ಬಿಕಿನಿ ಮಾಡೆಲ್ ಗೆ ಉತ್ತರ ಪ್ರದೇಶದ ಹಸ್ತಿನಾಪುರದಲ್ಲಿ ಸೀಟು ಕೊಟ್ಟ ಕಾಂಗ್ರೆಸ್ | ಹಸ್ತಿನಾಪುರದಲ್ಲಿ ಹಸ್ತಕ್ಕೆ ಒತ್ತಿ ಎಂದು ಟ್ರೊಲ್ !!

ಲಕ್ನೋ : ಮುಂಬರುವ ವಿಧಾನಸಭಾ ಚುನಾವಣೆಗೆ ಉತ್ತರಪ್ರದೇಶದಲ್ಲಿ ಸಾಮಾನ್ಯ ಮಹಿಳೆಯರಿಗೆ ಟಿಕೆಟ್ ನೀಡುವ ಕಾಂಗ್ರೆಸ್ ಪಕ್ಷ ಈ ಬಾರಿ ‘ ಬಿಕಿನಿ ಮಾಡೆಲ್’ ಎಂದು ಸುದ್ದಿಯಾಗಿದ್ದ ನಟಿಗೆ ಟಿಕೆಟ್ ನೀಡಿ ಟ್ರೋಲ್ ಗೊಳಗಾಗಿದೆ.

ನಟಿ, ವಿವಿಧ ಸೌಂದರ್ಯ ಸ್ಪರ್ಧೆಗಳ ವಿಜೇತರ ಅರ್ಚನಾ ಗೌತಮ್ ಅವರು ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮೀರತ್ ನ ಹಸ್ತಿನಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಕಾರಣ ರಾಜಕೀಯ ಹೆಜ್ಜೆ ಇಟ್ಟಿದ್ದಾರೆ. ಉತ್ತರ ಪ್ರದೇಶ ಚುನಾವಣೆಯ 125 ಅಭ್ಯರ್ಥಿಗಳಲ್ಲಿ ಅರ್ಚನಾಳ ಹೆಸರನ್ನು ಘೋಷಿಸಿದ ಕೂಡಲೇ ಆಕೆ ಬಿಕಿನಿ ಧರಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದವು. ‘ಹಸ್ತಿನಾಪುರದಲ್ಲಿ ಹಸ್ತಕ್ಕೆ ಒತ್ತಿ ‘ ಎಂದು ಜನರು ಟ್ರೊಲ್ ಮಾಡುತ್ತಿದ್ದಾರೆ.

ಅರ್ಚನಾ ಅವರು 2021 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಮಿಸ್ ಬಿಕಿನಿ ಇಂಡಿಯಾ ವಿಜೇತೆಯಾಗಿದ್ದ ಅರ್ಚನಾ ಗೌತಮ್ ಅವರ ಬಿಕಿನಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು.

2018 ರಲ್ಲಿ ‌ಬಿಕಿನಿ ಇಂಡಿಯಾ ಮಿಸ್ ಉತ್ತರ ಪ್ರದೇಶ ಪ್ರಶಸ್ತಿ 2014, ಮೋಸ್ಟ್ ಟ್ಯಾಲೆಂಟ್ 2018 ಪ್ರಶಸ್ತಿಗಳನ್ನು ಹಾಗೂ
ಮಿಸ್ ಕಾಸ್ಮೋಸ್ ವರ್ಲ್ಡ್ 2018 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಈಗ ವ್ಯಾಪಕವಾಗಿ ಟ್ರೊಲ್ ಆಗುತ್ತಿರುವ ಕಾರಣ, ಇದಕ್ಕೆ ಪ್ರತಿಕ್ರಿಯೆ ನೀಡಿದ ಅರ್ಚನಾ ಅವರು, ಜನರು ನನ್ನ ರಾಜಕೀಯ ವೃತ್ತಿ ಜೀವನದೊಂದಿಗೆ ಮಾಡೆಲಿಂಗ್ ವೃತ್ತಿಯನ್ನು ಬೆರೆಸಬಾರದು ಎಂದು ಹೇಳಿದ್ದಾರೆ.

Leave A Reply