ಉಡುಪಿ ಕಾಲೇಜು ಸ್ಕಾರ್ಫ್ ವಿವಾದಕ್ಕೆ ಇಂದು ತೆರೆ ಸಾಧ್ಯತೆ| ಡ್ರೆಸ್ ಕೋಡ್ ಬಗ್ಗೆ ಇಂದು ನಿರ್ಧಾರ, ಬಿ‌.ಸಿ.ನಾಗೇಶ್ ಹಾಗೂ ಸಿಎಂ ಚರ್ಚೆ

ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ‌ ಚರ್ಚೆ ನಡೆಸಲಿದ್ದಾರೆ.

ಉಡುಪಿ ಸರಕಾರಿ ಕಾಲೇಜಿನಲ್ಲಿ ತಲೆ ಎತ್ತಿರುವ ಸ್ಕಾರ್ಫ್ ವಿವಾದಕ್ಕೆ‌ ಸಂಬಂಧಿಸಿದಂತೆ ರಾಜ್ಯ ಸರಕಾರ ಆದೇಶ ಹೊರಡಿಸುವ ಸಾದ್ಯತೆ ಇದ್ದು,ಈ ವಿವಾದಕ್ಕೆ ಸೋಮವಾರ ತೆರೆ ಎಳೆಯಲು ರಾಜ್ಯ ಸರಕಾರ ಮುಂದಾಗಿದೆ.

ಉಡುಪಿ ಸರಕಾರಿ ಕಾಲೇಜಿನಲ್ಲಿ ಆರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ‌ ತರಗತಿಗೆ ಹಾಜರಾಗಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು.

ಸ್ಕಾರ್ಫ್ ಧರಿಸುವುದು ಸಮವಸ್ತ್ರ ನೀತಿಯ ವಿರುದ್ಧವಾಗಿದ್ದು ಹಾಗಾಗಿ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡಿರಲಿಲ್ಲ ಕಾಲೇಜಿನ ಪ್ರಾಂಶುಪಾಲರು. ಪ್ರಾಂಶುಪಾಲರ ಈ ನಡೆಯನ್ನು ಖಂಡಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿವಾದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.

ಈ ಕುರಿತು ಅಂತರಾಷ್ಟ್ರೀಯ ಮಾಧ್ಯಮದಲ್ಲೂ ಸುದ್ದಿಯಾದ ಕಾರಣ ರಾಜ್ಯ ಸರಕಾರ ಈ ಸಮಸ್ಯೆಗೆ‌ ಪೂರ್ಣವಿರಾಮ ಹಾಕಲು ಮುಂದಾಗಿದೆ. ಸ್ಕಾರ್ಫ್ ವಿವಾದದ ಬಗ್ಗೆ ಸರಕಾರದ ನಿಲುವು ಏನು ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.