ಬೆಳ್ತಂಗಡಿ:ಆರಂಬೋಡಿಯ ಕಾಂಗ್ರೆಸ್ಸಿಗರಿಗೆ ತೀವ್ರ ಮುಖಭಂಗ !! |ಡಾಮರೀಕರಣ ಅನುಮಾನಿಸಿ ಅಧಿಕಾರಿಗಳನ್ನು ಕರೆಸಿ ಪರಿಶೀಲಿಸಿದಾಗ ಸರಿಯಾಗಿದ್ದ ಕಾಮಗಾರಿ

ಬೆಳ್ತಂಗಡಿ ತಾಲೂಕಿನ ಆರಂಬೋಡಿಯ ಕಾಂಗ್ರೇಸ್ ಗೆ ತೀವ್ರ ಮುಖಭಂಗವಾದ ಘಟನೆಯೊಂದು ಬೆಳಕಿಗೆ ಬಂದಿದೆ. ರಸ್ತೆಯ ಕಳಪೆ ಕಾಮಗಾರಿ ಕುರಿತು ಆರೋಪ ಮಾಡಿ ಅಧಿಕಾರಿಗಳನ್ನು ಕರೆಸಿ ಪರಿಶೀಲಿಸಿದಾಗ ಡಾಮರೀಕರಣದಲ್ಲಿ ಕಳಪೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿರುವ ಪ್ರಸಂಗವೊಂದು ವರದಿಯಾಗಿದೆ.

ಆರಂಬೋಡಿ ಗ್ರಾಮದ ಕೂಡುರಸ್ತೆಯಿಂದ ಹೊಸಂಗಡಿ ಗ್ರಾಮದ ರಸ್ತೆವರೆಗೆ ರೂ 75 ಲಕ್ಷ 30 ಸಾವಿರ ವೆಚ್ಚದಲ್ಲಿ ಮರು ಡಾಮರೀಕರಣ ನಡೆದಿದೆ. ಆದರೆ ಈ ರಸ್ತೆಯ ಬಗ್ಗೆ ಕಾಂಗ್ರೆಸ್ಸಿಗರು ಕಳಪೆ ಕಾಮಗಾರಿ ಎಂದು ಆರೋಪ ಮಾಡಿ ಜ.27 ರಂದು ಅಧಿಕಾರಿಗಳನ್ನು ಕರೆಯಿಸಿ ಪರಿಶೀಲಿಸಿದಾಗ ಕಾಮಗಾರಿ ಸರಿ ಇರುವುದಾಗಿ ತಿಳಿಸಿದಾಗ ಕಾಂಗ್ರೆಸ್ಸಿಗರ ಸ್ಥಿತಿ ಇಂಗು ತಿಂದ ಮಂಗನಂತಾಗಿತ್ತು.

ಮೊಸರಲ್ಲಿ ಕಲ್ಲು ಹುಡುಕಿದರೆ ಬೆಣ್ಣೆ ಸಿಗಬಹುದೆ ವಿನಃ ಕಲ್ಲು ಸಿಗಲಾರದು ಎಂಬ ಮಾತಿಗೆ ಈ ಘಟನೆ ಸಾಕ್ಷಿಯಾಗಿದೆ. ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ಸಿಗರಿಗೆ ಹೀಗೆ ಆಗಬೇಕೆಂದು ಸಾರ್ವಜನಿಕರು ಮಾತನಾಡಿಕೊಂಡಿದ್ದಂತೂ ಸತ್ಯ.

Leave A Reply

Your email address will not be published.