ಮುಚ್ಚಿದ ದೇವಾಲಯದ ಎದುರೇ ಮದುವೆಯಾದ ಹಲವು ಜೋಡಿಗಳು

ಈ ಕೊರೊನಾ ಕಾರಣದಿಂದಾಗಿ ಮದುವೆಗೆ ಬರುವ ನೆಂಟರಿಷ್ಟರ ಸಂಖ್ಯೆಯನ್ನು ಕಡಿಮೆ ಮಾಡಿದೆ ಸರಕಾರ. ಅಷ್ಟೂ ಮಾತ್ರವಲ್ಲದೇ ಲಾಕ್ ಡೌನ್ ಕೂಡಾ ಮಾಡಿದಾಗ ಎಲ್ಲಾ ಕಡೆ ಎಲ್ಲಾನೂ ಬಂದ್ ಇರುವಾಗ ವಿವಾಹ ಮಾಡಿಕೊಳ್ಳುವವರಿಗೆ ಕಿರಿಕಿರಿ ಆಗುವುದು ಖಂಡಿತ.

ತಮಿಳುನಾಡಿನಲ್ಲಿ ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಹೇರಿರುವ ಲಾಕ್ ಡೌನ್ ಕಾರಣದಿಂದ ಎಲ್ಲಾ ದೇವಾಲಯಗಳು ಕೂಡಾ ಮುಚ್ಚಿದ್ದವು. ಆದರೆ ಈ ದೇವಾಲಯದಲ್ಲೇ ಮದುವೆ ಆಗಬೇಕೆಂದು ಮೊದಲೇ ನಿಶ್ಚಯ ಮಾಡಿಕೊಂಡ ಅನೇಕ ಜೋಡಿಗಳಿಗೆ ನಿರಾಸೆಯಾಗಿತ್ತು. ಆದರೂ ಈ ಮುಚ್ಚಿದ ದೇವಾಲಯದ ಎದುರೇ ಹಲವು ಜೋಡಿಗಳು ವಿವಾಹ ಬಂಧನಕ್ಕೊಳಗಾದ ಸ್ವಾರಸ್ಯಕರ ಘಟನೆ ಕುಡ್ದಲೂರು ಜಿಲ್ಲೆಯ ಪ್ರಸಿದ್ಧ ದೇವಾಲಯವೊಂದರಲ್ಲಿ ನಡೆದಿದೆ.

ತಿರುವನಂತಪುರಂ ಶ್ರೀ ದೇವನಾಥಸ್ವಾಮಿ ದೇವಾಲಯದ ಎದುರು ರಸ್ತೆ ಮಧ್ಯದಲ್ಲಿ ಪುರೋಹಿತರು ನವಜೋಡಿಗಳಿಗೆ ಶಾಸ್ತ್ರೋಕ್ತವಾಗಿ ವಿವಾಹದ ವಿಧಿವಿಧಾನ ಮಾಡಿದರು.

ತಮಿಳರಿಗೆ ಪವಿತ್ರ ಎನಿಸಿದ ” ಮುಹೂರ್ತ ನಾಲ್” ದಿನವಾದ ರವಿವಾರ ಹಲವು ವಿವಾಹಗಳು ಸಂಪನ್ನಗೊಂಡವು.

ರಾಜ್ಯದಲ್ಲಿ ಕೋವಿಡ್ ನಿರ್ಬಂಧ ಜಾರಿಗೊಳಿಸಿರುವ ಕಾರಣ ಶುಕ್ರವಾರ, ಶನಿವಾರ ಹಾಗೂ ರವಿವಾರ ಕೂಡ ದೇವಾಲಯಗಳು ಮುಚ್ಚಿದ್ದವು. ಆದರೆ ಈ ವಿಷ್ಣು ದೇವಾಲಯದಲ್ಲಿ ವಿವಾಹವಾದರೆ ಒಳ್ಳೆಯದು ಎಂದು ಹಲವರ ನಂಬಿಕೆಯಾಗಿದ್ದ ಕಾರಣದಿಂದ ಎಲ್ಲಾ‌ ಮುಚ್ಚಿದ ದೇವಾಲಯದ ಎದುರೇ ಹಲವು ಜೋಡಿಗಳು ವಿವಾಹ ಬಂಧನಕ್ಕೊಳಗಾಗಿದ್ದಾರೆ.

Leave A Reply

Your email address will not be published.