ಪ್ಯಾಂಟ್ ಮೇಲೆ ಕೆಸರೆರೆಸಿದವನ ಕೈಯಿಂದಲೇ ಕ್ಲೀನ್ ಮಾಡಿಸಿಕೊಂಡ ಲೇಡಿ ಪೊಲೀಸ್ |ಕ್ಲೀನ್ ಮಾಡಿ ಮೇಲೇಳುತ್ತಿದ್ದಂತೆಯೇ ವ್ಯಕ್ತಿಗೆ ಚಟಾರನೆ ಕಪಾಳಮೋಕ್ಷ !!

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಹಾಗೆಯೇ ಇಲ್ಲಿ ಪ್ಯಾಂಟ್ ಮೇಲೆ ಕೆಸರೆರೆಚಿದವನ ಕೈಯಲ್ಲೇ ಕ್ಲೀನ್ ಮಾಡಿಸಿಕೊಂಡ ಮಹಿಳಾ ಪೊಲೀಸ್, ಆತನಿಗೆ ಕಪಾಳಮೋಕ್ಷ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Ad Widget

ವ್ಯಕ್ತಿಯೊಬ್ಬನು ತನ್ನ ಬೈಕ್ ಅನ್ನು ಹಿಂದೆ ತೆಗೆಯಬೇಕಾದಾಗ ಮಹಿಳಾ ಪೊಲೀಸ್ ಸಿಬ್ಬಂದಿಯ ಪ್ಯಾಂಟ್ ಮೇಲೆ ಕೆಸರು ಹಾರಿದೆ. ಅದಕ್ಕೆ ಪೊಲೀಸ್ ಕೋಪಗೊಂಡಿದ್ದು, ಕೆಸರು ಒರೆಸುವಂತೆ ಹೇಳಿದ್ದಾರೆ. ನಂತರ ಆ ವ್ಯಕ್ತಿ ಪ್ಯಾಂಟ್ ಮೇಲೆ ಬಿದ್ದಿದ್ದ ಕೆಸರನ್ನು ಒರೆಸಿ ಮೇಲೆಕ್ಕೆ ಎದ್ದ ತಕ್ಷಣ ಆ ಸಿಬ್ಬಂದಿ ಆತನ ಕಪಾಳಕ್ಕೆ ಹೊಡೆದು ಅಲ್ಲಿಂದು ಹೊರಟು ಹೋಗಿದ್ದಾರೆ. ಈ ವೀಡಿಯೋವನ್ನು ದೂರದಿಂದ ಮೊಬೈಲ್ ನಲ್ಲಿ ಸೆರೆಹಿಡಿಯಾಲಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡಲಾಗಿದೆ.

Ad Widget . . Ad Widget . Ad Widget . Ad Widget

Ad Widget

ವೀಡಿಯೋವನ್ನು ಅನುರಾಗ್ ದ್ವಾರಿ ಟ್ವಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದು, ಮಧ್ಯಪ್ರದೇಶದ ರೇವಾದಲ್ಲಿ, ಸಿರ್ಮೌರ್ ಚೌಕ್ ಬಳಿ ಮಹಿಳಾ ಪೊಲೀಸ್ ಪ್ಯಾಂಟ್ ಅನ್ನು ಯುವಕ ಮೊದಲು ಸ್ವಚ್ಛಗೊಳಿಸಿದನು. ನಂತರ ಮಹಿಳಾ ಪೊಲೀಸ್ ಯುವಕನ ಮೇಲೆ ಬಲವಾಗಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
https://twitter.com/Anurag_Dwary/status/1481117517674283008?s=20

Ad Widget
Ad Widget Ad Widget

ಈ ವೀಡಿಯೋ ನೋಡಿದ ನೆಟ್ಟಿಗರು ಪೊಲೀಸ್ ಪ್ರತಿಕ್ರಿಯೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸ್ ಮಹಿಳೆ ತಲೆಗೆ ಬಿಳಿ ಸ್ಕಾರ್ಫ್ ಸುತ್ತಿಕೊಂಡಿದ್ದರಿಂದ ಮುಖ ಕಾಣುತ್ತಿಲ್ಲ. ಆದರೆ ಅವರು ಶಶಿಕಲಾ ಎಂದು ಗುರುತಿಸಲಾಗಿದ್ದು, ಗೃಹರಕ್ಷಕ ದಳದ ಕಾನ್‍ ಸ್ಟೇಬಲ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ವೀಡಿಯೋದಲ್ಲಿ ಪೊಲೀಸ್ ಮೇಲೆ ಮಣ್ಣು ಬಿದ್ದ ದೃಶ್ಯ ಸೆರೆಯಾಗಿಲ್ಲ. ಆದರೆ ನಂತರ ಯುವಕ ಪ್ಯಾಂಟ್ ಒರೆಸುತ್ತಿರುವುದು ಮಾತ್ರ ಸೆರೆಯಾಗಿದೆ. ಹಾಗಾಗಿ ಈ ಘಟನೆಯ ಹಿಂದಿರುವ ಕಾರಣದ ಕುರಿತು ಪೊಲೀಸರು ತನಿಖೆ ಮಾಡಬೇಕಾಗಿದೆ.

Leave a Reply

error: Content is protected !!
Scroll to Top
%d bloggers like this: