ಬೈಕ್ ಜಾಸ್ತಿ ಸೌಂಡ್ ಮಾಡಿದ್ರೂ ಬೀಳುತ್ತೆ ಕೇಸ್ !

ಮಹಾನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಅಂಥದ್ದರಲ್ಲಿ ವಿಪರೀತವಾಗಿ ಸದ್ದು ಮಾಡುವ ಮೋಟಾರ್ ಸೈಕಲ್‌ಗಳು ಮೊದಲೇ ಟ್ರಾಫಿಕ್ ಸಮಸ್ಯೆಯಿಂದ ರೋಸಿ ಹೋಗಿರುವ ಜನರಿಗೆ ಮತ್ತಷ್ಟು ಕಿರಿಕಿರಿ ಉಂಟಾಗುವಂತೆ ಮಾಡುವುದರಲ್ಲಿ ಸಂದೇಹವಿಲ್ಲ.

ಅಷ್ಟೆ ಅಲ್ಲದೆ, ಈ ಹೆಚ್ಚು ಸದ್ದು ಮಾಡುವ ಮೋಟಾರ್ ಸೈಕಲ್‌ಗಳು ಶಬ್ದ ಮಾಲಿನ್ಯವನ್ನು ಸಹ ಉಂಟು ಮಾಡುತ್ತವೆ. ಆದರೆ, ಇಂತಹ ಸಮಸ್ಯೆಯನ್ನು ನಿವಾರಿಸಲು ಫ್ರಾನ್ಸ್ ದೇಶದಲ್ಲಿ ಪ್ರಪ್ರಥಮ ಬಾರಿಗೆ ‘ನಾಯ್ಡ್ ಕ್ಯಾಮೆರಾ’ಗಳನ್ನು ಅಳವಡಿಸಲಾಗಿದೆ.

ಜನವರಿ 4 ರಂದು ಅಧಿಕೃತವಾಗಿ ಈ ಕ್ಯಾಮೆರಾಗಳ ಕಾರ್ಯಚರಣೆಗೆ ಚಾಲನ ನೀಡಲಾಯಿತು. ಪ್ಯಾರಿಸ್ ನಗರದ ಪಶ್ಚಿಮ ಭಾಗದ ಸೆಂಟ್ ಲ್ಯಾಂಬರ್ಟ್ ಡೇಮ್ಸ್ ಬೊಯಿಸ್ ಪ್ರದೇಶದಲ್ಲಿ ಕ್ಯಾಮೆರಾಗಳನ್ನು ಉದ್ಘಾಟಿಸಲಾಯಿತೆಂದು ವರದಿಯಾಗಿದೆ.

ಈ ಕ್ಯಾಮೆರಾಗಳ ಸಹಾಯದಿಂದ ನಗರ ಪ್ರದೇಶದಲ್ಲಿ ಅನುಮತಿಸಲಾದ ಸದ್ದಿನ ಮಿತಿ ಮೀರಿ ಮೋಟಾರ್ ಸೈಕಲ್ ಚಲಾಯಿಸುವ ವ್ಯಕ್ತಿಗಳನ್ನು ನಿರಾಯಾಸವಾಗಿ ಪತ್ತೆ ಮಾಡಿ ಅವರ ಮೇಲೆ ಕ್ರಮ ಜರುಗಿಸಲಾಗುವುದೆಂದು ತಿಳಿಸಲಾಗಿದೆ.

Leave A Reply

Your email address will not be published.