ಜೈಲಿನ ಅಧಿಕಾರಿಗಳಿಂದ ತಪ್ಪಿಸಲೆಂದು ಭಯದಿಂದ ಮೊಬೈಲ್ ನುಂಗಿದ ಕೈದಿ

ಜೈಲಾಧಿಕಾರಿಗಳ ಕೈಯಲ್ಲಿ ತಪ್ಪಿಸಿಕೊಳ್ಳಬೇಕು’ ಎಂಬ ಕಾರಣಕ್ಕೆ ಕೈದಿಯೊಬ್ಬ ಮೊಬೈಲ್‌ನ್ನೇ ನುಂಗಿದ ವಿಲಕ್ಷಣ ಘಟನೆಯೊಂದು ದೆಹಲಿಯ ತಿಹಾರ್ ಜೈಲಿನಲ್ಲಿ ವರದಿಯಾಗಿದೆ. ಜೈಲಾಧಿಕಾರಿಗಳಿಗೆ ತನ್ನ ಬಳಿ ಮೊಬೈಲ್ ಇದೆ ಎಂದು ತಿಳಿದರೆ ಶಿಕ್ಷೆ ನೀಡುತ್ತಾರೆ ಎಂಬ ಭಯದಲ್ಲಿ ಈ ರೀತಿ ಮಾಡಿದ ಕೈದಿಗೆ ಎಂಡೋಸ್ಕೋಪಿ ಮೂಲಕ ಮೊಬೈಲ್ ಹೊರತೆಗೆದಿದ್ದಾರೆ.

ಕೈದಿಯ ಹೊಟ್ಟೆಯ ವರದಿ ನೋಡಿದ ಆತನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಇರಬಹುದು ಎಂದು ಶಂಕಿಸಿದ್ದೆವು. ಬಾಯಿ ಮೂಲಕ ಎಂಡೋಸ್ಕೋಪಿ ಮಾಡಿ ಮೊಬೈಲ್‌ನ್ನು ಹೊರತೆಗೆದಿದ್ದೇವೆ ಎಂದು ದೆಹಲಿಯ ಪಂತ್ ಆಸ್ಪತ್ರೆಯ ವೈದ್ಯರಾದ ಡಾ. ಸಿದ್ದಾರ್ಥ ಹೇಳಿದರು.

Leave A Reply

Your email address will not be published.