Day: January 28, 2022

ಕಡಬ : ಅನಾರೋಗ್ಯದಿಂದ ಬಿ.ಕಾಂ.ವಿದ್ಯಾರ್ಥಿ ಸಾವು

ಕಡಬ : ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇಚ್ಲಂಪಾಡಿ ಗ್ರಾಮದ ಲಾವತ್ತಡ್ಕ ರುದ್ರಮಜಲು ನಿವಾಸಿ ನಂದಕುಮಾರ್(19ವ.)ರವರು ಜ.27ರಂದು ಸಂಜೆ ನಿಧನರಾಗಿದ್ದಾರೆ. ನೆಲ್ಯಾಡಿಯ ಕಾಲೇಜೊಂದರಲ್ಲಿ ಪ್ರಥಮ ಬಿ.ಕಾಂ.ವಿದ್ಯಾಥಿಯಾಗಿದ್ದ ನಂದಕುಮಾರ್ ನಾಲ್ಕು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ದಿಢೀರ್ ತೀವ್ರ ಅನಾರೋಗ್ಯಕ್ಕೆ ತುತ್ತಾದ ನಂದಕುಮಾರ್ ರವರನ್ನು ಜ 26ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಗೆ ಸ್ಪಂದಿಸದ ಅವರು ಜ.27ರಂದು ಸಂಜೆ ನಿಧನರಾಗಿದ್ದಾರೆ. ಮೃತ ಬಾಲಕ ತಂದೆ ಸುರೇಂದ್ರ ಕುಮಾರ್, ತಾಯಿ ಬಿಂದು, ಸಹೋದರ …

ಕಡಬ : ಅನಾರೋಗ್ಯದಿಂದ ಬಿ.ಕಾಂ.ವಿದ್ಯಾರ್ಥಿ ಸಾವು Read More »

ಮಂಗಳೂರು : ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತಾಧಿಕಾರಿ ಆತ್ಮಹತ್ಯೆ

ಕುಪ್ಪೆಪದವು : ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತಾಧಿಕಾರಿ ನಾಗರಾಜ್ ರಾವ್ ( 58) ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ರಾತ್ರಿ ವೇಳೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಕಂಡ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲೇ ರಾವ್ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಬ್ಯಾಂಕ್ ಗೆ ಸಂಬಂಧಪಟ್ಟ ವಿಚಾರದಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇವರು ವಾಮಂಜೂರು ತಿರುವೈಲು ತಾರಿಗುಡ್ಡೆ ನಿವಾಸಿಯಾಗಿದ್ದಾರೆ.

ಬಿ.ಎಸ್.ವೈ ಮೊಮ್ಮಗಳ ಆತ್ಮಹತ್ಯೆ ಪ್ರಕರಣ : ಮರಣೋತ್ತರ ವರದಿಯಲ್ಲೇನಿದೆ ? ವೈದ್ಯರ ಹೇಳಿಕೆ ಏನು ? ಇಲ್ಲಿದೆ ಮಾಹಿತಿ

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದೆ. ಹಾಗೂ ವೈದ್ಯರು ಅಧಿಕಾರಿಗಳಿಗೆ ಮರಣೋತ್ತರ ಪರೀಕ್ಷೆ ವರದಿ ಹಸ್ತಾಂತರಿಸಿದ್ದಾರೆ. ಡಾ.ಸೌಂದರ್ಯ ಅವರ ಮರಣೋತ್ತರ ಪರೀಕ್ಷೆ ಬೌರಿಂಗ್ ಆಸ್ಪತ್ರೆಯಲ್ಲಿ ಮುಗಿದಿದ್ದು, ಮೂವರು ವೈದ್ಯರು ಹಾಗೂ ತಹಶೀಲ್ದಾರ್ ಸಮ್ಮುಖದಲ್ಲಿ ಪೋಸ್ಟ್ ಮಾರ್ಟಮ್ ಮಾಡಲಾಗಿದೆ. ಡಾ.ಸತೀಶ್ ಅವರು ಪೋಸ್ಟ್ ಮಾರ್ಟಮ್ ರಿಪೋರ್ಟ್ ನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮೇಲ್ನೋಟಕ್ಕೆ ಡಾ.ಸೌಂದರ್ಯ ಅವರ ಕುತ್ತಿಗೆ ಭಾಗದಲ್ಲಿ ಮಾತ್ರ ಮಾರ್ಕ್ ಇದೆ. ಮರಣೋತ್ತರ ಪರೀಕ್ಷಾ …

