ದ‌.ಕ : ಈ ಬಾರಿಯ ಕಂಬಳದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಜಿಲ್ಲಾ ಕಂಬಳ ಸಮಿತಿ| ಪುತ್ತೂರು ಮಾರ್ಚ್ 19 ಹಾಗೂ ಎ.2 ರಂದು ಉಪ್ಪಿನಂಗಡಿ ಕಂಬಳ

ಮಂಗಳೂರು : ಕೊರೊನಾ ಮಹಾಮಾರಿಯಿಂದ ಹಾಗೂ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಗಳಿಂದ ನಿಂತು ಹೋಗಿದ್ದ ಕಂಬಳ ಈಗ ಮತ್ತೆ ಪ್ರಾರಂಭವಾಗಿದೆ.

ಜನವರಿಯಿಂದ ಯಾವುದೇ ಕಂಬಳ ಕೂಟ ನಡೆದಿರಲಿಲ್ಲ. ಆದರೆ ಸರಕಾರ ಇದೀಗ ಜ.31ರ ಬಳಿಕ ನೈಟ್ ಕರ್ಫ್ಯೂ ತೆರವುಗೊಳಿಸಿ‌ದ್ದರಿಂದ ಈ ಹಿನ್ನೆಲೆಯಲ್ಲಿ ಸಭೆ ಸೇರಿದ ಜಿಲ್ಲಾ ಕಂಬಳ‌ ಸಮಿತಿಯ ಬಾಕಿಯುಳಿದ ಕಂಬಳ‌ ನಡೆಸಲು ಪರಿಷ್ಕೃತ ವೇಳಾಪಟ್ಟಿ ಸಿದ್ಧಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಕಂಬಳ ಎಂಬ ಖ್ಯಾತಿಗೆ ಪಾತ್ರವಾಗಿರುವ ಪುತ್ತೂರು ಕಂಬಳವು ಮಾ.19 ರಂದು ಪ್ರಾರಂಭವಾಗಲಿದೆ. ಹಾಗೂ ಉಪ್ಪಿನಂಗಡಿ ಕಂಬಳವು ಎ.2 ರಂದು ನಡೆಯಲಿದೆ.

ಕಂಬಳ‌ ಆಯೋಜನೆಯ ಸಂದರ್ಭ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ದ.ಕ-ಉಡುಪಿ-ಕಾಸರಗೋಡು ಕಂಬಳ ಕೇಂದ್ರ ಸಮಿತಿ ತಿಳಿಸಿದೆ.

ಪರಿಷ್ಕೃತ ವೇಳಾಪಟ್ಟಿ ವಿವರ ಈ ಕೆಳಗಿನಂತಿದೆ :

05-02-2022 ಶನಿವಾರ -ಬಾರಾಡಿ ಬೀಡು ಕಂಬುಲ
13-02-2022 ರವಿವಾರ – ಅಡ್ವೆ ನಂದಿಕೂರ್
19-02-2022 ಶನಿವಾರ – ವಾಮಂಜೂರು‌ ಕಂಬುಲ
26-02-2022 ಶನಿವಾರ- ಐಕುಳ ಬಾವ ಕಂಬುಲ
05-03-2022 ಶನಿವಾರ – ಪೈವಳಿಕೆ ಕಂಬುಲ
12-03-2022 ಶನಿವಾರ – ಕಟಪಾಡಿ ಕಂಬುಲ
19-03-2022 – ಶನಿವಾರ – ಪುತ್ತೂರು ಕಂಬುಲ
26-03-2022 ಶನಿವಾರ – ಬಂಗ್ರಕೂಳೂರು, ಮಂಗಳೂರು ಕಂಬುಲ
2-04-2022- ಉಪ್ಪಿನಂಗಡಿ
09-04-2022 – ಬಂಗಾಡಿ
16-04-2022- ವೇಣೂರು

Leave A Reply

Your email address will not be published.