ಮಾನವ ಕೂದಲು ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ

ಮಾನವ ಕೂದಲಿನ ರಫ್ತಿನ ಮೇಲೆ ಕೇಂದ್ರ ಸರ್ಕಾರ ಮಂಗಳವಾರ ನಿರ್ಬಂಧಗಳನ್ನು ಹೇರಿದ್ದು, ಈ ಕ್ರಮವು ಭಾರತದಿಂದ ಕಳ್ಳಸಾಗಣೆ ಮಾಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕೂದಲು ಉದ್ಯಮ ತಿಳಿಸಿದೆ. ಈ ಹಿಂದೆ ಯಾವುದೇ ನಿರ್ಬಂಧವಿಲ್ಲದೆ ಕೂದಲು ರಫ್ತಿಗೆ ಅವಕಾಶ ನೀಡಲಾಗಿತ್ತು.

ಈಗ ರಫ್ತುದಾರರು ವಾಣಿಜ್ಯ ಸಚಿವಾಲಯದ ಅಡಿಯಲ್ಲಿರುವ ಡೈರೆಕರೇಟ್ ಜನರಲ್ ಆಫ್ ಫಾರಿನ್ ಟೇಡ್ (ಡಿಜಿಎಫ್‌ಟಿ) ನಿಂದ ಅನುಮತಿ ಅಥವಾ ಪರವಾನಗಿ ಪಡೆಯಬೇಕಾಗುತ್ತದೆ. ‘ಮಾನವ ಕೂದಲಿನ ರಫ್ತು ನೀತಿ, ತೊಳೆದಿರಲಿ ಅಥವಾ ತೊಳೆಯದಿರಲಿ ಮಾನವ ಕೂದಲಿನ ತ್ಯಾಜ್ಯ ಅಥವಾ ಇತರ ಯಾವುದೇ ರೀತಿಯ ಕಚ್ಚಾ ಮಾನವ ಕೂದಲಿನ ರಫ್ತು ನೀತಿಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿರ್ಬಂಧಿತ ವರ್ಗಕ್ಕೆ ಸೇರಿಸಲಾಗಿದೆ’ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶಕ ಸಂತೋಷ್ ಕುಮಾರ್ ಸಾರಂಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಈ ಕ್ರಮವನ್ನು ಸ್ವಾಗತಿಸಿದ ಮಾನವ ಕೂದಲು ಮತ್ತು ಕೂದಲಿನ ಉತ್ಪನ್ನಗಳ ತಯಾರಕರು ಮತ್ತು ರಫ್ತುದಾರರ ಸಂಘದ ಸದಸ್ಯ ಸುನಿಲ್ ಎಮಾನಿ ಅವರು, ಇದು ನಮ್ಮ ಬಹುಕಾಲದ ಬೇಡಿಕೆಯಾಗಿತ್ತು ಎಂದಿದ್ದಾರೆ.

Leave A Reply

Your email address will not be published.