ವಿಶ್ವದಾಖಲೆ ನಿರ್ಮಿಸಿದ ‘ಬೇಬಿ ಶಾರ್ಕ್ ಡ್ಯಾನ್ಸ್’ ಯೂಟ್ಯೂಬ್ ವೀಡಿಯೋ !! | ಜಗತ್ತಿನ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು ವೀಕ್ಷಣೆ ಪಡೆದು ಜನಮನ್ನಣೆ ಗಳಿಸಿದೆ ಈ ವೀಡಿಯೋ

ಯೂಟ್ಯೂಬ್ ನಲ್ಲಿ ಅದೆಷ್ಟೋ ವೀಡಿಯೋಗಳು ಹೆಚ್ಚಿನ ವ್ಯೂವ್ಸ್ ಪಡೆದು ಜನಮನ್ನಣೆ ಗಳಿಸಿರುತ್ತವೆ. ಹೆಚ್ಚು ವೀಕ್ಷಣೆ ಪಡೆಯಲು ಒಂದಲ್ಲಾ ಒಂದು ವೀಡಿಯೋಗಳನ್ನು ಪ್ರಕಟಿಸುತ್ತಲೇ ಇರುತ್ತವೆ ಯುಟ್ಯೂಬ್ ಚಾನೆಲ್ ಗಳು. ಯೂಟ್ಯೂಬ್ ನಲ್ಲಿ ಹೆಚ್ಚಿನ ವೀಕ್ಷಣೆ ಪಡೆಯಲು ಜನರು ನಾನಾ ಕಸರತ್ತು ತಂತ್ರಗಳ ಮೊರೆ ಹೋಗುತ್ತಾರೆ. ವಿಶ್ವದಲ್ಲೇ 1000 ಕೋಟಿ (10 ಬಿಲಿಯನ್) ವ್ಯೂವ್ಸ್ ಪಡೆದ ಮೊದಲ ಯೂಟ್ಯೂಬ್ ವೀಡಿಯೊ ಎನ್ನುವ ದಾಖಲೆ ‘ಬೇಬಿ ಶಾರ್ಕ್ ಡ್ಯಾನ್ಸ್’ ಎನ್ನುವ ವೀಡಿಯೋಗೆ ಪ್ರಾಪ್ತವಾಗಿದೆ.

ಬೇಬಿ ಶಾರ್ಕ್ ಡ್ಯಾನ್ಸ್ ಮಕ್ಕಳ ವೀಡಿಯೊ ಎನ್ನುವುದು ಅಚ್ಚರಿಯ ಸಂಗತಿ. 2016ರಲ್ಲಿ ಕೊರಿಯಾದ ಮ್ಯೂಸಿಕ್ ಬ್ಯಾಂಡ್ ಪಿಂಕ್ ಫಾಂಗ್ ಮಕ್ಕಳಿಗಾಗಿ ಆಲ್ಬಂ ಹಾಡುಗಳನ್ನು ನಿರ್ಮಿಸಿತ್ತು. ಅದರಲ್ಲಿ ಒಂದು ಹಾಡು ‘ಬೇಬಿ ಶಾರ್ಕ್ ಡ್ಯಾನ್ಸ್’. ಜಗತ್ತಿನಾದ್ಯಂತ ಈ ಹಾಡು ವೈರಲ್ ಆಗಿ ಮೋಡಿ ಮಾಡಿತ್ತು.

ಜಗತ್ತಿನ ಒಟ್ಟು ಜನಸಂಖ್ಯೆ 7.8 ಬಿಲಿಯನ್, ಬೇಬಿ ಶಾರ್ಕ್ ಡ್ಯಾನ್ಸ್ ಆ ಸಂಖ್ಯೆಯನ್ನೂ ಮೀರಿಸಿದೆ ಎಂಬುದು ಬಹಳ ಅಚ್ಚರಿಯ ಸಂಗತಿಯೇ ಸರಿ. ಈಗಿನ ಕಾಲದ ಮಕ್ಕಳಂತೂ ಯೂಟ್ಯೂಬ್ ವೀಡಿಯೋ ನೋಡದೆ ಇರಲಾರರು. ಹಾಗಾಗಿ ಈಗಲೂ ಈ ಹಾಡು ಅದೆಷ್ಟೋ ಮಕ್ಕಳ ಫೇವರೆಟ್ ಹಾಡಾಗಿ ಹೊರಹೊಮ್ಮಿದೆ.

Leave A Reply

Your email address will not be published.