ಉಡುಪಿ: ಸತತವಾಗಿ ಹಲವು ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಬಣ್ಣಹಚ್ಚಿ ಕಲಾ ಸೇವೆಗೈದ ಹಿರಿಯ ಕಲಾವಿದ, ಸ್ತ್ರೀ ಪಾತ್ರಧಾರಿ ಉಡುಪಿ ಜಿಲ್ಲೆಯ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನಹೊಂದಿದ್ದಾರೆ.
ಬಸ್ರೂರು ಸಮೀಪದ ಮಾರ್ಗೋಳಿ ಯಲ್ಲಿ ಜನಿಸಿದ್ದ ಗೋವಿಂದ ಶೇರಿಗಾರ್ ಬಾಲ್ಯದಿಂದಲೇ ರಂಗದತ್ತ ತನ್ನನ್ನು ತಾನು ಆಕರ್ಷಣೆಗೊಂಡು ಹಲವು ವರ್ಷಗಳಿಂದ ಯಕ್ಷರಂಗದಲ್ಲಿ ತನ್ನ ಸೇವೆ ಸಲ್ಲಿಸುತ್ತಾ ಬಂದಿದ್ದರು.
ಮಂದಾರ್ತಿ ಮೇಳ, ಮಾರಣಕಟ್ಟೆ ಮೇಲೆ, ಕಮಲಶಿಲೆ ಮೇಲೆ ಹೀಗೆ ಹಲವು ಮೇಲಗಳಲ್ಲಿ ಸೇವೆ ಸಲ್ಲಿಸಿದ ಶೇರಿಗಾರ್ ನಿಧನಕ್ಕೆ ಯಕ್ಷ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.