ಸಚಿವ ಎಸ್.ಅಂಗಾರರಿಗೆ ಕೈತಪ್ಪಿದ ದಕ ಜಿಲ್ಲಾ ಉಸ್ತುವಾರಿ!! ಮುಂದಿನ ಜಿಲ್ಲಾ ಉಸ್ತುವಾರಿ ಸಚಿವರು ಯಾರು!?

ಕರ್ನಾಟಕ ಸರಕಾರ ಕೋವಿಡ್ ಪರಿಸ್ಥಿತಿ ನಿರ್ವಹಣೆ ಮಾಡಲು ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವುದರಿಂದ ಭಾನುವಾರ 50 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶನುಸಾರ ಮತ್ತು ಅವರ ಹೆಸರಿನಲ್ಲಿ ಬಿ ಎಸ್ ಸುಮತಿ ಈ ಆದೇಶವನ್ನು ಹೊರಡಿಸಿದ್ದಾರೆ.


Ad Widget

Ad Widget

Ad Widget

ಸಚಿವರು ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರಾಗಿದ್ದಾರೆ. ಸೋಮವಾರ ಈ ಕುರಿತು ಆದೇಶ ಪ್ರಕಟವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್ ಅಂಗಾರ ಅವರನ್ನು ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಮುಂದುವರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ನೀಡಲಾಗಿದೆ.

ದ.ಕ ಜಿಲ್ಲೆಯ ನೂತನ ಉಸ್ತುವಾರಿ ಸಚಿವರು ವಿ. ಸುನಿಲ್ ಕುಮಾರ್

ಯಾವ ಜಿಲ್ಲೆಗೆ ಯಾರು ಉಸ್ತುವಾರಿ ?

 1. ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ
  2) ಗೋವಿಂದ ಕಾರಜೋಳ – ಬೆಳಗಾವಿ
  3) ಕೆ ಎಸ್ ಈಶ್ವರಪ್ಪ – ಚಿಕ್ಕಮಗಳೂರು
  4) ಬಿ ಶ್ರೀರಾಮುಲು – ಬಳ್ಳಾರಿ
  5) ವಿ ಸೋಮಣ್ಣ – ಚಾಮರಾಜನಗರ
  6) ಉಮೇಶ್ ಕತ್ತಿ – ವಿಜಯಪುರ
  7) ಎಸ್ ಅಂಗಾರ – ಉಡುಪಿ 8)ಅರಗ ಜ್ಞಾನೇಂದ್ರ – ತುಮಕೂರು
  9)ಡಾ.ಸಿ ಎನ್ ಅಶ್ವತ್ಥ ನಾರಾಯಣ – ರಾಮನಗರ
  10)ಸಿ ಸಿ ಪಾಟೀಲ್ – ಬಾಗಲಕೋಟೆ
  11)ಆನಂದ್ ಸಿಂಗ್ – ಕೊಪ್ಪಳ
  12) ಕೋಟ ಶ್ರೀನಿವಾಸ ಪೂಜಾರಿ – ಉತ್ತರ ಕನ್ನಡ
  13)ಪ್ರಭು ಚವ್ಹಾಣ – ಯಾದಗಿರಿ
  14)ಮುರುಗೇಶ್ ನಿರಾಣಿ – ಕಲಬುರಗಿ
  15)ಶಿವರಾಮ್ ಹೆಬ್ಬಾರ್ – ಹಾವೇರಿ
  16)ಎಸ್ ಟಿ ಸೋಮಶೇಖರ್ – ಮೈಸೂರು
  17) ಬಿ ಸಿ ಪಾಟೀಲ್ – ಚಿತ್ರದುರ್ಗ ಮತ್ತು ಗದಗ
  18)ಬಿ ಎ ಬಸವರಾಜ – ದಾವಣಗೆರೆ
  19)ಡಾ.ಕೆ.ಸುಧಾಕರ್ – ಬೆಂಗಳೂರು ಗ್ರಾಮಾಂತರ
  20)ಕೆ ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
  21) ಶಶಿಕಲಾ ಜೊಲ್ಲೆ – ವಿಜಯನಗರ
  22)ಎಂಟಿಬಿ ನಾಗರಾಜ್ – ಚಿಕ್ಕಬಳ್ಳಾಪುರ
  23)ಕೆ ಸಿ ನಾರಾಯಣ ಗೌಡ – ಶಿವಮೊಗ್ಗ
  24)ಬಿ ಸಿ ನಾಗೇಶ್ -ಕೊಡಗು
  25)ವಿ ಸುನೀಲ್ ಕುಮಾರ್ – ದಕ್ಷಿಣ ಕನ್ನಡ
  26) ಹಾಲಪ್ಪ ಆಚಾರ್ – ಧಾರವಾಡ
  27) ಶಂಕರ್ ಬಿ ಮುನೇನಕೊಪ್ಪ – ರಾಯಚೂರು ಮತ್ತು ಬೀದರ್
  28) ಮುನಿರತ್ನ – ಕೋಲಾರ

Leave a Reply

error: Content is protected !!
Scroll to Top
%d bloggers like this: