ಇನ್ನು ಮುಂದೆ ಜ.23ರಿಂದಲೇ ಆರಂಭವಾಗಲಿದೆ ಗಣರಾಜ್ಯೋತ್ಸವ ಆಚರಣೆ |ಇದಕ್ಕಿರುವ ಕಾರಣದ ಹಿಂದಿದೆ ಮಹತ್ವದ ನಿರ್ಧಾರ

ನವದೆಹಲಿ:ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಒಳಗೊಂಡಂತೆ ಈ ಬಾರಿಯ ಗಣರಾಜ್ಯೋತ್ಸವದ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು,ಈ ಬಾರಿ ಆಚರಣೆ ಜನವರಿ 23 ರಿಂದ ಪ್ರಾರಂಭವಾಗಲಿದೆ ಎಂದು ಸರ್ಕಾರಿ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಎಎನ್​ಐ ವರದಿ ಮಾಡಿದೆ.

ಪ್ರತಿ ವರ್ಷ ಗಣರಾಜ್ಯೋತ್ಸವ ಸಂಭ್ರಮಾಚರಣೆಯನ್ನು ಜನವರಿ 24ರಿಂದ ಆರಂಭಿಸಲಾಗುತ್ತಿತ್ತು. ಈ ಬಾರಿಯಿಂದ ಜನವರಿ 23ರಿಂದಲೇ ಆರಂಭವಾಗಲಿದೆ.ಗಣರಾಜ್ಯೋತ್ಸವದ ಆಚರಣೆಯಲ್ಲಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನೂ ಸೇರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

” ದೇಶದ ಇತಿಹಾಸ ಮತ್ತು ಸಂಸ್ಕೃತಿಯ ಪ್ರಮುಖ ಅಂಶಗಳನ್ನು ಸ್ಮರಿಸಲು ಮತ್ತು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳಲ್ಲಿ ಇದೂ ಒಂದಾಗಿದೆ” ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23ನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸಲು ಸರ್ಕಾರ ಪ್ರಾರಂಭಿಸಿತ್ತು.ಈ ಬಾರಿ ಸರ್ಕಾರವು ಅದನ್ನು ಗಣರಾಜ್ಯೋತ್ಸವ ಆಚರಣೆಯ ವೇಳಾಪಟ್ಟಿಗೆ ಸೇರಿಸಿದೆ. ಈ ಮೂಲಕ ವಿಶೇಷ ಗೌರವ ಸಲ್ಲಿಸಲಾಗುತ್ತದೆ.

ಮೋದಿ ಸರ್ಕಾರದ ಮಹತ್ವದ ನಿರ್ಧಾರಗಳು

ಆಗಸ್ಟ್ 14: ವಿಭಜನೆಯ ಭಯಾನಕ ಸ್ಮಾರಕ ದಿನ
ಅಕ್ಟೋಬರ್ 31 : ರಾಷ್ಟ್ರೀಯ ಏಕತಾ ದಿನ (ಸರ್ದಾರ್ ಪಟೇಲ್ ಅವರ ಜನ್ಮ ವಾರ್ಷಿಕೋತ್ಸವ)
ನವೆಂಬರ್ 15 : ಬುಡಕಟ್ಟು ಹೆಮ್ಮೆಯ ದಿನ (ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನ)
ನವೆಂಬರ್ 26 : ಸಂವಿಧಾನ ದಿನ
ಡಿಸೆಂಬರ್ 26 : ವೀರ್ ಬಾಲ್ ದಿವಸ್ (4 ಸಾಹಿಬ್ಜಾದಾಸ್‌ಗೆ ಗೌರವ)

Leave A Reply

Your email address will not be published.