ಭಾರತ್ ಮಾತಾ ಎನ್ನುವುದು ಅವೈಜ್ಞಾನಿಕ ಎಂದ ಎಐಎಂಐಎಂ ರಾಜ್ಯಾಧ್ಯಕ್ಷ !! | ಕಂಡ ಕಂಡವರನ್ನೆಲ್ಲಾ ತಾಯಿಯೆಂದು ಹೇಳಿದರೆ ದೇಶದ ಗತಿಯೇನು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಉಸ್ಮಾನ್ ಘನಿ

ದೇಶದ ಕುರಿತು ಕೆಲವೊಮ್ಮೆ ರಾಜಕೀಯ ನಾಯಕರು ತುಂಬಾ ಹಗುರವಾಗಿ ಮಾತನಾಡುತ್ತಾರೆ. ನಿಜವಾದ ದೇಶ ಭಕ್ತಿಯೆಂಬುದು ಅವರಲ್ಲಿ ಸ್ವಲ್ಪವೂ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ ಎಐಎಂಐಎಂ ರಾಜ್ಯಾಧ್ಯಕ್ಷನ ಈ ಹೇಳಿಕೆ.

ಹೌದು, ಭಾರತ್‌ ಮಾತಾ ಎನ್ನುವುದು ಅವೈಜ್ಞಾನಿಕ ಎಂದು ಎಐಎಂಐಎಂ ರಾಜ್ಯಾಧ್ಯಕ್ಷ ಉಸ್ಮಾನ್‌ ಘನಿ ಹುಮ್ನಾಬಾದ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆಯ ಇಳಕಲ್‌ನಲ್ಲಿ ಭಾಷಣ ಮಾಡುವಾಗ, ಒಂದು ಮಗುವಿಗೆ ಜನ್ಮ ಕೊಡಲು ಎಷ್ಟು ತಾಯಂದಿರು ಬೇಕು? ಒಬ್ಬರು ತಾಯಿ ಸಾಕಲ್ವಾ? ಹೀಗಿದ್ಮೇಲೆ ಭಾರತ ಮಾತಾ, ಗಂಗಾಮಾತಾ, ಗೋಮಾತಾ, ಎಲ್ಲಿಂದ ಬರ್ತಾರೆ ಎಂದು ಪ್ರಶ್ನಿಸಿದ್ದಾರೆ.

ಕಂಡ ಕಂಡವರನ್ನು ತಾಯಿ ಎನ್ನುತ್ತಾ ಹೋದರೆ ಮುಂದೆ ದೇಶದ ಗತಿ ಏನು ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಉಸ್ಮಾನ್‌ ಘನಿ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅವರಿಗೆ ದೇಶದ್ರೋಹದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಗಳು ಕೇಳಲು ಕೇಳಿಬರುತ್ತಿದೆ.

Leave A Reply

Your email address will not be published.