ಈ ಬಾರಿಯ ಗಣರಾಜ್ಯೋತ್ಸವದ ನಿರೂಪಕರ ಬದಲಾವಣೆ|ಸತತ ಹತ್ತು ವರ್ಷಗಳಿಂದ ನಿರೂಪಣೆ ಪಟ್ಟವನ್ನು ಅಲಂಕರಿಸಿದ್ದ ಅಪರ್ಣಾರಿಗೆ ಈ ಬಾರಿ ಕೈ ತಪ್ಪಿದ ಅವಕಾಶ

ಕಳೆದ 10 ವರ್ಷಗಳಿಂದ ನಿರೂಪಣೆ ಹಾಗೂ ಗಾಯನದಲ್ಲಿ ಹಳಬರಿಗೆನೇ ಅವಕಾಶ ನೀಡುತ್ತಿದ್ದ ಪರಂಪರೆಯನ್ನು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಸರಕಾರ ಹೊಸಬರಿಗೆ ಅವಕಾಶವನ್ನು ನೀಡಿ, 10 ವರ್ಷಗಳ ಪರಂಪರೆಯನ್ನು ಮುರಿದು ಹಾಕಿದೆ. ಹಾಗಾಗಿ ಈ ಬಾರಿಯ ಗಣರಾಜ್ಯೋತ್ಸವದ ನಿರೂಪಣೆಯಲ್ಲಿ ನಾವು ಹೊಸತನವನ್ನು ಕಾಣಬಹುದು.

ಈ ಸಾಧನೆ ಮಾಡಿ ತೋರಿಸಿದವರು ಡಾ.ಗಿರಿಜಾ ಎಂಬ ಮಹಿಳೆ. ಹೌದು ಇದು ಪ್ರತಿಭಟನೆಗೆ ಸಂದ ಫಲ. ಈ ಬಾರಿ ನಿರೂಪಕರಲ್ಲಿ ಬದಲಾವಣೆ ಮಾಡಬೇಕೆಂದು, ಪ್ರತಿ ಬಾರಿ ಹಳೆ ನಿರೂಪಕರು ಹಾಗೂ ಗಾಯಕರಿಗೆನೇ ಅವಕಾಶ ಕೊಡುತ್ತಿದ್ದಾರೆ. 10 ವರ್ಷದಿಂದ ಒಬ್ಬರೇ ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿ ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಡಾ.ಗಿರಿಜಾ ಅವರು ಬದಲಾವಣೆಗೆ ಒತ್ತಾಯಿಸಿ ಮುಖ್ಯಮಂತ್ರಿ ಮನೆ ಮುಂದೆ ಈ ಹಿಂದೆ ಪ್ರತಿಭಟನೆ ‌ನಡೆಸಿದ್ದರು. ಈ ಹಿನ್ನೆಲೆ ಈ ಬಾರಿ ನಿರೂಪಕರಲ್ಲಿ ಬದಲಾವಣೆ ಮಾಡಲಾಗಿದೆ.


Ad Widget

Ad Widget

Ad Widget

ಹಾಗಾಗಿ ಈ ಬಾರಿಯ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟಿ ಅಪರ್ಣಾ ನಿರೂಪಕರಾಗಿ ಕಾಣಿಸಿಕೊಂಡಿಲ್ಲ. ಡಾ.ಗಿರಿಜಾ ಹಾಗೂ ಮತ್ತೊಬ್ಬ ನಿರೂಪಕರಾಗಿ‌ ಶಂಕರ್ ಪ್ರಕಾಶ್ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಹಾಗಾಗಿ ಈ ಬಾರಿ ನಟಿ ಅಪರ್ಣಾ ನಿರೂಪಕರಾಗಿ ಕಾಣಿಸಿಕೊಂಡಿಲ್ಲ. ಡಾ.ಗಿರಿಜಾ ಅವರ ಪ್ರತಿಭಟನೆ ಹಿನ್ನೆಲೆ ಈ ಬಾರಿಯ 73 ನೇ ಗಣರಾಜ್ಯೋತ್ಸವದಲ್ಲಿ ಅಪರ್ಣಾ ಬದಲಿಗೆ ಡಾ.ಗಿರಿಜಾ ಅವರಿಗೆ ಸ್ಥಾನ ನೀಡಲಾಗಿದೆ.

Leave a Reply

error: Content is protected !!
Scroll to Top
%d bloggers like this: