ಸತ್ಯಸಾರಮಾನಿ “ಕಾನದ ಕಟದ” ಜನ್ಮಸ್ಥಾನದ ಶೋಧನಾ ಸಮಿತಿ ಪದಾಧಿಕಾರಿಗಳಿಂದ ಪಡುಮಲೆ ನಾಗಬ್ರಹ್ಮ, ದೇಯಿ ಬೈದ್ಯೇತಿ ಸಾನಿಧ್ಯಕ್ಕೆ ಭೇಟಿ

ಪುತ್ತೂರು : ತುಳುನಾಡಿನ ಕಾರಣಿಕದ ಅವಳಿ ವೀರರಾದ ಸತ್ಯಸಾರಮಾನಿ “ಕಾನದ ಕಟದ” ಜನ್ಮಸ್ಥಾನದ ಶೋಧನಾ ಸಮಿತಿ ಬಂಗಾಡಿ ಬೆಳ್ತಂಗಡಿ ಇದರ ಪದಾಧಿಕಾರಿಗಳ ನಿಯೋಗವು ಜ.14ರಂದು ಮಕರ ಸಂಕ್ರಮಣ ಪ್ರಯುಕ್ತ ಪಡುಮಲೆ ನಾಗಬೆರ್ಮೆರ್ ಸ್ಥಾನಕ್ಕೆ ಬಂದು ಸತ್ಯಸಾರಮಾನಿ ಕಾನದ ಕಟದರನ್ನು ಹಾಗೂ ಅವರ ತಾಯಿ ಬೊಲ್ಲೆಯವರನ್ನು ಬಾಲ್ಯದಲ್ಲಿ ತಾಯಿಯಾಗಿ ಸಾಕಿ ಸಲಹಿದ ತಾಯಿ ದೇಯಿ ಬೈದ್ಯೆದಿ ಹಾಗೂ ಕಾಂತನ ಬೈದರ ಮನೆಯಾದ ಏರಾಜೆ ಬರ್ಕೆಯ ಕರ್ಗಲ್ಲ ತೋಟ ಹಾಗೂ ತಾಯಿ ದೇಯಿ ಬೈದ್ಯೆದಿಯವರ ಸಾನ್ನಿಧ್ಯ ಹಾಗೂ ತುಳುನಾಡಿನ ಮೂಲ “ನಾಗ ಬೆರ್ಮೆರ “ಸಾನ್ನಿಧ್ಯಕ್ಕೆ ಆಗಮಿಸಿದರು .

ವೀರರ ತಾಯಿ ಬೊಲ್ಲೆಯ ಹೆರಿಗೆಯ ಸಂದರ್ಭಲ್ಲಿ ಅವರ ಸಹೋದರರಾದ ಪಾಂಬಲಜ್ಜಿಗ ಪೂಂಬಲ -ಕರಿಯದ ನಾಗಬೆರ್ಮೆರಿಗೆ ಹರಕೆ ಹೇಳಿದ್ದರು .


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆ ಹರಕೆಯ ಫಲಶ್ರುತಿಯಾಗಿ ಅವಳಿ ವೀರರು ಜನಿಸಿದ್ದು ಜನ್ಮ ಸ್ಥಾನ ಅಭಿವೃದ್ಧಿಗಾಗಿ ಕೆಲಸ ಮಾಡುವ ಶೋಧನಾ ಸಮಿತಿಯವರು ಕಾನದ ಕಾಟದರ ಹುಟ್ಟಿಗೆ ಮೂಲವಾದ ಪಡುಮಲೆಯ ನಾಗ ಬೆರ್ಮುರು ಹಾಗೂ ಸಾಕಿಸಲಹಿದ ತಾಯಿ ದೇಯಿಬೈದೆದಿ ಹಾಗೂ ಕಾಂತನ ಬೈದರ ಆಶೀರ್ವಾದ ಪಡೆಯಲು ಬಂದಿದ್ದು ಪೂಜೆ ಮಾಡಿ ಮುಂದಿನ ಕೆಲಸಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ಆಶೀರ್ವಾದ ಪಡೆದರು.

error: Content is protected !!
Scroll to Top
%d bloggers like this: