Day: January 27, 2022

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ವಿಶ್ವ ಪುಂಡಿತ್ತೂರು ನಿಧನ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದಬಲ್ನಾಡು ನಿವಾಸಿ ವಿಶ್ವ ಪುಂಡಿತ್ತೂರು(48)ರವರುಜ.27ರಂದು ಸಂಜೆ ನಿಧನರಾದರು. ಪುಂಡಿತ್ತೂರು ದಿ.ಸುಬ್ಬಣ್ಣ ಭಟ್ ರವರ ಪುತ್ರರಾದ ವಿಶ್ವಪುಂಡಿತ್ತೂರು ರವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ಪೂರ್ಣಾವಧಿ ಸೇವೆ ಸಲ್ಲಿಸಿದ್ದು, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿಜವಾಬ್ದಾರಿ ನಿರ್ವಹಿಸಿದ್ದರು. ಬಳಿಕದ ದಿನದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಬಳಿಕ ಮನೆಯಲ್ಲೇ ಆರೈಕೆ ಪಡೆಯುತ್ತಿದ್ದರು. ವಿಶ್ವ ಪುಂಡಿತ್ತೂರು ರವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ …

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ವಿಶ್ವ ಪುಂಡಿತ್ತೂರು ನಿಧನ Read More »

ಬಂಟ್ವಾಳ:ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ

ಬಂಟ್ವಾಳ:ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಇಂದು ನಡೆದಿದೆ. ಮೃತ ದೇಹದ ಗುರುತು ಪತ್ತೆಯಾಗಿಲ್ಲ,ಸುಮಾರು 35 ವರ್ಷದ ವ್ಯಕ್ತಿಯ ಮೃತದೇಹವಾಗಿದ್ದು ನದಿಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯ ನಾಡದೋಣಿ ನಾವಿಕ ಮಹಮ್ಮದ್ ಗೂಡಿನಬಳಿ ಅವರ ತಂವು ಮೃತದೇಹವನ್ನು ನದಿಯಿಂದ ಮೇಲಕ್ಕೆ ಎತ್ತಿ ಹಾಕಿದ್ದು,ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹದ ಗುರುತು ಸಿಗದ ಕಾರಣ ಪೊಲೀಸರು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.

ಸರಕಾರಿ ಕಚೇರಿಗಳು ವಾರಾಂತ್ಯದಲ್ಲಿ ಕೂಡ ಕಾರ್ಯ ನಿರ್ವಹಿಸಲು ಸೂಚನೆ|
5 ದಿನ ಕಚೇರಿ ನಿರ್ವಹಣೆ ಆದೇಶ ವಾಪಾಸ್ ಪಡೆದ ಸರಕಾರ |

ಬೆಂಗಳೂರು : ಸರಕಾರಿ ಕಚೇರಿಗಳು ವಾರಾಂತ್ಯದಲ್ಲಿ ಕೂಡಾ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ವಾರಾಂತ್ಯದಲ್ಲಿ ಕಚೇರಿಗಳು ಕಾರ್ಯ ನಿರ್ವಹಿಸುವಂತೆ ಸರಕಾರದಿಂದ ಸೂಚನೆ ನೀಡಲಾಗಿದೆ. 5 ದಿನಗಳ ಕಾಲ ಕಾರ್ಯ ನಿರ್ವಹಿಸಬೇಕು ಎಂಬ ಹಿಂದಿನ ಆದೇಶ ರಾಜ್ಯ ಸರಕಾರ ವಾಪಸ್ ಹಿಂಪಡೆದುಕೊಂಡಿದೆ. ಕೊರೊನಾ ತೀವ್ರ ಏರಿಕೆ ಹಿನ್ನೆಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದ್ದರಿಂದ 5 ದಿನ ಮಾತ್ರ ಕಚೇರಿ ನಿರ್ವಹಣೆಗೆ ಆದೇಶ ನೀಡಲಾಗಿತ್ತು. ಈ ಕುರಿತಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಸ್ಪಷ್ಟೀಕರಣ ಆದೇಶ ಹೊರಡಿಸಿದ್ದು, …

ಸರಕಾರಿ ಕಚೇರಿಗಳು ವಾರಾಂತ್ಯದಲ್ಲಿ ಕೂಡ ಕಾರ್ಯ ನಿರ್ವಹಿಸಲು ಸೂಚನೆ|
5 ದಿನ ಕಚೇರಿ ನಿರ್ವಹಣೆ ಆದೇಶ ವಾಪಾಸ್ ಪಡೆದ ಸರಕಾರ |
Read More »

ಕೆಎಸ್ ಪಿ : ರವಿ ಡಿ ಚನ್ನಣ್ಣನವರ್ ಸೇರಿ 9 IPS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಗುರುವಾರ ಆದೇಶಿಸಿದೆ. ಅಪರಾಧಿ ತನಿಖಾ ದಳದ ಎಸ್ ಪಿ ಆಗಿದ್ದ ರವಿ ಡಿ ಚನ್ನಣ್ಣನವರ್ ಕರ್ನಾಟಕ ಅಭಿವೃದ್ಧಿ ನಿಗಮದ ಎಂಡಿ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ. ಕೊಪ್ಪಳದ ಎಸ್ಪಿ ಟಿ. ಸುಧೀರ್ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಎಸ್ ಬಿ ಎಸ್ ಪಿ ಯಾಗಿದ್ದ ಅಬ್ದುಲ್ ಅಹ್ಮದ್ ಅವರನ್ನು ಕೆ ಎಸ್ …

ಕೆಎಸ್ ಪಿ : ರವಿ ಡಿ ಚನ್ನಣ್ಣನವರ್ ಸೇರಿ 9 IPS ಅಧಿಕಾರಿಗಳ ವರ್ಗಾವಣೆ Read More »

ಪಣೋಲಿಬೈಲ್ ನ ವಿವಾಹಿತ ಮಹಿಳೆ ಅನಾರೋಗ್ಯದಿಂದ ಮೃತ್ಯು

ಬಂಟ್ವಾಳ :ಪಣೋಲಿಬೈಲ್ ನ ವಿವಾಹಿತ ಮಹಿಳೆಯೋರ್ವರು ಅನಾರೋಗ್ಯಕ್ಕೆ ತುತ್ತಾಗಿ ಇಂದು ಮಧ್ಯಾಹ್ನ ಮೃತ ಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಬೆಳಾಲು ಗ್ರಾಮದ ಮುಂಡ್ರೋಟ್ಟು ಕಡಮಾಜೆ ನಿವಾಸದ ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಇವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಹತ್ತಿರದ ಬಿ. ಸಿ ರೋಡ್ ಆಸ್ಪತ್ರೆಗೆ ರವಾನಿಸಲಾಯಿತು.ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಮೃತ ಪ್ರಿಯಾಂಕರನ್ನು ಒಂದು ವರ್ಷ ಹಿಂದೆ ಪಣೋಲಿಬೈಲ್ ನ ವ್ಯಕ್ತಿಯೋರ್ವರಿಗೆ ವಿವಾಹ ಮಾಡಿಕೊಡಲಾಗಿತ್ತು.ಮೃತರು …

ಪಣೋಲಿಬೈಲ್ ನ ವಿವಾಹಿತ ಮಹಿಳೆ ಅನಾರೋಗ್ಯದಿಂದ ಮೃತ್ಯು Read More »

ತಲೆ ಕೆಳಗಾದ ವಿಶಿಷ್ಟ ರೀತಿಯ ಮನೆ ನಿರ್ಮಾಣದ ಚಿತ್ರಣ ವೈರಲ್

ಇಂದಿನ ಜಗತ್ತಿನಲ್ಲಿ ಅದೆಷ್ಟೋ ವಿಭಿನ್ನತೆಗಳು ಕಾಣಸಿಗುತ್ತದೆ. ಕೆಲವೊಂದು ವಿಡಿಯೋಗಳಲ್ಲಿ ಚಿತ್ರಣಗಳಲ್ಲಿ ವಸ್ತುಗಳನ್ನೋ, ಮನುಷ್ಯ, ಮನೆಗಳನ್ನು ತಲೆ ಕೆಳಗೆ ಇರಿಸಿದಂತೆ ಇರುತ್ತದೆ. ಆದರೆ ಇಲ್ಲೊಂದು ಕಡೆ ನಿಜವಾಗಿಯೂ ತಲೆ ಕೆಳಗಾದ ಅಪರೂಪದ ಮನೆಯೊಂದನ್ನು ಕಟ್ಟಿದ್ದಾರೆ. ಈ ತಲೆಕೆಳಗಾದ ವಿಭಿನ್ನ ಮನೆಯನ್ನು ಕೊಲಂಬಿಯಾದಲ್ಲಿ ನಿರ್ಮಿಸಿದ್ದು, ಇದೀಗ ಪ್ರವಾಸಿಗರಆಕರ್ಷಣೆಯ ಕೇಂದ್ರವಾಗಿದೆ.ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಹರಿಯಬಿಟ್ಟಿದ್ದು, ಸಖತ್ ವೈರಲ್ ಆಗುತ್ತಿದೆ. ರಾಜಧಾನಿ ಬೊಗೋಟಾದಿಂದ ಸ್ವಲ್ಪ ದೂರದಲ್ಲಿರುವಕೊಲಂಬಿಯಾದ ಗ್ವಾಟಾವಿಟಾದಲ್ಲಿ ಕೊರೊನಾ ಸಮಯದಲ್ಲಿ ಈ ತಲೆಕೆಳಗಾದ ಮನೆಯನ್ನು ಕಟ್ಟಲಾಗಿದೆ.ಈ ಮನೆಯನ್ನು ಕೊಲಂಬಿಯಾ ನಿವಾಸಿ ಆಸ್ಟ್ರಿಯನ್ …

ತಲೆ ಕೆಳಗಾದ ವಿಶಿಷ್ಟ ರೀತಿಯ ಮನೆ ನಿರ್ಮಾಣದ ಚಿತ್ರಣ ವೈರಲ್ Read More »

ಗಂಡನ ಭಯದಿಂದ ತಾನು ಹೆತ್ತ ಮೂರನೇ ಮಗುವೂ ಹೆಣ್ಣು ಎಂದು ಆಸ್ಪತ್ರೆಯ ಹೊರಗೆ ಬಿಟ್ಟು ಬಂದ ಹೆತ್ತ ತಾಯಿ| ಪಶ್ಚಾತ್ತಾಪದಿಂದ ನೊಂದ ತಾಯಿ ಅನಂತರ ಮಾಡಿದ್ದಾದರೂ ಏನು ?

ಸಮಾಜದಲ್ಲಿ ಈಗಲೂ ಗಂಡು ಮಕ್ಕಳಷ್ಟೇ ಹೆಣ್ಣುಮಕ್ಕಳು ಕೂಡಾ ಸಮಾನರು ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಇಂದಿಗೂ ಈ ತಾರತಮ್ಯದ ಪಿಡುಗನ್ನು ಸಂಪೂರ್ಣವಾಗಿ ಹೋಗಲಾಡಿಸಲು ಆಗುತ್ತಿಲ್ಲ. ಹೌದು, ಈ ಮಾತಿಗೆ ಸಾಕ್ಷಿ ಎಂಬಂತೆ ಹೆತ್ತ ತಾಯಿಯೊಬ್ಬಳು ಆಗ ತಾನೇ ಜನ್ಮ ನೀಡಿದ ಮಗುವನ್ನು ಆಸ್ಪತ್ರೆಯ ಹೊರಗೆ ಬಿಟ್ಟು ಬಂದಿದ್ದಳು. ಏಕೆಂದರೆ ಅದು ಹೆಣ್ಣು ಮಗುವಾಗಿತ್ತು. ಈ ಘಟನೆ ಚೆನ್ನೈನಲ್ಲಿ ನಡೆದಿದೆ. ಈ ಮಹಿಳೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಳು. ಇದರಿಂದಾಗಿ ಪತಿ ಕುಟುಂಬದಲ್ಲಿ ರಾದ್ಧಾಂತ, ಜಗಳ, ಕಿರಿಕಿರಿ …

ಗಂಡನ ಭಯದಿಂದ ತಾನು ಹೆತ್ತ ಮೂರನೇ ಮಗುವೂ ಹೆಣ್ಣು ಎಂದು ಆಸ್ಪತ್ರೆಯ ಹೊರಗೆ ಬಿಟ್ಟು ಬಂದ ಹೆತ್ತ ತಾಯಿ| ಪಶ್ಚಾತ್ತಾಪದಿಂದ ನೊಂದ ತಾಯಿ ಅನಂತರ ಮಾಡಿದ್ದಾದರೂ ಏನು ? Read More »

ಸಹನಾ ಗುಣದ ಸಹಜ ಸಾಧಕಿ – ಬಾಲಕಿ ಸೊಹನ ಶಂಕರ್ ಉಡುಪಿ

ಮಾತೆ ಮಮತೆಯಿಂದ ಹಾಡುವ ಜೋಗುಳದ ಲಾಲಿ ಹಾಡಿಗೆ ಪುಟ್ಟಾಣಿಗಳು ಬಲುಬೇಗನೆ ಪ್ರತಿಕ್ರಿಯಿಸುತ್ತವೆ. ತೊದಲು ನುಡಿಯಲ್ಲೇ ಹಾಡಲು ತೊಡಗುತ್ತವೆ. ಬಾಲ್ಯದಲ್ಲಿ ಕಂದಮ್ಮಗಳು ಬಾಹ್ಯ ಪ್ರಪಂಚದ ಆಗುಹೋಗುಗಳಿಗೆ ಕಣ್ಣು, ಕಿವಿ, ಬಾಯಿಯಾಗುವ ಪರಿಪಾಠ ಬೆಳೆಸಿಕೊಳ್ಳುತ್ತಾರೆ. ಕೆಲವು ಕಂದಮ್ಮಗಳು ಬಾಲ್ಯದಲ್ಲಿಯೇ ಕೆಲವೊಂದು ಕ್ಷೇತ್ರಗಳಲ್ಲಿ ಅತ್ಯಾಸಕ್ತತೆಯಿಂದ ಸ್ಪಂದಿಸುತ್ತವೆ. ಹೀಗೆ ಬಾಲ್ಯದಲ್ಲಿಯೇ ಅನುಕರಣೆಯಿಂದ ನೃತ್ಯ, ಸಂಗೀತ, ಚಿತ್ರಕಲೆ ಮುಂತಾದವುಗಳಲ್ಲಿ ತೊಡಗಿಕೊಂಡವರು ಉಡುಪಿಯ ಸೊಹನ ಶಂಕರ್ ಎಂಬ ಬಾಲಕಿ. ಕಾಲು ಹೆಜ್ಜೆ ಹಾಕಲು ಪ್ರಾರಂಭಿಸಿದರೆ; ಕಣ್ಣುಗಳು, ಕರಗಳು ಆಂಗೀಕ ಅಭಿನಯಕ್ಕೆ ತೊಡಗುತ್ತಿದ್ದವು. ನೃತ್ಯಗಳನ್ನು ತದೇಕಚಿತ್ತದಿಂದ ಆಲಿಸುತ್ತ, …