ಬಿ.ಎಸ್.ವೈ ಮೊಮ್ಮಗಳ ಆತ್ಮಹತ್ಯೆ ಪ್ರಕರಣ : ಮರಣೋತ್ತರ ವರದಿಯಲ್ಲೇನಿದೆ ? ವೈದ್ಯರ ಹೇಳಿಕೆ ಏನು ? ಇಲ್ಲಿದೆ ಮಾಹಿತಿ Read More »

ಬೆಳ್ತಂಗಡಿ :ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನಾಪತ್ತೆ

ಬೆಳ್ತಂಗಡಿ: ಖಾಸಗಿ ವಿದ್ಯಾ ಸಂಸ್ಥೆಯೊಂದರಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವರು ನಾಪತ್ತೆಯಾದ ಘಟನೆ ನಿನ್ನೆ ನಡೆದಿದೆ. ನಾಪತ್ತೆಯಾದ ವಿದ್ಯಾರ್ಥಿ ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ನಿವಾಸಿ, ಪ್ರಸ್ತುತ ಬೆಳ್ತಂಗಡಿಯ ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿದ್ದು, ಪ್ರಥಮ ವರ್ಷದ ಬಿ.ಎ.ಎಂ.ಎಸ್ ವ್ಯಾಸಂಗ ಮಾಡುತ್ತಿದ್ದರು. ಜ.27 ರಂದು ಬೆಳಿಗ್ಗೆ ಕಾಲೇಜಿಗೆಂದು ಹೋದವರು ಅತ್ತ ಕಾಲೇಜಿಗೂ ಹೋಗದೆ, ಇತ್ತ ಹಾಸ್ಟೆಲ್ ಗೂ ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಹಾಸ್ಟೆಲ್ ನ ವಾರ್ಡನ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಈ ಸಂಬಂಧ ಬೆಳ್ತಂಗಡಿ ಪೊಲೀಸ್ …

ಬೆಳ್ತಂಗಡಿ :ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನಾಪತ್ತೆ Read More »

ಬಂಟ್ವಾಳ:ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ಕುಸಿತ |ಗೋಡೆ ಬಿದ್ದ ವೇಳೆ ಸ್ಥಳದಲ್ಲಿದ್ದ ದ್ವಿಚಕ್ರ ವಾಹನವೊಂದು ಜಖಂ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು ಅಡ್ಡಹೊಳೆವರೆಗೆ ಚತುಷ್ಪತ ರಸ್ತೆಯ ನಿರ್ಮಾಣ ರಾತ್ರಿಹಗಲು ಎನ್ನದೆ ಭರದಿಂದ ನಡೆಯುತ್ತಿದ್ದು, ಈ ವೇಳೆ ಹಲವು ನಷ್ಟಗಳು ಸಂಭವಿಸಿದ್ದು, ಜನರಿಗೆ ಕಿರಿ ಕಿರಿ ಉಂಟು ಮಾಡಿದೆ. ಈ ಕಾಮಗಾರಿಯ ಸಂದರ್ಭದಲ್ಲಿ ರಾಷ್ಟ್ರೀಯಸ್ವಯಂ ಸೇವಕ ಸಂಘದ ಪ್ರಮುಖರಾಗಿರುವಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಮನೆಯಕಾಂಪೌಂಡ್ ಗೋಡೆ ಜರಿದು ಬಿದ್ದು ಲಕ್ಷಾಂತರ ರೂನಷ್ಟ ಸಂಭವಿಸಿದೆ.ಗೋಡೆ ಬಿದ್ದ ವೇಳೆ ಸ್ಥಳದಲ್ಲಿದ್ದ ದ್ವಿಚಕ್ರ ವಾಹನವೊಂದು ಜಖಂ ಆಗಿದೆ. ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ರಸ್ತೆಅಗಲೀಕರಣ ಕಾಮಗಾರಿಗಾಗಿ ಕಲ್ಲಡ್ಕ ಪೇಟೆಯಲ್ಲಿಎಷ್ಟು …

ಬಂಟ್ವಾಳ:ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ಕುಸಿತ |ಗೋಡೆ ಬಿದ್ದ ವೇಳೆ ಸ್ಥಳದಲ್ಲಿದ್ದ ದ್ವಿಚಕ್ರ ವಾಹನವೊಂದು ಜಖಂ Read More »

