ಕಳುವಾಗಿದ್ದ ವಸ್ತುಗಳು ಸಿಕ್ಕರೂ ಪೊಲೀಸರು ಕೊಡಲಿಲ್ಲ! ವಸ್ತುಗಳನ್ನು ಮರಳಿ ಪಡೆಯಲು 22 ವರ್ಷಗಳ ಕಾನೂನು ಹೋರಾಟ ಮಾಡ ಬೇಕಾಯಿತು

ಮಾರ್ಗವಲ್ಲವೆಂಬುದಾಗಿ ಅಂದಾಜಿಸಲು ವಿಶ್ವಸಂಸ್ಥೆ 1998ರಲ್ಲಿ ಕಳುವಾಗಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುವನ್ನು 22 ವರ್ಷಗಳ ಕಾನೂನು ಹೋರಾಟದ ಬಳಿಕ ಪೊಲೀಸರಿಂದ ಪಡೆದಿರುವ ವಿಲಕ್ಷಣ ಘಟನೆಯೊಂದು ಮುಂಬೈಯಲ್ಲಿ ನಡೆದಿದೆ.

ಉತ್ಕೃಷ್ಟ ಫ್ಯಾಷನ್ ಬ್ಯಾಂಡ್ ಚರಗ್ ದಿನ್ ಮಾಲೀಕರಾದ ರಾಜು ದಾಸ್ವಾನಿ ಕುಟುಂಬ ತಮ್ಮ ಕಳುವಾಗಿರುವ ವಸ್ತುಗಳನ್ನು 22 ವರ್ಷಗಳ ಬಳಿಕ ವಾಪಸ್ ಪಡೆದಿದೆ.

ಆಗ 13 ಲಕ್ಷ ರೂಪಾಯಿ ಬೆಲೆ ಬಾಳುತ್ತಿದ್ದ ಈ ವಸ್ತುಗಳು ಈಗ ಎಂಟು ಕೋಟಿ ರೂಪಾಯಿ ಬೆಲೆ ಬಾಳುವುದಾಗಿ ಹೇಳಿದ್ದಾರೆ. 1998ರಲ್ಲಿ ಕಳ್ಳರು. ಮುಂಬೈನ ಕೋಲಾಬಾದಲ್ಲಿರುವ ರಾಜು ದಾಸ್ವಾನಿ ಮನೆಗೆ ಕನ್ನ ಹಾಕಿದ್ದರು.

ಸಶಸ್ತ್ರಗಳೊಂದಿಗೆ ಬಂದಿದ್ದ ಅವರು, ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದರು. ರಾಜು ದಾಸ್ವಾನಿ ಮತ್ತು ಅವರ ಪತ್ನಿಯನ್ನು ಕಟ್ಟಿ ಹಾಕಿದ್ದರು. ಅವರ ಮನೆಯಿಂದ 13 ಲಕ್ಷ ರೂಪಾಯಿ ಬೆಲೆ ಬಾಳುವ ಇನ್ನಾಭರಣಗಳನ್ನು ಲೂಟಿ ಮಾಡಿದ್ದರು.

ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತು. ಸ್ವಲ್ಪ ದಿನಗಳಲ್ಲಿಯೇ ಮೂವರು ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ ಚಿನ್ನಾಭರಣಗಳ ಒಂದು ಭಾಗವನ್ನು ವಶಪಡಿಸಿಕೊಂಡಿದ್ದರು.

ಪೊಲೀಸರ ಬಳಿ ಇರುವ ತಮ್ಮ ಸಂಪತ್ತನ್ನು ತಮಗೆ ಹಿಂದಿರುಗಿಸುವಂತೆ ರಾಜು ದೇಸ್ವಾನಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ನಡುವೆ 2007ರಲ್ಲಿ ಅವರು ಮೃತಪಟ್ಟರು. ಆದರೂ ಅವರ ಕುಟುಂಬಸ್ಥರು ಕೋರ್ಟ್‌ನಲ್ಲಿ ಮೊಕದ್ದಮೆಯನ್ನು ಮುಂದುವರೆಸಿ, ಕೇಸ್ ಗೆದ್ದರು.

ಇದೀಗ ಕೋರ್ಟ್ ಸಂಪತ್ತನ್ನು ಹಿಂದಿರುಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ. ಆಗ 13 ಲಕ್ಷ ರೂ ಬೆಲೆ ಬಾಳುತ್ತಿದ್ದ ಸಂಪತ್ತು ಇದೀಗ 8 ಕೋಟಿ ರೂಪಾಯಿಗಳದ್ದಾಗಿದೆ.

Leave A Reply

Your email address will not be published.