ಬೆಕ್ಕು ಕಳ್ಳತನವಾಗಿದೆ ಎಂದು ಎಫ್​ಐಆರ್ ದಾಖಲಿಸಿದ ವ್ಯಕ್ತಿ|ಈ ದುಬಾರಿ ಬೆಕ್ಕನ್ನು ಹುಡುಕಿಕೊಟ್ಟರೆ ನಿಮ್ಮ ಪಾಲಾಗುತ್ತೆ 35 ಸಾವಿರ ರೂಪಾಯಿ

ಬೆಂಗಳೂರು:ಮನೆಯಲ್ಲಿರೋ ಬೆಲೆ ಬಾಳೋ ಚಿನ್ನ, ಅಥವಾ ಏನಾದರೂ ವಸ್ತುಗಳು ಕಳವಾದಾಗ ದೂರು ದಾಖಲಿಸೋದು ಸಾಮಾನ್ಯ. ಆದ್ರೆ ಇಲ್ಲೊಂದು ಕಡೆ ಬೆಕ್ಕು ಕಳವಾಗಿದೆ ಎಂದು ಎಫ್​ಐಆರ್​ ದಾಖಲಿಸಿದ್ದಾರೆ ಈ ವ್ಯಕ್ತಿ.ಅಷ್ಟಕ್ಕೂ ಅದು ನಾವು ಅಂದುಕೊಂಡಂತೆ ಕೇವಲ ಬೆಕ್ಕು ಅಲ್ಲ, ಅದು ದುಬಾರಿ ಬೆಕ್ಕಂತೆ!!

ಹೌದು.ಬೆಂಗಳೂರು ನಗರದ ತಿಲಕನಗರ ಪೊಲೀಸ್​ ಠಾಣೆಯಲ್ಲಿ ಬೆಕ್ಕು ಕಳ್ಳತನವಾಗಿದೆ ಎಂದು ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬುವವರು ಎಫ್​ಐಆರ್ ದಾಖಲಿಸಿದ್ದು, ‘ಇದು ಮನೆಯ ದುಬಾರಿ ಬೆಲೆಯ ಆಲಿಜೆ ಹೆಸರಿನ ಹೆಣ್ಣುಬೆಕ್ಕು ಜನವರಿ 15ರಂದು ನಾಪತ್ತೆಯಾಗಿದೆ’ಎಂದು ತಿಳಿಸಿದ್ದಾರೆ.

ಯಾರೋ ದುಷ್ಕರ್ಮಿಗಳು ಮೇಲ್ಛಾವಣಿಯಿಂದ ಬಂದು ಬೆಕ್ಕನ್ನು ಕಳ್ಳತನ ಮಾಡಿದ್ದಾರೆ ಎಂದು ಮಿಸ್ಬಾ ಶರೀಫ್ ದೂರು ನೀಡಿದ್ದು, ಬೆಕ್ಕು ಹುಡುಕಿಕೊಟ್ಟರೆ 35 ಸಾವಿರ ರೂಪಾಯಿ ಕೊಡುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ.ಸದ್ಯ ತಿಲಕನಗರ ಠಾಣೆಯಲ್ಲಿ ಬೆಕ್ಕು ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಾಗಿದ್ದು, ದುಬಾರಿ ಬೆಕ್ಕು ಅಂತೂ ಫುಲ್ ಹೆಸರುವಾಸಿಯಾಗಿದೆ.

Leave A Reply

Your email address will not be published.