ದಲಿತ ಯುವಕನ ಥಳಿಸಿ ಮೂತ್ರ ಕುಡಿಸಿದ ಯುವಕರು | ಹಲಗೆ ಬಾರಿಸಿದ್ದನ್ನೇ ನೆಪ ಮಾಡಿ ವಿಕೃತಿ ಮೆರೆದ 8 ಜನರ ಗುಂಪು!!

ದಲಿತ ಯುವಕನೊಬ್ಬನನ್ನು 8 ಜನ ಸೆರಿಕೊಂಡು ಥಳಿಸಿ ಆತನಿಗೆ ಮೂತ್ರ ಕುಡಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ತಮ್ಮ ಎದುರು ಹಲಗೆ ಬಾರಿಸಿದನೆಂಬ ಕ್ಷುಲ್ಲಕ ಕಾರಣಕ್ಕೆ 8 ಜನ ಸೇರಿಕೊಂಡು ಥಳಿಸಿದ ಆತನಿಗೆ ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾರೆ. ಈ ಘಟನೆ ರಾಜಸ್ಥಾನದ ಚೂರೂ ಜಿಲ್ಲೆಯಲ್ಲಿ ನಡೆದಿದೆ.

ಜನವರಿ‌ 27 ರಂದು ಎಸ್ ಯುವಿಯಲ್ಲಿ ಸಂತ್ರಸ್ತ ಯುವಕ ರುಕ್ಸಾರ್ ಗ್ರಾಮದ ರಾಕೇಶ್ ಮೇಘವಾಲ್ ಮನೆಗೆ ಬಂದಿದ್ದ 8 ಜನಗಳ ಗುಂಪು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮಾನವೀಯವಾಗಿ ವರ್ತಿಸಿದ 6 ಜನರ ಬಂಧನಕ್ಕೆ ಬಲೆ ಬೀಸಲಾಗಿದ್ದು, ಬಂಧಿತರ ಮೇಲೆ‌ ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹಿಮಾಂಶು ಶರ್ಮಾ ತಿಳಿಸಿದ್ದಾರೆ.

Leave A Reply

Your email address will not be published.