ಪಂಜ ಪೇಟೆಯಲ್ಲಿ ಬೈಕ್ ಮತ್ತು ಸ್ಕೂಟರ್ ಡಿಕ್ಕಿ ಹೊಡೆದು ಸವಾರರಿಗೆ ಗಾಯಗೊಂಡ ಘಟನೆ ಜ. 18 ರಂದು ರಾತ್ರಿ ವರದಿಯಾಗಿದೆ.
ಪಂಜ ಪೇಟೆಗೆ ಬರುತ್ತಿದ್ದ ಶಶಿಧರ ಎಂಬವರ ಬೈಕ್ ಮತ್ತು ಸುಳ್ಯ ಕಡೆಗೆ ಹೋಗುತ್ತಿದ್ದ ಪುನೀತ್ ಎಂಬವರ ಸ್ಕೂಟರ್ ಡಿಕ್ಕಿಯಾಗಿದೆ.
ಶಶಿಧರರ ಕಾಲಿನ ಭಾಗಕ್ಕೆ ಗಾಯವಾಗಿದ್ದು ಅವರನ್ನು ಕಡಬ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪುನೀತ್ ರವರ ಕೈ ಭಾಗಕ್ಕೆ ಸಣ್ಣಗಾಯವಾಗಿದೆ.