ಸಹನಾ ಗುಣದ ಸಹಜ ಸಾಧಕಿ – ಬಾಲಕಿ ಸೊಹನ ಶಂಕರ್ ಉಡುಪಿ Read More »

ಮಹಿಳೆಯ ಸಾಮೂಹಿಕ ಅತ್ಯಾಚಾರ ಮಾಡಿ, ತಲೆಕೂದಲು ಬೋಳಿಸಿ, ಮುಖಕ್ಕೆ ಕಪ್ಪು ಮಸಿ ಬಳಿದು ಮೆರವಣಿಗೆ!!!

ಯುವತಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರ ಮಾಡಿ, ತಲೆಕೂದಲು ಬೋಳಿಸಿ, ಆಕೆಯ ಮುಖಕ್ಕೆ ಕಪ್ಪು ಮಸಿ ಬಳಿದು ಆಕೆಯನ್ನು ನಡು ರಸ್ತೆಯಲ್ಲಿ ಸಾರ್ವಜನಿಕರ ಎದುರು ಮೆರವಣಿಗೆ ಮಾಡಿದ ಅಮಾನವೀಯ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಈ ಪ್ರಕರದ ವೀಡಿಯೋ ಬೆಳಕಿಗೆ ಬರುತ್ತಿದ್ದಂತೇ, ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಮಹಿಳಾ ಆಯೋಗ ಟ್ವೀಟ್ ಮೂಲಕ ತಿಳಿಸಿದೆ. ಬುಧವಾರ ಈ ಘಟನೆ ನವದೆಹಲಿಯಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಗಳು ಮಹಿಳೆಯ ಮೇಲೆ …

ಮಹಿಳೆಯ ಸಾಮೂಹಿಕ ಅತ್ಯಾಚಾರ ಮಾಡಿ, ತಲೆಕೂದಲು ಬೋಳಿಸಿ, ಮುಖಕ್ಕೆ ಕಪ್ಪು ಮಸಿ ಬಳಿದು ಮೆರವಣಿಗೆ!!! Read More »

ಸುಳ್ಯ : ನಾಪತ್ತೆಯಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ಪತ್ತೆ

ಸುಳ್ಯ: ನಾಪತ್ತೆಯಾಗಿದ್ದ ಅಸ್ಸಾಂ ಮೂಲದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಪತ್ತೆಯಾದ ಘಟನೆ ನಡೆದಿದೆ. ಮಹಿಳೆಯೊಬ್ಬರು ಜ. 25 ರಂದು ಪೈಚಾರು ಮನೆಯಿಂದ ಕಾಣೆಯಾಗಿ ಸಂಜೆಯಾದರೂ ಬಾರದ ಹಿನ್ನೆಲೆಯಲ್ಲಿ ಆಕೆಯ ಪತಿ ಪತಿ ಕೋಗನ್ ತಾತಿ ಅದೇ ದಿನ ಸಂಜೆ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದರು. ಕಳೆದ ನಾಲ್ಕು ತಿಂಗಳಿಂದ ಸುಳ್ಯದ ಪೈಚಾರು ಸಂಸ್ಥೆ ಯೊಂದರಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸವನ್ನು ಮಾಡುತ್ತಿದ್ದ ಮಹಿಳೆ ಮತ್ತು ಆಕೆಯ ಪತಿ, ಎರಡು ಮಕ್ಕಳೊಂದಿಗೆ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯವರು ನೀಡಿದ ರೂಮೊಂದರಲ್ಲಿ …

ಸುಳ್ಯ : ನಾಪತ್ತೆಯಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ಪತ್ತೆ Read More »

error: Content is protected !!
Scroll to Top