ದ.ಕ. : ಕೋವಿಡ್ ಸೋಂಕು ಹೆಚ್ಚಳ ,12 ಶಾಲೆಗಳು ಬಂದ್

ಮಂಗಳೂರು : ಶಾಲಾ ಮಕ್ಕಳಲ್ಲಿ ಕೊರೊನಾ ಸೊಂಕು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯಲ್ಲಿ 12 ಶಾಲೆಗಳನ್ನು ಬಂದ್ ಮಾಡಲಾಗಿದೆ. ಜನವರಿ 1 ರಿಂದ 27 ರವರೆಗೆ ಒಟ್ಟು 421 ಶಾಲಾ ಮಕ್ಕಳು ಮತ್ತು 68 ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ. ಜಿಲ್ಲಾಧಿಕಾರಿಯವರು ಶಾಲೆಯಲ್ಲಿ ಐದಕ್ಕಿಂತ ಹೆಚ್ಚು ಕೊವಿಡ್ ಪ್ರಕರಣ ದಾಖಲಾದರೆ ಶಾಲೆ ಮುಚ್ಚುವಂತೆ ಆದೇಶವನ್ನು ನೀಡಿದ್ದರು, ಈ ಹಿನ್ನಲೆಯಲ್ಲಿ ಇದೀಗ 5 ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾದರೂ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಶಾಲೆಗಳ ಮುಖ್ಯಸ್ಥರಿಗೆ …

ದ.ಕ. : ಕೋವಿಡ್ ಸೋಂಕು ಹೆಚ್ಚಳ ,12 ಶಾಲೆಗಳು ಬಂದ್ Read More »

ದೇಶದಲ್ಲಿ ಬುರ್ಖಾ ನಿಷೇಧಿಸಬೇಕು -ರಿಷಿ ಕುಮಾರ್ ಸ್ವಾಮೀಜಿ

ದೇಶದಲ್ಲಿ ಬುರ್ಖಾವನ್ನು ನಿಷೇಧಿಸಬೇಕು. ಕೇವಲ ಶಾಲೆಗಳಲ್ಲಿ ಮಾತ್ರ ಬುರ್ಖಾ ನಿಷೇಧ ಮಾಡುವುದಲ್ಲ. ದೇಶ ಹಾಗೂ ರಾಜ್ಯದಲ್ಲೂ ತ್ರಿವಳಿ ತಲಾಕ್ ನಿಷೇಧ ಮಾಡಿದಂತೆ ಬುರ್ಖಾ ನಿಷೇಧ ಮಾಡಬೇಕು ಎಂದು ರಿಷಿ ಕುಮಾರ್​ ಸ್ವಾಮೀಜಿ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಬುರ್ಖಾ ಧರಿಸಿ ಬಂದರೆ ನಿಮ್ಮ ಗುರುತು ಪತ್ತೆಯಾಗುವುದಿಲ್ಲ. ವಿದ್ಯಾರ್ಥಿನಿಯೇ ಬರುತ್ತಾರೋ ಅವರ ಅಕ್ಕ, ತಂಗಿ, ಅಮ್ಮ ಬರುತ್ತಾರೋ ಹೇಗೆ ಗೊತ್ತಾಗುತ್ತದೆ.? ಪರೀಕ್ಷೆ ಯಾರು ಬರೆಯುತ್ತಾರೆ ಅನ್ನೋದು ಹೇಗೆ ಗೊತ್ತಾಗುತ್ತದೆ. ಶಾಲೆಯ ಶಿಕ್ಷಕರು ತಂದೆ ತಾಯಿಯಂತೆ. ಸಹಪಾಠಿಗಳು ಸಹೋದರರಂತೆ …

ದೇಶದಲ್ಲಿ ಬುರ್ಖಾ ನಿಷೇಧಿಸಬೇಕು -ರಿಷಿ ಕುಮಾರ್ ಸ್ವಾಮೀಜಿ Read More »

