ಎಟಿಎಂ ದರೋಡೆ, ದರೋಡೆಕೋರನಿಂದ ಸುತ್ತಿಗೆಯಲ್ಲಿ ಪೆಟ್ಟು ತಿಂದರೂ, ಮಾಸ್ಕ್ ತೆಗೆಯುವಲ್ಲಿ ಸಫಲನಾದ ಸೆಕ್ಯುರಿಟಿ ಗಾರ್ಡ್

ಪಣಜಿ : ಎಟಿಎಂ ಗೆ ನುಗ್ಗಿ ದರೋಡೆ ನಡೆಸಲು ಮುಂದಾಗಿದ್ದ ಕಳ್ಳನನ್ನು ಹಿಡಿಯಲು ಹೋದ ಭದ್ರತಾ ಸಿಬ್ಬಂದಿ ತಲೆಗೆ ಸುತ್ತಿಗೆಯಿಂದ ಹೊಡೆದು ಹಲ್ಲೆ ಮಾಡಿ ಪರಾರಿಯಾದ ಘಟನೆ ಪಣಜಿಯಲ್ಲಿ ನಡೆದಿದೆ.

ಈ ದರೋಡೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಎಂಟಿಎಂ ನಲ್ಲಿ ನಡೆದಿದೆ. ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸುಮಾರು 40 ಸೆಕೆಂಡ್ ‌ನ ಈ ವೀಡಿಯೋದಲ್ಲಿ ದರೋಡೆ ಮಾಡಲೆಂದು ಬಂದ ವ್ಯಕ್ತಿ ಮಾಸ್ಕ್ ಹಾಕಿಕೊಂಡು ಎಟಿಎಂ ಗೆ ನುಗ್ಗಿದ್ದಾನೆ‌. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಆತನ ಮೇಲೆ ದಾಳಿ ಮಾಡಿದ್ದಾನೆ. ಪ್ರತಿಯಾಗಿ ದರೋಡೆಕೋರ ಸುತ್ತಿಗೆಯಿಂದ ಹೊಡೆದಿದ್ದಾನೆ. ಈ ವೇಳೆ ಅವರಿಬ್ಬರ ಮಧ್ಯೆ ಗುದ್ದಾಟ ನಡೆದು, ಸೆಕ್ಯೂರಿಟಿ ಗಾರ್ಡ್ ಆತನ ಮುಖದ ಮಾಸ್ಕ್ ತೆಗೆಯುವಲ್ಲಿ ಸಫಲನಾಗಿದ್ದಾನೆ.

ಅಲ್ಲದೇ ಆತನ ಕೈಯಲ್ಲಿದ್ದ ಸುತ್ತಿಗೆ ಎಳೆದುಕೊಳ್ಳಲು ಗಾರ್ಡ್ ಯತ್ನಿಸಿದ್ದಾನೆ. ಈ ಸಮಯದಲ್ಲಿ ದರೋಡೆಕೋರ ಸುತ್ತಿಗೆಯಿಂದ ಸೆಕ್ಯುರಿಟಿ ಗಾರ್ಡ್ ಮೇಲೆ ಹಲವು ಬಾರಿ ಹೊಡೆದಿದ್ದಾನೆ. ಪರಿಣಾಮ ಸೆಕ್ಯುರಿಟಿ ಗಾರ್ಡ್ ಕೆಳಗೆ ಬಿದ್ದಿದ್ದಾನೆ‌. ಆದರೂ ದರೋಡೆಕೋರನ ಮಾಸ್ಕ್ ತೆಗೆದಿದ್ದಾರೆ. ತನ್ನ ಮುಖದಲ್ಲಿರುವ ಮಾಸ್ಕ್ ಕಳಚಿ ಕೆಳಗೆ ಬೀಳುತ್ತಿದ್ದಂತೆ ದರೋಡೆಕೋರ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಘಟನೆಯ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top
%d bloggers like this: