ಅಮಾನುಷ ಘಟನೆ : ದೇಶ ಕಾಯುವ ಯೋಧನಿಂದ ಹೆತ್ತ ತಾಯಿಯ ಮೇಲೆ ನಿರಂತರ ಹಲ್ಲೆ

ಹರಿಪಾದ : ಯೋಧನೆಂದರೆ ನಮಗೆಲ್ಲಾ ಪೂಜ್ಯ ಭಾವನೆ. ನಾವೆಲ್ಲ ಇಂದು ನೆಮ್ಮದಿಯಾಗಿ ಇರೋಕೆ ಈ ಯೋಧರೇ ಕಾರಣ. ನಮಗೋಸ್ಕರ ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಅಂತದರಲ್ಲಿ ಇಲೊಬ್ಬ ಯೋಧ ತಾಯಿ ಅಂತಾನೂ ನೋಡದೇ ಮನಸೋ ಇಚ್ಛೆ ಥಳಿಸೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೇರಳದ ಹರಿಪಾದ ಎಂಬ ನಿವಾಸಿಯಾಗಿರುವ ಯೋಧ ಅಲಕೊಟ್ಟಿಲ್ ಸುಬೋಧ್ ( 37) ಎಂಬುವವನೇ ಈ ಕುಕೃತ್ಯ ಮಾಡಿದವನಾಗಿದ್ದು,ತನ್ನ 69 ವರ್ಷದ ತಾಯಿಯ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ.ತಾಯಿಯನ್ನು ಎಳೆದಾಡಿ, ಆಕೆಯನ್ನು ಕೆಳಕ್ಕೆ ನೂಕಿ, ಕಾಲಿನಿಂದ ಒದ್ದು, ಕೆಟ್ಟ ಬೈಗುಳಗಳಿಂದ ನಿಂದಿಸುತ್ತಿರುವ ದೃಶ್ಯ ವೈರಲ್ ಆಗಿದೆ.ಈ ಘಟನೆ ಬುಧವಾರ ( ಜ.12) ನಡೆದಿದ್ದು,ಆರೋಪಿ ಸುಬೋಧ್ ಮದ್ಯದ ಅಮಲಿನಲ್ಲಿ ಈ ದುಷ್ಕೃತ್ಯ ಎಸಗಿದ್ದಾನೆ.

ಎಷ್ಟೇ ಆದರೂ ತಾಯಿ ಕರುಳು ಅಲ್ಲವೇ? ಮಗ ಜೈಲಿಗೆ ಹೋದರೆ ಹೇಗೆ ತಾನೇ ಸಹಿಸಿಕೊಳ್ಳುತ್ತೇ ಆ ಜೀವ. ಪೊಲೀಸರು ಬಂದಾಗಲೂ ಆ ಹೆತ್ತ ತಾಯಿ ಆತನನ್ನು ಅರೆಸ್ಟ್ ಮಾಡಬೇಡಿ, ಆತನ ಕೆಲಸಕ್ಕೆ ತೊಂದರೆ ಆಗುತ್ತೆ ಎಂದು ಗೋಗೆರೆದಿದ್ದಾಳೆ. ಮಗನ ವಿರುದ್ಧ ದೂರು ನೀಡಲು ಹಿಂದೇಟು ಹಾಕಿದ್ದಾರೆ. ಮಗನನ್ನು ಕರೆದುಕೊಂಡು ಹೋದರೆ ನಾನು ಕೂಡಾ ಜೊತೆಗೇ ಬರುತ್ತೇನೆಂದು ಹೇಳಿದ್ದಾಳೆ.ಆದರೆ ತಾಯಿಗೆ ಹಲ್ಲೆ ಮಾಡಿದ ಈ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಟ್ರೇಡ್ ಮ್ಯಾನ್ ಆಗಿರುವ ಸುಬೋಧ್ ಮೂರು ದಿನಗಳ ಹಿಂದಷ್ಟೇ ರಜೆಯ ನಿಮಿತ್ತ ಊರಿಗೆ ಬಂದಿದ್ದ. ಈತ ಈ ಹಿಂದೆ ಕೂಡಾ ಕಾರ್ತಿಕಪಲ್ಲಿ ಜಂಕ್ಷನ್ ನಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಕ್ಕಾಗಿ ಬಂಧಿಸಲಾಗಿತ್ತು.ಇದೀಗ ಮತ್ತೊಮ್ಮೆ ಪೊಲೀಸ್ ಅತಿಥಿ!

Leave A Reply