ರಾಜ್ಯ ಸರಕಾರಿ ನೌಕರರಿಗೆ ಕೊರೊನಾ ಬಂದರೆ 7 ದಿನಗಳ ವಿಶೇಷ ರಜೆ | ಸರಕಾರದಿಂದ ಆದೇಶ

ಬೆಂಗಳೂರು : ಕೊರೊನಾ ವೈರಸ್ ಸೋಂಕಿಗೆ ಒಳಗಾಗುವ ಸರಕಾರಿ ನೌಕರರಿಗೆ ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಅನ್ವಯವಾಗಲಿದೆ ಎಂದು ಸರಕಾರ ಆದೇಶ ಹೊರಡಿಸಿದೆ. ಸರಕಾರಿ ನೌಕರ ಅಥವಾ ಆತನ ಕುಟುಂಬದ ಸದಸ್ಯರು ಕೋವಿಡ್ 19 ಸಾಂಕ್ರಾಮಿಕ ರೋಗಕ್ಕೆ ಒಳಪಟ್ಟ ಸಂದರ್ಭದಲ್ಲಿ ಹಾಗೂ ಸರಕಾರಿ ನೌಕರನು ವಾಸಿಸುವ ಪ್ರದೇಶದಲ್ಲಿ ಕಂಟೋನ್ಮೆಂಟ್ ಪ್ರದೇಶವೆಂದು ಘೋಷಿಸಿ ಸಾರ್ವಜನಿಕ ಸಂಚಾರದಲ್ಲಿ ಯಾವುದೇ ನಿರ್ಬಂಧ ವಿಧಿಸಿದ್ದಲ್ಲಿ ಅಂತಹ ಸರಕಾರಿ ನೌಕರರಿಗೆ ಗರಿಷ್ಠ 7 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಆತ್ಮಹತ್ಯೆ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬಿ ಎಸ್ ವೈ ಎರಡನೇ ಪುತ್ರಿ ಪದ್ಮಾವತಿ ಮಗಳು ಸೌಂದರ್ಯ (30) ಆತ್ಮಹತ್ಯೆಗೆ ಶರಣಾಗಿದ್ದು,ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಫ್ಲ್ಯಾಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಅವರು, ಎಮ್.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿದ್ದು,2018 ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮರಿಸ್ವಾಮಿ ಅಣ್ಣನ ಮಗ ಡಾ.ನೀರಜ್ ಅವರನ್ನು ಸೌಂದರ್ಯ ಮದುವೆಯಾಗಿದ್ದರು. ಮೃತ ಸೌಂದರ್ಯ ಅವರಿಗೆ ಒಂದು ಮಗು ಇದೆ. ಇವರ …

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಆತ್ಮಹತ್ಯೆ Read More »

ಹೊಸ ವೈರಸ್ ಕುರಿತು ಭಯಾನಕ ಮಾಹಿತಿ ಬಿಚ್ಚಿಟ್ಟ ವುಹಾನ್​ನ ವಿಜ್ಞಾನಿಗಳು|ಈ ವೈರಸ್ ಸೋಂಕಿಗೆ ಒಳಗಾದ ಪ್ರತಿ ಮೂವರಲ್ಲಿ ಓರ್ವರು ಸಾವನ್ನಪ್ಪುವ ಸಾಧ್ಯತೆ ಅಧಿಕ| ‘ನಿಯೋಕಾವ್’ವೈರಸ್ ಕುರಿತು ಇಲ್ಲಿದೆ ಮಾಹಿತಿ

ಕೊರೋನ ಅಟ್ಟಹಾಸ ಅಂತ್ಯ ಕಾಣದೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು,ಇದೀಗ ಜನತೆಗೆ ಮತ್ತೊಂದು ವೈರಸ್ ನ ಶಾಕ್ ಸಿಡಿಲು ಬಡಿದಂಗಾಗಿದೆ.ಹೌದು ವುಹಾನ್​ನ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ರೀತಿಯ ಕೊರೊನಾ ವೈರಸ್​ ‘NeoCov’ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದು ಅತ್ಯಂತ ವೇಗವಾಗಿ ಹರಡುವುದು ಮಾತ್ರವಲ್ಲದೇ ಹೆಚ್ಚಿನ ಸಾವುಗಳನ್ನು ವರದಿ ಮಾಡುತ್ತಿದೆ ಎಂದು ರಷ್ಯಾದ ಸುದ್ದಿ ವಾಹಿನಿಯು ವರದಿ ಮಾಡಿದೆ.ಹೊಸ ಮಾದರಿಯ ಕೊರೊನಾ ವೈರಸ್​ ನಿಯೋಕಾವ್ ನಿಂದ ಎಂದು ವುಹಾನ್​ ವಿಜ್ಞಾನಿಸೋಂಕಿಗೆ ಒಳಗಾದ ಪ್ರತಿ …

ಹೊಸ ವೈರಸ್ ಕುರಿತು ಭಯಾನಕ ಮಾಹಿತಿ ಬಿಚ್ಚಿಟ್ಟ ವುಹಾನ್​ನ ವಿಜ್ಞಾನಿಗಳು|ಈ ವೈರಸ್ ಸೋಂಕಿಗೆ ಒಳಗಾದ ಪ್ರತಿ ಮೂವರಲ್ಲಿ ಓರ್ವರು ಸಾವನ್ನಪ್ಪುವ ಸಾಧ್ಯತೆ ಅಧಿಕ| ‘ನಿಯೋಕಾವ್’ವೈರಸ್ ಕುರಿತು ಇಲ್ಲಿದೆ ಮಾಹಿತಿ Read More »

error: Content is protected !!
Scroll to Top