ಮುಂಜಾನೆ ತಾಯಿಯ ಮಡಿಲಿಂದ ಎದ್ದು ಹೋದ ಯುವಕ ಬಾರದ ಲೋಕಕ್ಕೇ ಪ್ರಯಾಣಿಸಿದ| ಬೆಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಡಬದ ಯುವಕ ಮೃತ್ಯು-ಇನ್ನೋರ್ವನಿಗೆ ಗಾಯ
ಕಡಬ: ಉದ್ಯೋಗದ ನಿಮಿತ್ತ ಸ್ನೇಹಿತನೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದಾಗ ಬೈಕ್ ಅಪಘಾತ ಸಂಭವಿಸಿ ಆಲಂಕಾರು ನಿವಾಸಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದ್ದು, ಮೃತ ಯುವಕನನ್ನು ಆಲಂಕಾರು ನಿವಾಸಿ ರಾಜೀವಿ ಎಂಬವರ ಪುತ್ರ ನಂದೀಪ್(21) ಎಂದು ಗುರುತಿಸಲಾಗಿದೆ. ಮೃತ ಯುವಕ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಜನವರಿ 31 ರಂದು ಮುಂಜಾನೆ ಹಳೇನೇರೆಂಕಿಯ ತನ್ನ ಸ್ನೇಹಿತನೊಂದಿಗೆ ಬೆಂಗಳೂರಿಗೆ ಬೈಕ್ ನಲ್ಲಿ ತೆರಳಿದ್ದಾರೆ. ಬೆಂಗಳೂರು ತಲುಪುತ್ತಿದ್ದಂತೆ ಆಟೋ ರಿಕ್ಷಾ ಒಂದಕ್ಕೆ ಯುವಕರು ಚಲಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಯುವಕ …