ಸುಳ್ಯ : ನಾಪತ್ತೆಯಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ಪತ್ತೆ

ಸುಳ್ಯ: ನಾಪತ್ತೆಯಾಗಿದ್ದ ಅಸ್ಸಾಂ ಮೂಲದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಪತ್ತೆಯಾದ ಘಟನೆ ನಡೆದಿದೆ.

ಮಹಿಳೆಯೊಬ್ಬರು ಜ. 25 ರಂದು ಪೈಚಾರು ಮನೆಯಿಂದ ಕಾಣೆಯಾಗಿ ಸಂಜೆಯಾದರೂ ಬಾರದ ಹಿನ್ನೆಲೆಯಲ್ಲಿ ಆಕೆಯ ಪತಿ ಪತಿ ಕೋಗನ್ ತಾತಿ ಅದೇ ದಿನ ಸಂಜೆ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದರು.

ಕಳೆದ ನಾಲ್ಕು ತಿಂಗಳಿಂದ ಸುಳ್ಯದ ಪೈಚಾರು ಸಂಸ್ಥೆ ಯೊಂದರಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸವನ್ನು ಮಾಡುತ್ತಿದ್ದ ಮಹಿಳೆ ಮತ್ತು ಆಕೆಯ ಪತಿ, ಎರಡು ಮಕ್ಕಳೊಂದಿಗೆ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯವರು ನೀಡಿದ ರೂಮೊಂದರಲ್ಲಿ ಜೀವನ ನಡೆಸುತ್ತಿದ್ದರು.

ದೂರನ್ನು ಸ್ವೀಕರಿಸಿದ ಪೊಲೀಸರು ಆಕೆಯನ್ನು ಹುಡುಕುವಲ್ಲಿ ತೊಡಗಿದಾಗ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ರವರಿಗೆ ಮಹಿಳೆಯ ಬಳಿ ಇದ್ದ ಮೊಬೈಲ್ ಫೋನ್ ಲೊಕೇಶನ್ ಕುಂದಾಪುರದಲ್ಲಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಇದರ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಕುಂದಾಪುರ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಅದಾಗಲೇ ವಿಷಯ ಬೆಳಕಿಗೆ ಬಂದಿದ್ದು ಮಹಿಳೆ ತನ್ನ ಪ್ರಿಯಕರ ಚಂದನ್ ಎಂಬ ವ್ಯಕ್ತಿಯೊಂದಿಗೆ ಮನೆ ಬಿಟ್ಟು ಬಂದಿದ್ದು ಆತನೊಂದಿಗೆ ಇರುವುದಾಗಿ ತೀರ್ಮಾನ ಕೈಗೊಂಡಿದ್ದರು ಎನ್ನಲಾಗಿದೆ.

ಆಕೆಯನ್ನು ಕುಂದಾಪುರದ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂಬ ವಿಷಯ ತಿಳಿದ ಆಕೆಯ ಪತಿ ತನ್ನ ಒಬ್ಬ ಪರಿಚಯಸ್ಥರನ್ನು ಕರೆದುಕೊಂಡು ಕುಂದಾಪುರಕ್ಕೆ ಹೋಗಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಇದ್ದ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕಂಡು ಪೊಲೀಸರೊಂದಿಗೆ ನನ್ನ ಪತ್ನಿಯನ್ನು ನನ್ನೊಂದಿಗೆ ಕಳಿಸಿಕೊಡುವಂತೆ ಕೇಳಿಕೊಂಡರು ಎನ್ನಲಾಗಿದೆ.

ಆಗ ಆ ಮಹಿಳೆ ತಾನು ಗಂಡನ ಬಳಿ ಹೋಗುವುದಿಲ್ಲ ತನ್ನ ಪ್ರೇಮಿ ಚಂದನ್ ರವರ ಜೊತೆ ಇರುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಆಕೆಗೆ ಬುದ್ಧಿವಾದ ಹೇಳಿದ ಕುಂದಾಪುರ ಪೊಲೀಸರು ಜನವರಿ 26ರಂದು ರಾತ್ರಿ ಆಕೆಯ ಮನವೊಲಿಸಿ ಪತಿಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಜನವರಿ 27ರಂದು ಬೆಳಿಗ್ಗೆ ಸುಳ್ಯ ಪೊಲೀಸರು ಆಕೆಯನ್ನು ಮತ್ತು ಆಕೆಯ ಪತಿಯನ್ನು ಸುಳ್ಯ ಠಾಣೆಗೆ ಕರೆಸಿ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಉಡುಪಿಯಲ್ಲಿ ಈಕೆಯೊಂದಿಗೆ ಸಿಕ್ಕಿದ್ದ ಚಂದನ್ ಎಂಬ ವ್ಯಕ್ತಿ ಅಸ್ಸಾಂ ಮೂಲದವರಾಗಿದ್ದು ಮಂಗಳೂರು ಹೋಟೆಲ್ ಒಂದರಲ್ಲಿ ಚೈನೀಸ್ ಫುಡ್ ಮೇಕರ್ ಆಗಿ ಕೆಲಸ ಮಾಡುತ್ತಿದ್ದು, ಇದಕ್ಕೂ ಮುನ್ನ ಒಮ್ಮೆ ಇವರು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ಹೋಗಿದ್ದ ಎನ್ನಲಾಗಿದೆ.

Leave A Reply

Your email address will not be published.