ಮಂಗಳೂರಿನ ಉದ್ಯಮಿಯೊಂದಿಗೆ ಹಸೆಮಣೆ ಏರಲಿದ್ದಾರೆ ಬಾಲಿವುಡ್ ಖ್ಯಾತ ನಟಿ, ರೂಪದರ್ಶಿ ಕರೀಷ್ಮಾ ತನ್ನಾ!! |ಫೆಬ್ರವರಿ 05 ರಂದು ಗೋವಾ ದಲ್ಲಿ ನಡೆಯಲಿದೆಯಂತೆ ವಿವಾಹ ಕಾರ್ಯಕ್ರಮ

2006 ರಲ್ಲಿ ಫ್ರೆಂಡ್ಸ್ ಫಾರೆವರ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಭಾರತೀಯ ನಟಿ, ಖ್ಯಾತ ಆ್ಯಂಕರ್ ಹಾಗೂ ರೂಪದರ್ಶಿಯಾದ ಕರೀಷ್ಮಾ ತನ್ನಾ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಮಂಗಳೂರು ಮೂಲದ ಉದ್ಯಮಿ ಪ್ರಸ್ತುತ ಮುಂಬೈ ನಿವಾಸಿ ವರುಣ್ ಬಂಗೇರ ಅವರನ್ನು ವರಿಸುವ ಮೂಲಕ ಹಸೆಮಣೆ ಏರಲಿದ್ದಾರೆ.


Ad Widget

Ad Widget

Ad Widget

ಹಿಂದಿ ರಿಯಾಲಿಟಿ ಶೋ ಗಳಲ್ಲಿ ಮಿಂಚಿದ್ದ ಕರೀಷ್ಮಾ, ಹಲವು ಕಾರ್ಯಕ್ರಮಗಳು, ಧಾರವಾಹಿಗಳಲ್ಲಿ ಅಭಿನಯಿಸುವ ಮೂಲಕ ಎಲ್ಲರ ಮನೆ ಮಾತಾಗಿದ್ದರು.ಬಿಗ್ ಬಾಸ್ 8, ನಚ್ ಬಲಿಯೇ 7, ಜಲಕ್ ದಿಕ್ ಲಾ ಜಾ 9 ಮುಂತಾದ ಶೋ ಗಳಲ್ಲಿ ಪಾಲು ಪಡೆದು ಅಭಿಮಾನಿಗಳನ್ನು ರಂಜಿಸಿದ್ದಾರೆ.

ಈ ಮೊದಲು ಅಂದರೆ 2014 ರಲ್ಲಿ ನಟ ಉಪೇನ್ ಪಟೇಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕರೀಷ್ಮಾ 2016 ರಲ್ಲಿ ಆ ಸಂಬಂಧಕ್ಕೆ ಗುಡ್ ಬೈ ಹೇಳಿದ ಬಳಿಕ ವರುಣ್ ಬಂಗೇರ ಅವರನ್ನು ವರಿಸಲು ಮುಂದಾಗಿದ್ದಾರೆ.

ವಿವಾಹ ಪೂರ್ವ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮವು ಫೆಬ್ರವರಿ ಪ್ರಾರಂಭದಲ್ಲಿ ನಡೆಯಲಿದ್ದು, ಮದುವೆಯು 05ರಂದು ಗೋವಾ ದಲ್ಲಿ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

Leave a Reply

error: Content is protected !!
Scroll to Top
%d bloggers like this: