ಕೊರೋನಾ ಲಸಿಕೆ ಹಾಕಿಸಿಕೊಳ್ಳದ ಕಾರಣ ತಂದೆಗೆ ಮಗುವಿನ ಭೇಟಿಗೆ ನಿರ್ಬಂಧ ವಿಧಿಸಿದ ಕೋರ್ಟ್ !!

ಇದೀಗ ಕೊರೋನಾ ಲಸಿಕೆ ಪಡೆದುಕೊಳ್ಳುವುದು ಪ್ರಪಂಚದಾತ್ಯಂತ ಕಡ್ಡಾಯವಾಗಿದೆ. ಅದಲ್ಲದೆ ಈಗಾಗಲೇ ಅದೆಷ್ಟೋ ದೇಶಗಳು ಸಂಪೂರ್ಣ ಲಸಿಕೆ ಪಡೆಯುವಲ್ಲಿ ಸಫಲವಾಗಿವೆ. ಹಾಗೆಯೇ ಲಸಿಕೆ ಪಡೆಯದವರಿಗೆ ಕೆಲವು ನಿರ್ಬಂಧಗಳನ್ನು ಕೂಡ ಕೆಲ ದೇಶಗಳು ಜಾರಿಗೆ ತಂದಿದ್ದು, ಕೊರೋನಾ ಲಸಿಕೆ ಹಾಕಿಸಿಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ತಂದೆಗೆ ತನ್ನ ಮಗುವಿನ ಭೇಟಿಗೆ ಕೋರ್ಟ್‌ ನಿರ್ಬಂಧಿಸಿದ ಘಟನೆ ಕೆನಡಾದಲ್ಲಿ ನಡೆದಿದೆ.

ಕೊರೋನಾ ಸಂದರ್ಭ ಆರೋಗ್ಯ ಕ್ರಮಗಳನ್ನು ಉಲ್ಲಂಘಿಸಿದರೆ ಮಗುವಿನ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಇದು ಮಗುವಿನ ಆರೋಗ್ಯ ದೃಷ್ಟಿಯಿಂದ ಉತ್ತಮವಲ್ಲ ಎಂದು ಕೋರ್ಟ್ ಹೇಳಿದೆ.

ರಜಾದಿನಗಳಲ್ಲಿ ನಿಗದಿಪಡಿಸಿದ್ದ ಭೇಟಿಯ ಸಮಯವನ್ನು ವಿಸ್ತರಿಸುವಂತೆ ತಂದೆ ವಿನಂತಿಸಿದ್ದು, ಅವರು ಲಸಿಕೆ ಹಾಕಿಸಿಕೊಂಡಿಲ್ಲ ಎನ್ನುವ ವಿಚಾರ ಬಹಿರಂಗವಾಗಿದೆ. ಈ ಕಾರಣದಿಂದ ಮಗುವಿನ ಭೇಟಿಗೆ ಕೋರ್ಟ್ ನಿರ್ಬಂಧ ವಿಧಿಸಿದೆ. ಕ್ವಿಬೆಕ್‌ನಲ್ಲಿ ಶೇ.90ರಷ್ಟು ಹೆಚ್ಚಿನ ವಯಸ್ಕರೂ ಕೊರೋನಾ ಲಸಿಕೆ ಪಡೆದಿದ್ದಾರೆ. ಇತ್ತೀಚಿನ ವಾರಗಳಲ್ಲಿ ಓಮ್ರಿಕಾನ್ ರೂಪಾಂತರ ವೇಗವಾಗಿ ಹರಡುತ್ತಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

Leave A Reply

Your email address will not be published.