವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

ಹುದ್ದೆ : ಸಿಪಾಯಿ
ಒಟ್ಟು ಹುದ್ದೆಗಳ ಸಂಖ್ಯೆ : 52
ಕರ್ತವ್ಯ ಸ್ಥಳ : ಧಾರವಾಡ

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-01-2022 ಬೆಳಗ್ಗೆ 10 ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 19, 2022 ಸಂಜೆ 05 ಗಂಟೆಯವರೆಗೆ ಮಾತ್ರ

ವಯೋಮಿತಿ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಪ.ಜಾತಿ/ ಪ.ಪಂ/ಪ್ರವರ್ಗ 1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.

ಶೈಕ್ಷಣಿಕ ಅರ್ಹತೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಭಾಷೆಯನ್ನು ಒಂದು ಭಾಷೆಯಾಗಿ ಓದಿರಬೇಕು.

ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.12,500/- ರಿಂದ ರೂ.24,000/- ರವರೆಗೆ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ : ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ, ಅಂಕಗಳ ಶೇಕಡವಾರು ಮೆರಿಟ್ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು.

ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶೇಕಡಾ 85 ಕ್ಕಿಳಿಸಿ ಉಳಿದ ಪ್ರತಿಶತ 15 ಅಂಕಗಳನ್ನು ಸಂದರ್ಶನಕ್ಕೆ ನೀಡಲಾಗುವುದು. ಸದರಿ ಅಂಕಗಳನ್ನು ಒಟ್ಟು ಸೇರಿಸಿ ರ್ಯಾಂಕಿಂಗ್ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ರೂ.500/-
ಪ.ಜಾ/ಪ.ಪಂ/ಪ್ರವರ್ಗ 1 / ಅಂಗವಿಕಲ/ಮಾಜಿ ಸೈನಿಕ/ ವಿಧವಾ ಅಭ್ಯರ್ಥಿಗಳು ರೂ. 250 ಮೌಲ್ಯದ ಕ್ರಾಸ್ ಮಾಡಿದ ಡಿಮ್ಯಾಂಡ್ ಡ್ರಾಫ್ಟ್ ( ಡಿಡಿ) ನ್ನು ” ಸದಸ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೆ.ಸಿ.ಸಿ.ಬ್ಯಾಂಕ್ ಲಿ., ಧಾರವಾಡ ” ಈ ಹೆಸರಿನಲ್ಲಿ ಪಡೆದು ಸಲ್ಲಿಸಬೇಕು.

ಅಭ್ಯರ್ಥಿಗಳು ಅಂಚೆ ಮೂಲಕ ಅಥವಾ ಖುದ್ದಾಗಿ ಅರ್ಜಿಯನ್ನು ಸಲ್ಲಿಸಬೇಕು. ಬ್ಯಾಂಕ್ ನ ಅಧಿಕೃತ ವೆಬ್‌ಸೈಟ್‌ ನಿಂದ ಅರ್ಜಿ ನಮೂನೆಯನ್ನು ಪಡೆದು, ನಂತರ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯ ಜೊತೆ ಅವಶ್ಯ ದಾಖಲೆಗಳನ್ನು ಲಗತ್ತಿಸಬೇಕು. ಜೊತೆಗೆ ಅರ್ಜಿ ಶುಲ್ಕದ ಡಿಡಿಯನ್ನು ಕೂಡ ಲಗತ್ತಿಸಿ ಅಂಚೆ ಮೂಲಕ ಅಥವಾ ರಿಜಿಸ್ಟರ್ ಅಂಚೆ ಮೂಲಕ ಅಥವಾ ಖುದ್ದಾಗಿ ಈ ಕೆಳಗೆ ನೀಡಲಾಗಿರುವ ಕಚೇರಿಯ ವಿಳಾಸಕ್ಕೆ ತಲುಪಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ : ಸದಸ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೆ.ಸಿ.ಸಿ.ಬ್ಯಾಂಕ್ ಲಿ., ಪ್ರಧಾನ ಕಚೇರಿ, ಸುಭಾಸ ರೋಡ, ಧಾರವಾಡ – 580001

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ.

Leave A Reply

Your email address will not be published.