ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟನೆಂದು ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಿದ ಕುಟುಂಬಸ್ಥರು|ಇನ್ನೇನು ಚಿತೆಗೆ ಬೆಂಕಿ ಇಡಬೇಕು ಅನ್ನುವಷ್ಟರಲ್ಲಿ ಎದ್ದು ಕೂತ ಸತ್ತ ವ್ಯಕ್ತಿ

ಕಾಸರಗೋಡು: ವ್ಯಕ್ತಿ ಒಬ್ಬರು ಅಸೌಖ್ಯದ ಕಾರಣದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದರು. ಇನ್ನೇನು ಅಂತಿಮ ಕಾರ್ಯ ನಡೆಯಬೇಕು ಅನ್ನುವಷ್ಟರಲ್ಲಿ ಆತ ಕಣ್ಣು ಬಿಟ್ಟು, ಎದ್ದು ಕೂತಿದ್ದಾರೆ.

ಜಿಲ್ಲೆಯ ಬದಿಯಡ್ಕ ವಾಂತಿಚ್ಚಾಲ್ ನಿವಾಸಿ ಕೂಲಿಕಾರ್ಮಿಕ ಗುರುವ ಎಂಬುವವರು ಅಸೌಖ್ಯದ ಕಾರಣ ಸೋಮವಾರ‌ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ತಪಾಸಣೆ ನಡೆಸಿದ ವೈದ್ಯರು, ರೋಗಿ ಆಕ್ಸಿಜನ್ ಸಹಾಯದಿಂದ ಮಾತ್ರ ಉಸಿರಾಡುತ್ತಿದ್ದು, ಆಕ್ಸಿಜನ್ ತೆರವುಗೊಳಿಸಿದ್ದಲ್ಲಿ ಉಸಿರಾಟ ನಿಂತು ಹೋಗುತ್ತದೆ ಎಂದಿದ್ದರು. ಹಾಗೆ ಆಕ್ಸಿಜನ್ ತೆರವು ಮಾಡಲಾಗಿತ್ತು.

ನಂತರ ಸಂಬಂಧಿಕರು ಮನೆಗೆ ಫೋನ್ ಮಾಡಿ ಚಿತೆಗೆ ತಯಾರಿ ಮಾಡಿ ಎಂದು ಹೇಳಿದ್ದರು. ಆಸ್ಪತ್ರೆಯಿಂದ ಮನೆಗೆ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಸಾಗಿಸಿ, ಉಪ್ಪಳ ತಲುಪುತ್ತಿದ್ದಂತೆ, ಗುರುವ ಅವರ ದೇಹದಲ್ಲಿ ಚಲನೆ ಕಂಡು ಬಂದಿದೆ‌. ಗುರುವ ಅವರು ಉಸಿರಾಡಲು ಪ್ರಾರಂಭ ಮಾಡಿದ್ದರು.

ತತ್ ಕ್ಷಣ ಗುರುವ ಅವರನ್ನು ಬದಿಯಡ್ಕದ ಕ್ಲಿನಿಕ್ ಗೆ ಕರೆದೊಯ್ಯುವಾಗ ತಪಾಸಣೆ ನಡೆಸಿದ ಡಾಕ್ಟರ್ ಮೃತ ವ್ಯಕ್ತಿ ಜೀವಂತವಾಗಿದ್ದಾನೆ ಎಂದು ಖಚಿತಪಡಿಸಿದ್ದಾರೆ. ನಂತರ ಕಾಸರಗೋಡಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸತ್ತು ಬದುಕಿ ಬಂದ ಗುರುವ ಅವರು ಚಿಕಿತ್ಸೆ ಮುಂದುವರೆದಿದೆ

Leave A Reply

Your email address will not be published.