‘ನಮ್ಮಮ್ಮ ಸೂಪರ್ ಸ್ಟಾರ್’ ಸ್ಪರ್ಧಿ ಬಾಲಕಿ ಸಮನ್ವಿ ದುರಂತ ಸಾವು : ‘ ನನ್ನನ್ನು ಕ್ಷಮಿಸು ಮಗಳೇ, ನಿನ್ನನ್ನು ಉಳಿಸಿಕೊಳ್ಳಲಾಗಲಿಲ್ಲ’ ಕಿಮ್ಸ್ ಆಸ್ಪತ್ರೆ ಮುಂದೆ ತಂದೆಯ ಭಾವುಕ ನುಡಿ

ಬೆಂಗಳೂರು : ಖಾಸಗಿ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Ad Widget

ತನ್ನ ಮುದ್ದಿನ ಮಗಳನ್ನು ಕಳೆದುಕೊಂಡ ತಂದೆ ರೂಪೇಶ್ ಕಿಮ್ಸ್ ಆಸ್ಪತ್ರೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

Ad Widget . . Ad Widget . Ad Widget . Ad Widget

Ad Widget

ನನ್ನನ್ನು ಕ್ಷಮಿಸು ಮಗಳೇ ನಿನ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.

Ad Widget
Ad Widget Ad Widget

ಖಾಸಗಿ ವಾಹಿನಿಯ ರಿಯಾಲಿಟಿ ಶೋ ‘ ನಮ್ಮಮ್ಮ ಸೂಪರ್ ಸ್ಟಾರ್’ ನಲ್ಲಿ ತನ್ನ ಮುದ್ದಾದ ಮಾತುಗಳಿಂದ ಮನೆ ಮಾತಾಗಿದ್ದ 6 ವರ್ಷದ ಬಾಲಕಿ ಸಮನ್ವಿ ನಿನ್ನೆ ನಡೆದ ಕೋಣನಕುಂಟೆ ಬಳಿ ನಡೆದ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾಳೆ.

ತಾಯಿ ಧಾರಾವಾಹಿ ನಟಿ ಅಮೃತ ನಾಯ್ಡು ಅವರ ಜೊತೆ ಗುರುವಾರ ಸಂಜೆ ಸಮನ್ವಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಈ ದುರಂತ ಸಂಭವಿಸಿದೆ.

ಈ ಅಪಘಾತದಲ್ಲಿ ಸಮನ್ವಿ ಸ್ಥಳದಲ್ಲೇ ಸಾವನ್ನು ಕಂಡರೆ, ತಾಯಿ ಅಮೃತಾ ನಾಯ್ಡು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಖ್ಯಾತ ಹರಿಕಥೆ ವಿದ್ವಾನ್ ಗುರುರಾಜುಲು ನಾಯ್ಡು ಅವರ ಮೊಮ್ಮಗಳಾಗಿದ್ದ ಸಮನ್ವಿಯ ದುರಂತ ಸಾವಿಗೆ ಕಿರುತೆರೆ ಹಾಗೂ ಚಿತ್ರರಂಗದ ಕಲಾವಿದರು ಕಣ್ಣೀರು ಹಾಕಿದ್ದಾರೆ.

ಅಮೃತಾ ನಾಯ್ಡು ಅವರ ಒಂದು ಮಗು ಈ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿತ್ತೆನ್ನಲಾಗಿದೆ. ಇದೀಗ ಇನ್ನೊಂದು ಮಗು ಅಪಘಾತದಲ್ಲಿ ತಾಯಿ ಕಣ್ಣೆದುರೇ ಸಾವನ್ನಪ್ಪಿರುವುದು ಕುಟುಂಬಕ್ಕೆ ದೊಡ್ಡ ನಷ್ಟವಾಗಿದೆ.

Leave a Reply

error: Content is protected !!
Scroll to Top
%d bloggers like this: